ಬಸ್‌ ತಡೆದು ವಿದ್ಯಾರ್ಥಿಗಳ ಪ್ರತಿಭಟನೆ

0
14
loading...

ಕನ್ನಡಮ್ಮ ಸುದ್ದಿ-ನಾಲತವಾಡ:ಕಳೆದ ಹಲವು ವರ್ಷಗಳಿಂದ ಸಮರ್ಪಕ ಹಾಗೂ ಸಕಾಲಕ್ಕೆ ಬಸ್‌ ಓಡಿಸುತ್ತಿಲ್ಲ ಮತ್ತು ಉದ್ದೇಬಿಹಾಳ ಘಟಕ ವ್ಯವಸ್ಥಾಪಕರು ವಿದ್ಯಾರ್ಥಿಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶಗೊಂಡ ಸ್ಥಳಿಯ ಬಸವೇಶ್ವರ ಪ್ರೌಢ ಶಾಲೆಯ ವಿದ್ಯಾರ್ಥಿಗಳು ದಿಢಿರ್‌ ಬೀದಿಗಿಳಿದು ಆಗಮಿಸಿದ ಬಸ್‌ವೊಂದನ್ನು ತಡೆದು ಪ್ರತಿಭಟಿಸಿದ ಘಟನೆ ಪಟ್ಟಣದಲ್ಲಿ ಮಂಗಳವಾರ ಸಂಜೆ ನೆಡೆಯಿತು.
ಪಟ್ಟಣದ ವೀರೇಶ್ವರ, ಬಸವೇಶ್ವರ, ಐಟಿಐ ಇತರೇ ಕೋರ್ಸುಗಳ ನಿತ್ಯ ಸುಮಾರು 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಿಜ್ಜೂರ, ಸುಲ್ತಾನಪೂರ, ಖಾನೀಕೇರಿ, ಅಯ್ಯನಗುಡಿ, ಚಿಕ್ಕಬಿಜ್ಜೂರ, ಲೊಟಗೇರಿ, ಘಾಳಪೂಜಿ, ನಾಗಬೇನಾಳ, ವೀರೇಶನಗರ, ಜೈನಾಪೂರ, ಕಿಲಾರಹಟ್ಟಿ ಹಾಗೂ ಆರೇಶಂಕರ ಗ್ರಾಮದಿಂದ ವಿದ್ಯಾರ್ಥಿಗಳು ಸಕಾಲ ಬಸ್‌ ವ್ಯವಸ್ಥೆಯಿಂದ ವಂಚಿತರಾಗಿದ್ದಾರೆ, ಶಾಲೆಯ ವೇಳೆಗೆ ಉದ್ದೇಶ ಪೂರ್ವಕವಾಗಿ ಬಸ್‌ಗಳನ್ನು ಓಡಿಸುತ್ತಿಲ್ಲ, ಕಾರಣ ನಾವು ಬಸ್‌ಪಾಸ್‌ ಗಳನ್ನು ಹೊಂದಿದ ಪರಿಣಾಮ ಚಾಲಕರು ಹಾಗೂ ನಿರ್ವಾಹಕರು ಶಾಲೆ ಬಿಟ್ಟ ನಂತರ ಉದ್ದೇಶಪೂರ್ವಕವಾಗಿ ತಡವಾಗಿ ಆಗಮಿಸುತ್ತಾರೆ ಎಂದು ದೂರಿದರು. ಅಭ್ಯಾಸಕ್ಕೆ ತೊಂದರೆ: ನಿತ್ಯ ಶಾಲೆಯ ಪಾಠ ಪ್ರವಚನಗಳ ಮನೆಯ ಸಿದ್ದತೆಗೆ ಸಮಯದ ಅಭಾವ ಕಾಡುತ್ತಿದೆ, ಸರಿಯಾದ ಸಮಯಕ್ಕೆ ಮನೆ ತಲುಪಲು ಸಕಾಲಕ್ಕೆ ಬಸ್‌ ಓಡಿಸುತ್ತಿಲ್ಲ ಈಗಾಗಿ ಅಭ್ಯಾಸಕ್ಕೂ ಕೂಡಾ ತೀವ್ರ ತೊಂದರೆಯಾಗುತ್ತಿದೆ ಎಂದು ವಿದ್ಯಾರ್ಥಿಗಳು ತಮ್ಮ ಸಂಕಷ್ಟವನ್ನು ತೋಡಿಕೊಂಡರು.
ಬೆಲೆ ಇಲ್ಲ: ಸಕಾಲಕ್ಕೆ ಬಸ್‌ ಓಡಿಸುವಂತೆ ಹಲವು ಬಾರಿ ಮನವಿ ಮಾಡಿಕೊಂಡರೂ ನಾಲತವಾಡ ಪಟ್ಟಣಕ್ಕೆ ಮುದ್ದೇಬಿಹಾಳ ಘಟಕ ಮಲತಾಯಿ ತೋರುತ್ತಿದೆ, ಹಲವಾರು ಬಾರಿ ಮಾದ್ಯಮದ ಮೂಲಕ ಹಾಗೂ ಶಾಲಾ ಮುಖ್ಯಸ್ಥರ ಮೂಲಕ ವಿದ್ಯಾರ್ಥಿಗಳ ಸಂಕಷ್ಟಕ್ಕೆ ಸ್ಪಂದಿಸಿ ಬಸ್‌ ಓಡಿಸಿ ಎಂದು ಗಮನಕ್ಕೆ ತಂದರೂ ವ್ಯವಸ್ಥಾಪಕರು ನೋಡೋಣ ಎನ್ನುವ ಧೋರಣೆ ತೋರುತ್ತಿದ್ದಾರೆ ಎಂದು ಆರೋಪಿಸಿದರು.
ಬಿಡದ ಪಟ್ಟು: ಶಾಲೆಯ ಬಿಟ್ಟ ನಂತರ ಸುದೀರ್ಘ ಕಾಲಹರಣ ಮಾಡುತ್ತಾ ಕುಳಿತ ವಿದ್ಯಾರ್ಥಿಗಳು ಆಗಮಿಸಿದ ಬಸ್‌ವೊಂದನ್ನು ತಡೆದು ಮತ್ತೊಂದು ಬಸ್‌ ಬರುವವರೆಗೂ ಸಂಚರಿಸಲು ಬಿಡಲಿಲ್ಲ, ಕೊನೆಗೂ ಮಣಿದ ಸ್ಥಳಿಯ ಸಾರಿಗೆ ನಿಯಂತ್ರಕರು ವಿದ್ಯಾರ್ಥಿಗಳಿಗೆ ಬೇರೆ ಬಸ್‌ ಓಡಿಸಿದ ನಂತರವೇ ತಡೆದ ಬಸ್‌ ಸಂಚರಿಸಲು ಅನುವು ಮಾಡಿಕೊಟ್ಟರು.
ಯುವಕರ ಸಾಥ್‌: ನಿತ್ಯ ಸಕಾಲ ಬಸ್‌ ಸೇವೆಯಿಂದ ವಂಚಿತಗೊಂಡು ಇಡೀ ಸಂಜೆಯವರೆಗೂ ಪಟ್ಟಣದಲ್ಲೇ ಕಾಲ ಕಳೆಯುತ್ತಿದ್ದುದನ್ನು ಗಮನಿಸಿದ ಸಾರಿಗೆ ನಿಯಂತ್ರಕರ ಕ್ರಮಕ್ಕೆ ಆಕ್ರೋಶಗೊಂಡು ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಸಾಥ್‌ ನೀಡಿದರು.

loading...