ಮುಂದಿನ ಬಾರಿ ಯಮಕನಮರಡಿ ಕ್ಷೇತ್ರ ಬಿಜೆಪಿ ಗೆಲುವು ನಿಶ್ಚಿತ

0
32
loading...

ಯಮಕನಮರಡಿ 21:ರಾಜ್ಯ ಕಾಂಗ್ರೆಸ ಸರಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ತೊಡಗಿದ್ದು ಎಲ್ಲ ಮಂತ್ರಿಗಳು ಹಣ ಮಾಡುವುದರಲ್ಲಿಯೆ ನಿರತರಾಗಿದ್ದು ಪರಿಣಾಮ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದರ ಜೊತೆಗೆ ಯಮಕನಮರಡಿಯಲ್ಲಿ ಬಿಜೆಪಿ ಗೆಲವು ನಿಶ್ಚಿತ ಎಂದು ಮಾಜಿ ಮುಖ್ಯಮುಂಖ್ಯಮಂತ್ರಿ ವಿಶ್ವಾಸ ವ್ಯಕ್ತ ಪಡಿಸಿದರು.
ಸೋಮವಾರ ತಾಲೂಕಿನ ಯಮಕನಮರಡಿ ಗ್ರಾಮಕ್ಕೆ ಆಗಮಿಸಿದ ನವಕರ್ನಾಟಕ ನಿರ್ಮಾಣಕ್ಕೆ ಪರಿವರ್ತನಾ ಯಾತ್ರೆ ರ್ಯಾಲಿ ಸಂಜೆ ಗ್ರಾಮದ ಸಿ ಎಸ್ ಇ ಶಾಲಾ ಮೈದಾನದಲ್ಲಿ ಏರ್ಪಡಿಸಿದ್ದ ಬಿಜೆಪಿ ಪರಿವರ್ತನಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಸ್ಥಳೀಯ ಶಾಸಕರು ಕ್ಷೇತ್ರದ ಪರಿಶಿಷ್ಟ ವರ್ಗದವರ ಸುಮಾರು 2 ಸಾವಿರ ಎಕರೆ ಭೂಮಿಯನ್ನ ಅಕ್ರಮವಾಗಿ ಕಬಳಿಸಿದ್ದಾರೆ ಎಂದು ಶಾಸಕ ಸತೀಶ ಜಾರಕಿಹೋಳಿ ಅವರ ವಿರುದ್ದ ಗಂಭೀರ ಆರೋಪ ಮಾಡಿದರು.ತಾವು ಅಧಿಕಾರದಲ್ಲಿಯಿದ್ದಾಗ ಬೆಳಗಾವಿ ಜಿಲ್ಲೆಗೆ ಸಾವಿರಾರು ರೂಪಾಯಿ ಹಣವನ್ನ ಅಭಿವೃದ್ದಿಗೆ ನೀಡಿರುವುದಾಗಿ ಹೇಳಿದರು.ಬರುವ ಚುನಾವಣೆಯಲ್ಲಿ ವಿದ್ಯಾವಂತನಾದ ಮಾರುತಿ ಅಸ್ಟಗಿಗೆ ಎಲ್ಲರೂ ಬೆಂಬಲ ನೀಡಿ ಯಮಕನಮರಡಿಯಲ್ಲಿ ಕಮಲವನ್ನ ಅರಳಿಸಬೇಕೆಂದರು.

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ರಮೇಶ ಜಿಗಜಿಣಗಿ,ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರಜಿ,ಜಗದೀಶ ಹಿರೇಮನಿ,ಶಾಸಕರಾದ ಉಮೇಶ ಕತ್ತಿ,ಚಿಕ್ಕೋಡಿ ಜಿಲ್ಲಾಧ್ಯಕ್ಷ ಶಶಿಕಾಂತ ನಾಯಿಕ,ಗ್ರಾಮಾಂತರ ಜಿಲ್ಲಾಧ್ಯಕ್ಷ ಈರಣ್ಣ ಕಡಾಡಿ,ಬ್ಲಾಕ ಅಧ್ಯಕ್ಷ ಶಶಿಕಾಂತ ಮಠಪತಿ,ಪ್ರಧಾನ ಕಾರ್ಯದರ್ಶಿ ಮಸೂಬಾ ಶೇಖನ್ನವರ,ಮುಖಂಡರಾದ ಪಿ.ಆರ್.ನಂದಗಾವಿ ಸಾವಿರಾರು ಬಿಜೆಪಿ ಕಾರ್ಯಕರ್ತರು

loading...