ಬಾಲಕನ ಸಾವಿನ ಪ್ರಕರಣ: ಸಂಸ್ಥೆಯ ಮುಂಭಾಗದಲ್ಲಿ ಪ್ರತಿಭಟನೆ

0
23
loading...

ಕನ್ನಡಮ್ಮ ಸುದ್ದಿ-ಮೂಡಲಗಿ: ಸ್ಥಳೀಯ ಮೂಡಲಗಿ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ಶಾಲೆಯ ಒಂದನೇ ತರಗತಿ ವಿದ್ಯಾರ್ಥಿ ಹಣಮಂತ ವಸಂತ ಬಂಡಿವಡ್ಡರ(6) ಸಂಶಯಾಸ್ಪದ ಸಾವನ್ನಪ್ಪಿದ ಘಟನೆಯಿಂದ ಶುಕ್ರವಾರ ಮೃತ ಬಾಲಕನ ಸಂಬಂಧಿಕರು ಸಂಸ್ಥೆಯ ಮುಂಭಾಗದಲ್ಲಿ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು.
ಬುಧವಾರ ಶಾಲೆಯಿಂದ ಮರಳಿ ಮನೆಗೆ ಬಾರದ ಬಾಲಕ ಗುರುವಾರ ಶಾಲೆಯ ಆವರಣದ ಹಿಂದಿನ ಜವಳ ಪ್ರದೇಶದ ತಗ್ಗಿನ ನೀರಿನಲ್ಲಿ ಶವವಾಗಿ ದೊರೆತಿದ್ದು. ಈ ಸಾವು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು ಪಾಲಕರು ಕೊಲೆಯಾಗಿರಬಹುದು ಎಂದು ಆರೋಪಿಸಿ ಆರೋಪಿಗಳನ್ನು ಕೂಡಲೇ ಬಂಧಿಸಿ ನ್ಯಾಯಕೊಡಿಸಬೇಕು ಎಂದು ಪಟ್ಟು ಹಿಡಿದರು.

ಸ್ಥಳಕ್ಕೆ ಆಗಮಿಸಿದ ಹೋರಾಟ ಸಮಿತಿ ಸಂಚಾಲಕ ಭೀಮಪ್ಪ ಗಡಾದ ಪೋಷಕರಿಗೆ ಸಾಂತ್ವನ ಹೇಳುತ್ತ ಈ ಬಾಲಕನ ಸಾವು ನಮ್ಮ ಮನೆಯ ಮಗನಿದ್ದು ಅವನಿಗೆ ನ್ಯಾಯ ದೊರಕಿಸಿಕೊಡಲು ಮೂಡಲಗಿ ಹೋರಾಟ ಸಮೀತಿ ಸದಾ ಸಿದ್ದವಿದೆ. ಮರಣೋತ್ತರ ಪರೀಕ್ಷೆ ವರದಿಯನ್ನು ತೀರುಚುವ ಸಾಧ್ಯತೆಯಿದ್ದು ಪೋಲಿಸ ಇಲಾಖೆಯವರು ನಿಷ್ಪಾಕ್ಷಪಾತವಾಗಿ ತನಿಕೆ ನಡೆಸಬೇಕೆಂದು ಆಗ್ರಹಿಸಿದರು. ಹೋರಾಟ ಸಮೀತಿಯ ಎಸ್. ಆರ್. ಸೋನವಾಲ್ಕರ, ಬಿ.ಬಿ.ಹಂದಿಗುಂದ, ಅರವಿಂದ ದಳವಾಯಿ, ಲಕ್ಕಣ್ಣ ಸವಸುದ್ದಿ, ರಮೇಶ ಉಟಗಿ, ಮಾತನಾಡಿ, ಏರಡು ದಿನಗಳಲ್ಲಿ ಆರೋಪಿಯನ್ನು ಬಂಧಿಸದಿದ್ದರೆ ಆಧಿವೇಶನದಲ್ಲಿ ಈ ವಿಚಾರವನ್ನು ಗೃಹ ಮಂತ್ರಿ ಹಾಗೂ ಶಿಕ್ಷಣ ಇಲಾಖೆಯ ಸಚಿವರ ಗಮನಕ್ಕೆ ತಂದು ಜಿಲ್ಲೆಯಾದ್ಯಂತ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ನಂತರ ನಡೆದ ಸಂಧಾನ ಸಭೆಗೆ ಆಗಮೀಸಿದ ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮೃತ ಬಾಲಕನ ಕುಟುಂಬಕ್ಕೆ ಸಾಂತ್ವನ ಹೇಳಿ ಪೋಲಿಸ ಇಲಾಖೆಯಿಂದ ನಿಷ್ಪಾಕ್ಷಪಾತವಾಗಿ ತನಿಖೆ ನಡೆಸಲು ಅಧಿಕಾರಿಗಳಿಗೆ ಸೂಚಿಸಿ ಪ್ರತಿಭಟನೆ ಹಿಂಪಡೆಯಲು ವಿನಂತಿಸಿದ ನಂತರ ಪ್ರತಿಭಟನೆ ಕೈಬಿಡಲಾಯಿತು.

loading...