ಬಿ.ಎಲ್‌.ಡಿ.ಇ ವಿಶ್ವವಿದ್ಯಾಲಯ 5ನೇಯ ಘಟಿಕೋತ್ಸವ

0
24
loading...

ವಿಜಯಪುರ: ಅಪೌಷ್ಠಿಕತೆ, ಅಶುದ್ಧ ನೀರು, ನವಜಾತ ಶಿಶು ಮರಣ, ವಾಯು ಮಾಲಿನ್ಯ, ಅನಾರೋಗ್ಯಕ್ಕೆ ಮೂಲ ಕಾರಣಗಳಾಗಿದ್ದು, ಇವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸÀರ್ಕಾರ, ಸಮಾಜ ಮುಂದಾಗಬೇಕು ಎಂದು ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಮಂಜುನಾಥ ಹೇಳಿದರು.
ನಗರದ ಬಿ.ಎಲ್‌.ಡಿ.ಇ ಸಂಸ್ಥೆ ಗ್ರಂಥಾಲಯದ ಸಭಾಂಗಣದಲ್ಲಿ ಭಾನುವಾರ ನಡೆದ ಬಿ.ಎಲ್‌.ಡಿ.ಇ ವಿಶ್ವವಿದ್ಯಾಲಯ 5ನೇಯ ಘಟಿಕೋತ್ಸವದ ಪ್ರಧಾನ ಭಾಷಣ ಮಾಡಿದ ಅವರು, ಭಾರತದಲ್ಲಿ ಶೇ50 ಮರಣಗಳು ಸಾಂಕ್ರಾಮಿಕ ರೋಗಗಳಿಂದ, ಶೇ50 ಮರಣಗಳು ಅಸಾಂಕ್ರಾಮಿಕ ರೋಗಗಳಿಂದ ಬರುತ್ತಿದ್ದು, ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಹಲವಾರು ಮುನ್ನೆಚ್ಚರಿಕೆಗಳನ್ನು ವಹಿಸಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ಕಾಡುತ್ತಿರುವ ಡೆಂಗ್ಯೂದಂತಹ ಕಾಯಿಲೆಗಳನ್ನು ತಪ್ಪಿಸಲು ತೆಲಂಗಾಣದಲ್ಲಿ ಬಡವರಿಗೆ 26ಲಕ್ಷ ಸೊಳ್ಳೆ ಪರದೆಗಳನ್ನು ನೀಡಿದ್ದಾರೆ. ಅಸಾಂಕ್ರಾಮಿಕ ರೋಗಗಳು ನಮ್ಮ ಜೀವನ ಶೈಲಿಯಿಂದ ಉಂಟಾಗುವ ರೋಗಗಳಾದ ಹೃದಯಾಘಾತ, ರಕ್ತದೊತ್ತಡ, ಮದುಮೇಹ, ಪಾರ್ಶುವಾಯು, ಕ್ಯಾನ್ಸರ್‌ ಇಂದು ಮಾರಣಾಂತಿಕವಾಗಿ ಪರಿಣಮಿಸಿವೆ ಎಂದರು.
ಭಾರತದಲ್ಲಿ ಶೇ52 ದೈಹಿಕ ವ್ಯಾಯಾಮದ ಕೊರತೆಯಿಂದ ನರಳುತ್ತಿದ್ದು, ಇದರಲ್ಲಿ ಬಹುತೇಕರು 4-5ಗಂಟೆ ಟಿ.ವಿಗಳ ಮುಂದೆ ಧಾರವಾಹಿಯಲ್ಲಿ ಕಾಲ ಕಳೆಯುತ್ತಿದ್ದು ಇದು ಆರೋಗ್ಯದ ದೃಷ್ಠಿಯಿಂದ ಗಂಭೀರ ಸಮಸ್ಯೆಯಾಗಿದೆ ಎಂದರು.
ಬಿ.ಎಲ್‌.ಡಿ.ಇ ಅಧ್ಯಕ್ಷ ಹಾಗೂ ಜಲಸಂಪನ್ಮೂಲ ಸಚಿವ ಡಾ.ಎಂ.ಬಿ.ಪಾಟೀಲ ಅವರು, 5 ಬಂಗಾರದ ಪದಕ ಪಡೆದ ಡಾ.ಪರಿಮಿತ ಚೌಧರಿ, ಎರಡು ಬಂಗಾರದ ಪದಕ ಪಡೆದ ಡಾ.ವಿದ್ಯುಕ್ತ ಗೋಸ್ವಾಮಿ, ಡಾ.ಅಭಿಜ್ಞಾ, ಡಾ.ಶೃತಿ ಕೊಳ್ಳಿ, ಡಾ.ವಿಜಯ ಮಹಾಂತೇಶ, ಡಾ.ಅಸ್ಮಾ ಮಹಾಲ್ದಾರ ಇವರನ್ನು ಗೌರವಿಸಿದರು.
ಉಪಕುಲಪತಿ ಡಾ.ಎಮ್‌.ಎಸ್‌.ಬಿರಾದಾರ ಸ್ವಾಗತಿಸಿದರು, ಡಾ.ಎಸ್‌.ಎಸ್‌.ದೇವರಮನಿ, ಡಾ.ಬಿ.ಜಿ.ಮೂಲಿಮನಿ, ಆಡಳಿತ ಮಂಡಳಿ ಸದಸ್ಯರಾದ ಆನಂದಕುಮಾರ ದೇಸಾಯಿ, ಅಶೋಕ ವಾರದ, ಡಾ.ಗುಗ್ಗರಿ ಗೌಡರ, ಡಾ. ಜೆ.ಜಿ.ಅಂಬೇಕರ ಇದ್ದರು.

loading...