ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕರ ಸರಣಿ ರಾಜೀನಾಮೆ

ಸಾಮಾಜಿಕ ಕಾರ್ಯಕರ್ತ ಹಬೀಬ್ ಶಿಲ್ಲೇದಾರ
ಸಾಮಾಜಿಕ ಕಾರ್ಯಕರ್ತ ಹಬೀಬ್ ಶಿಲ್ಲೇದಾರ
loading...

ಕನ್ನಡಮ್ಮ ಸುದ್ದಿ ಚನ್ನಮ್ಮ ಕಿತ್ತೂರು.

ಸಮೀಪದ ಎಂ.ಕೆ.ಹುಬ್ಬಳ್ಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನಡೆಯುತ್ತಿರುವ ನಿರ್ದೇಶಕರ ಸರಣಿ ರಾಜೀನಾಮೆ ನೀಡವುದು ರೈತರಗೆ ಆತಂಕವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಹಬೀಬ್ ಶಿಲ್ಲೇದಾರ ಹೇಳಿದರು. ಸಮೀಪದ ಅಂಬಡಗಟ್ಟಿ ಗ್ರಾಮದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜೀಮಾಮೆ ನಿಡುತ್ತಿರುವ ನಿರ್ದೇಶಕರು ರೈತರಿಗೆ ಯಾವುದೆ ಮಾಹಿತಿ ನಿಡದೇ ತಮ್ಮ ಜವಾಬ್ದಾರಿಯನ್ನು ಮರೆತು ಸರಣಿ ರಾಜೀನಾಮೆಗೆ ಮುಂದಾಗಿರುವ ಕೃತ್ಯ ರೈತರಿಗೆ ಮಾಡುವ ದ್ರೋಹವಾಗಿದೆ.  ತಮ್ಮ ಸ್ಥಾನದಿಂದ ಒಬ್ಬೊಬ್ಬರಾಗಿ  ರಾಜೀನಾಮೆ ನಿಡುತ್ತಿರುವುದು ರೈತರಿಗೆ ಅನುಮಾನ ಸೃಷ್ಠಿಮಾಡುತ್ತಿದೆ. ಕಾರಖಾನೆ ಹೆಸರಿನಲ್ಲಿ ಅಧಿಕಾರ ಅನುಭವಿಸಿ ಉನ್ನತ ಸ್ಥಾನ ಪಡೆದು ಸಹಕಾರ ರಂಗದಲ್ಲಿ ತನ್ನದೇ ಛಾಪು ಮೂಡಿಸಿದ್ದ ಕಾರ್ಖಾನೆಯ ಸದ್ಯದ ಪರಿಸ್ಥಿತಿ ಅದೋಗತಿಗೆ ಇಳಿದಿದೆ ಎಂದು ತಿಳಿದುಬಂದಿದ್ದು ರೈತರು ಜಾಗೃತರಾಗಿ ಮಲಪ್ರಭಾ ಸಕ್ಕರೆ ಕಾರ್ಖಾನೆಯನ್ನು ಉಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ ಎಂದರು. ಮಲಪ್ರಭಾ ಸಕ್ಕರೆ ಕಾರ್ಖಾನೆ ಹಲವಾರು ರಾಜಕಾರಣಿಗಳನ್ನು ಬೆಳಸಿದೆ. ಈ ಸಕ್ಕರೆ ಕಾರ್ಖಾನೆಯನ್ನು ನಂಬಿ ಅದೆಷ್ಟೋ ಕುಟುಂಬಗಳು ತಮ್ಮ ಜೀವನ ನಡೆಸುತ್ತಿವೆ. ಕಬ್ಬಿನ ಹಂಗಾಮಾ ಆರಂಭವಾಗಿರುವ ಈ ಸಮಯದಲ್ಲಿ ನಿರ್ದೇಶಕರ ರಾಜೀನಾಮೆ ಪರ್ವ ಆರಂಭಗೊಂಡಿರುವುದು ಬೇಸರ ತಂದಿದೆ. ರೈತರಿಗೆ ನ್ಯಾಯ ಒದಗಿಸಬೇಕಾದ ಆಡಳಿತ ಮಂಡಳಿ ಸದಸ್ಯರ ಈ ನಡೆಯಿಂದಾಗಿ ರೈತರು ಕಕ್ಕಾ ಬಿಕ್ಕಿಯಾಗಿದ್ದಾರೆ ಈ ಕೂಡಲೇ ಸಕ್ಕರೆ ಕಾರ್ಖಾನೆ ಸ್ಥಿತಿ ಗತಿಯ ಕುರಿತು ರೈತರಿಗೆ ಮಾಹಿತಿ ನೀಡುವ ಕಾರ್ಯ ನಡೆಯಬೇಕು. ಎಂದರು.

loading...