ಭ್ರಷ್ಠಾಚಾರದ ವಿರುದ್ಧ ಹೋರಾಡಿ ದೇಶವನ್ನು ಭ್ರಷ್ಟಮುಕ್ತ ಮಾಡಿ: ಗಣಪತಿ

0
29
loading...

ಘಟಪ್ರಭಾ: ದೇಶಕ್ಕೆ ರೈತ ಮತ್ತು ಸೈನಿಕ ಎರಡು ಕಣ್ಣುಗಳಿದ್ದಂತೆ ಹಾಗೆಯೇ ಭ್ರಷ್ಠಾಚಾರದ ವಿರುದ್ಧ ಹೋರಾಡಲು ಪಂಚಾಯತಿ ಕಾವಲು ಸಮಿತಿ ಮತ್ತು ಯುವಶಕ್ತಿ ಎರಡು ಕಣ್ಣುಗಳಿದ್ದಂತೆ ಎಂದು ರೈತ ಮುಖಂಡ ಗಣಪತಿ ಇಳಿಗೇರ ಹೇಳಿದರು.
ಸಮೀಪದ ಅರಭಾವಿ ಗ್ರಾಮದಲ್ಲಿ ನೂತನವಾಗಿ ಪಂಚಾಯತ ಕಾವಲು ಸಮಿತಿ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಗಡಿಯಲ್ಲಿ ಸೈನಿಕರು ರಕ್ಷಣೆಗೆ ನಿಂತಿರುವಂತೆ ಈ ಪಂಚಾಯತಿ ಕಾವಲು ಸಮಿತಿಯವರು ಪಂಚಾಯತಿಯಲ್ಲಿ ನಡೆಯುವ ಅವ್ಯವಹಾರ ಮತ್ತು ಭ್ರಷ್ಠಾಚಾರ ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಸಮಾರಂಭದ ಸಾನಿಧ್ಯ ವಹಿಸಿದ್ದ ರಾಜಯೋಗಿನಿ ಬ್ರಹ್ಮಕುಮಾರಿ ಮೀರಾ ಅಕ್ಕನವರು ಮಾತನಾಡಿ, ಅಧರ್ಮ ಹೆಚ್ಚಾದಾಗ ಭಗವಂತನು ಅವತರಿಸಿ ಬರುವಂತೆ ಭ್ರಷ್ಠಾಚಾರ ಹೆಚ್ಚಾದಾಗ ಪಂಚಾಯತಿ ಕಾವಲು ಸಮಿತಿಯಂಥಹ ಸಂಘಟನೆಗಳು ಅವತರಿಸಿ ಬರುತ್ತವೆ. ಈ ಸಂಘಟನೆಯು ಸಮಾಜಮುಖಿ ಕಾರ್ಯಗಳನ್ನು ಮಾಡಿ ಪಟ್ಟಣವನ್ನು ಸುಂದರ ಮತ್ತು ಸ್ವಚ್ಛವಾಗಿಡಲು ಸಹಕರಿಸಬೇಕೆಂದು ಹೇಳಿದರು.
ಸಮಾರಂಭವನ್ನು ಶಿವಯ್ಯ ಮಹಾಸ್ವಾಮಿಜಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಶಿಕ್ಷಕ ರಾಮಚಂದ್ರ ಕಾಕಡೆ ಉಪನ್ಯಾಸ ನೀಡಿದರು.
ಪ.ಪಂ ಉಪಾಧ್ಯಕ್ಷ ರಮೇಶ ಮಾದರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಮೇಲೆ ಪ.ಪಂ ಅಧ್ಯಕ್ಷೆ ಪದ್ಮಾವತಿ ದೇವುಗೋಳ, ಬಿ.ವೈ.ಹಳ್ಳೂರ, ಅಂಬರೀಷ ಬನ್ನಕ್ಕಗೋಳ, ಕೃಷ್ಣಾ ಬಂಡಿವಡ್ಡರ, ರಾಯಪ್ಪ ಬಂಡಿವಡ್ಡರ, ಸಂತೋಷ ಮರಕುಂಬಿ, ಡಾ. ಜಗದೀಶ ಹೊಸಮನಿ, ಮುಖ್ಯಾಧಿಕಾರಿ ಕೆ ಬಿ. ಬೆಣ್ಣಿ, ಉಪತಹಶೀಲ್ದಾರ ಎಲ್‌ ಎಚ್‌. ಭೋವಿ, ಕಂದಾಯ ನಿರೀಕ್ಷಕ ಆರ್‌ ಐ. ನೇಸರಗಿ, ವಿಶ್ವನಾಥ ಹೊಸಮನಿ, ಡಿ ಜಿ. ಚಿಗರಿತೋಟ, ಮಹಾದೇವ ಗುಡಿತೋಟ, ಬಿ ಎಂ. ಮಾಳಗಿ, ಭೀಮಶಿ ಶಿಳ್ಳನ್ನವರ ಇದ್ದರು. ಸಮಿತಿಯ ಗೌರವಾಧ್ಯಕ್ಷ ಎಂ ವೈ. ಇಳಿಗೇರ ಸ್ವಾಗತಿಸಿ, ನಿರೂಪಿಸಿದರು.

loading...