ಬಾಂಧಾರ ನಿರ್ಮಾಣ ಕಾಮಗಾರಿಗೆ ಶಾಸಕ ಐಹೊಳೆ ಚಾಲನೆ

0
33
loading...

ರಾಯಬಾಗ 29: ಚಿಂಚಲಿ ಪಟ್ಟಣದ ಹಾಲಹಳ್ಳಕ್ಕೆ ಬಾಂಧಾರ ನಿರ್ಮಾಣ ಮಾಡುವುದರಿಂದ ಹಳ್ಳದಲ್ಲಿ ನೀರು ನಿಲ್ಲುವುದರಿಂದ ಅಂತರ್ಜಲ ಮಟ್ಟ ಹೆಚ್ಚಾಗಿ ಸುತ್ತಮುತ್ತಲಿನ ಬಾವಿ, ಕೊಳವೆಬಾವಿಗಳು ಪುನಚ್ಚೇತನಗೋಳ್ಳುತ್ತವೆ. ಅಲ್ಲದೇ ಈ ಭಾಗದ ನೂರಾರು ಜನ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಿಕೊಟ್ಟಂತಾಗುತ್ತೆದೆ ಆದರಿಂದ ರೈತರು ಇದರ ಸುದುಪಯೋಗ ಪಡೆದುಕೊಳ್ಳಬೇಕೇಂದು ರಾಯಬಾಗ ಶಾಸಕ ಡಿ.ಎಂ ಐಹೊಳೆ ಹೇಳಿದರು.ತಾಲೂಕಿನ ಚಿಂಚಲಿ ಪಟ್ಟಣದ ಸಗರೆ ತೋಟದ ಹತ್ತಿರ ಹಾಲಹಳ್ಳಕ್ಕೆ ಸಣ್ಣ ನೀರಾವರಿ ಇಲಾಖೆಯಿಂದ ನಬಾರ್ಡ ಯೋಜನೆಯಡಿ ಸುಮಾರು 45 ಲಕ್ಷ ವೆಚ್ಚದಲ್ಲಿ ಬಾಂಧಾರ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಈ ಬಾಂಧಾರ ನಿರ್ಮಾಣದಿಂದ ಸುಮಾರು ನೂರು ಎಕರೆ ಭೂಮಿಗೆ ನೀರಾವರಿ ಸೌಲಭ್ಯದ ಅನೂಕೂಲವಾಗುತ್ತದೆ. ಇದಲ್ಲದೇ ಈ ಹಳ್ಳಕ್ಕೆ ಇನ್ನೊಂದು ಬಾಂಧಾರ ನಿರ್ಮಾಣದ ಬೇಡಿಕೆಯಿದ್ದು ಮುಂದಿನ ದಿನಗಳಲ್ಲಿ ಅದನ್ನು ನೇರವೆರಿಸಲಾಗುವುದೆಂದರು.ಈ ಸಂದರ್ಭದಲ್ಲಿ ನೀರಾವರಿ ಇಲಾಖೆ ಅಧಿಕಾರಿ ಆಯ್‌.ಎಸ್‌ ಹತ್ತಿ, ಪಟ್ಟಣ ಪಂಚಾಯತ ಉಪಾಧ್ಯಕ್ಷ ರಮೇಶ ಹಾರುಗೇರಿ, ಸದಸ್ಯರಾದ ಅಂಕುಶ ಜಾಧವ, ತುಕಾರಾಮ ಟೊಣ್ಣೆ, ರಾಜು ಶಿಂಧೆ, ಸಂಜು ಮೈಶಾಳೆ, ಹಾಗೂ ನಿಖೀಲ ಸಗರೆ, ಮಹೇಶ್ವರ ಕೊಂಬೆನ್ನವರ, ಸುನೀಲ ಸೌಂದಲಗಿ, ಸಿದ್ದು ಪಾತ್ರೂಟ, ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

loading...