ಬುದ್ಧ-ಅಂಬೇಡ್ಕರ್‌ ಟ್ರಸ್ಟ್‌ ಉದ್ಘಾಟನೆ

0
25
loading...

ಹಳಿಯಾಳ: ಇಲ್ಲಿನ ಗುಡ್ನಾಪುರ ದೇಶಪಾಂಡೆ ನಗರ ವ್ಯಾಪ್ತಿಯಲ್ಲಿ ಅಸ್ತಿತ್ವಕ್ಕೆ ಬಂದಿರುವ ಬುದ್ಧ-ಅಂಬೇಡ್ಕರ್‌ ಸೋಶಿಯಲ್‌, ವೆಲಫೇರ್‌, ಚಾರಿಟೇಬಲ್‌ ಆಂಡ್‌ ಎಜ್ಯುಕೇಶನಲ್‌ ಟ್ರಸ್ಟ್‌ ಇದರ ಉದ್ಘಾಟನೆಯು ನ.17 ರಂದು ರಾತ್ರಿ ನೆರವೇರಿತು.
ಸಚಿವ ಆರ್‌.ವಿ. ದೇಶಪಾಂಡೆ ಅವರು ಟ್ರಸ್ಟ್‌ ಅನ್ನು ಉದ್ಘಾಟಿಸಿ ಜಮಾವಣೆಗೊಂಡಿದ್ದ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. ಸಂಸ್ಥೆಯು ನಿಯಮದಂತೆ ಜನಪರವಾಗಿ, ಕ್ರೀಯಾಶೀಲವಾಗಿ ಕಾರ್ಯನಿರ್ವಹಿಸುವಂತಾಗಲಿ ಎಂದು ಹೇಳಿದರು.
ಗುಡ್ನಾಪುರ ದೇಶಪಾಂಡೆ ನಗರ ನಿವಾಸಿಗಳ ಮನವಿಯನ್ನು ಆಲಿಸಿದ ಸಚಿವರು ವಸತಿ ರಹಿತರಿಗೆ ಆಶ್ರಯ ನೀಡಲು ನಿರ್ಮಾಣಗೊಂಡ ಈ ಪ್ರದೇಶದ ಅಭಿವೃದ್ಧಿಗೆ ಸಾಕಷ್ಟು ಕೆಲಸಗಳನ್ನು ಮಾಡಲಾಗಿದೆ. ಸರ್ಕಾರವು ಬಡಜನರ ಒಳಿತಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಇಲ್ಲಿನ ಜನರ ಬೇಡಿಕೆಯಂತೆ ಈ ಪ್ರದೇಶವನ್ನು ಸಿಟಿ ಸರ್ವೆ ವ್ಯಾಪ್ತಿಗೆ ಸೇರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಈ ಸಂದರ್ಭದಲ್ಲಿ ಭರವಸೆ ನೀಡಿದರು.
ಟ್ರಸ್ಟ್‌ನ ಅಧ್ಯಕ್ಷ ಹನುಮಂತ ಹರಿಜನ ಸ್ವಾಗತ ಮಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುರಸಭೆ ಅಧ್ಯಕ್ಷ ಉಮೇಶ ಬೋಳಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಾರ್ಡ್‌ ಸದಸ್ಯೆ ಮಂಜುಳಾ ಮಾನಗಾಂವಿ, ವಕೀಲರಾದ ಎ.ಪಿ. ಮುಜಾವರ, ಮೇಘರಾಜ ಮೇತ್ರಿ ಮೊದಲಾದವರು ವೇದಿಕೆಯಲ್ಲಿದ್ದರು.

loading...