ಮಕ್ಕಳಿಲ್ಲದ ದಂಪತಿಗಳಿಗೆ ಮಗುವನ್ನು ನೀಡುವದು ಪುಣ್ಯದ ಕೆಲಸ : ನಿತೀನ್ 

0
30
loading...

ಗದಗ: ಅನಾಥ ಮಕ್ಕಳನ್ನು ಸಂರಕ್ಷಿಸುವದರೊಂದಿಗೆ ಮಕ್ಕಳಿಲ್ಲದ ದಂಪತಿಗಳ ಮಡಿಲಿಗೆ ಮಗುವನ್ನು ನೀಡುವದು ಪುಣ್ಯದ ಕೆಲಸವಾಗಿದೆ. ಮಕ್ಕಳಿಲ್ಲದ ಕೊರಗಿನಲ್ಲಿರುವ ದಂಪತಿಗಳ ಮನೆ-ಮನ ಬೆಳಕಾಗಲಿ ಎಂದು ಗದುಗಿನ ಗಣ್ಯ ವರ್ತಕರಾದ ನಿತೀನ್ ಭೂಮರಡ್ಡಿ ಅಭಿಪ್ರಾಯಪಟ್ಟರು. ಅವರು ಬುಧವಾರ ಬೆಟಗೇರಿಯ ಸೇವಾಭಾರತಿ ಟ್ರಸ್ಟ (ರಿ)ನ ಅಮೂಲ್ಯ (ಪಿ) ವಿಶೇಷ ದತ್ತು ಸ್ವೀಕಾರ ಸಂಸ್ಥೆಯ ಗಂಡು ಮಗುವನ್ನು ದತ್ತು ಪೂರ್ವ ಪೋಷಕತ್ವಕ್ಕೆ ಹಾಸನದ ಮಕ್ಕಳಿಲ್ಲದ ದಂಪತಿಗಳ ಮಡಿಲಿಗೆ ಹಸ್ತಾಂತರಿಸಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಯಾವುದೇ ಆಡಂಬರವಿಲ್ಲದೆ ಸದ್ದುಗದ್ದಲವಿಲ್ಲದೆ ಸಾಮಾಜಿಕ ಕಾರ್ಯದಲ್ಲಿ ತೊಡಗಿರುವ ಅಮೂಲ್ಯ ವಿಶೇಷ ದತ್ತು ಸ್ವೀಕಾರ ಸಂಸ್ಥೆ ಇತರ ಅನಾಥ ಆಶ್ರಮಗಳಿಗೆ ಮಾದರಿಯಾಗಿದೆ ಎಂದರಲ್ಲದೆ ಬರಲಿರುವ ದಿನಗಳಲ್ಲಿ ಅಗತ್ಯಕ್ಕನುಗುಣವಾಗಿ ತಾವು ಸಹಾಯ ಸಹಕಾರ ನೀಡುವ ಭರವಸೆ ನೀಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶ್ರೀಮತಿ ಭಾರತಿ ಶೆಟ್ಟರ ಅವರು ಬಾಲ್ಯವಿವಾಹ ತಡೆಗಟ್ಟುವಿಕೆಯಲ್ಲಿ ಮುಂಚೂಣಿಯಲ್ಲಿ ಕಾರ್ಯ ಮಾಡಿ ಸರಕಾರದಿಂದ ಪ್ರಶಸ್ತಿ ಪಡೆದದ್ದಕ್ಕೆ ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿ ಅವರು ಅಮೂಲ್ಯವಾದ ಜೀವವನ್ನು ಯಾವುದೇ ಕಾರಣಕ್ಕೂ ದುರಂತದ ಅಂತ್ಯಕ್ಕೆ ಅವಕಾಶ ಕೊಡಬಾರದು ಈ ಹಿರಿದಾದ ಉದ್ದೇಶದಿಂದ ಅನಾಥ ಮಕ್ಕಳ ಅಮೂಲ್ಯವಾದ ಜೀವವನ್ನು ಸಂರಕ್ಷಿಸಲು ಮುಂದಾಗಿರುವ ಅಮೂಲ್ಯ ಸಂಸ್ಥೆಯ ಕಾರ್ಯ ನೀಜಕ್ಕೂ ಅಮೂಲ್ಯವಾದದ್ದು ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಸಿ.ಬಿ.ಚನ್ನಪ್ಪನವರ ಸಂಸ್ಥೆ ನಡೆದು ಬಂದ ದಾರಿ, ಮುಂದಿನ ಯೋಜನೆ ಗುರಿಗಳನ್ನು ವಿವರಿಸಿ ಸರ್ವರ ಸಹಕಾರ ಕೋರಿದರು. ವೇದಿಕೆಯ ಮೇಲೆ ಬಸವರಾಜ ನಾಗಲಾಪೂರ, ಶ್ರೀಮತಿ ನಾಗವೇಣಿ ಕಟ್ಟಿಮನಿ, ಶ್ರೀಮತಿ ಭೂಮರಡ್ಡಿ ಉಪಸ್ಥಿತರಿದ್ದರು. ಸುಭಾಸ ಬಬಲಾದಿ ಸ್ವಾಗತಿಸಿದರು, ಸಿ.ಎಸ್.ಬೊಮ್ಮನಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು ಗುರುಸಿದ್ದಪ್ಪ ಕೊಣ್ಣೂರ ನಿರೂಪಿಸಿದರು ಕೊನೆಗೆ ಪ್ರಲ್ಹಾದರಾಜ ಕಾರ್ಕಳ ವಂದಿಸಿದರು. ಸಮಾರಂಭದಲ್ಲಿ ಶ್ರೀಧರ ಉಡುಪಿ, ರಾಘವೇಂದ್ರ ಹಬೀಬ, ರವಿ ಹಡಪದ, ವಸಂತ ಸವದಿ, ಉಮಾ ಚನ್ನಪ್ಪನವರ, ಮಹಾದೇವಿ ಬಬಲಾದಿ, ಪಾರ್ವತಿ ಹಿರೇಮಠ, ಸುಶೀಲಾ ಬಡಿಗೇರ, ಸುವರ್ಣ ಬಾರಕೇರ, ನೀಲಮ್ಮ ರೊಟ್ಟಿ, ಚನ್ನಬಸಮ್ಮ ಕಬ್ಬಕ್ಕಿ, ಗಂಗಮ್ಮ ವೀಣೇಕರ, ಹನಮವ್ವ ಬಣಕಾರ ಮುಂತಾದವರಿದ್ದರು

loading...