ಮೊದಲನೇ ದಿನವೇ ಆಘಾತ ಅನುಭವಿಸಿದ ಬಂಗಾಳ

0
27
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ನಗರದಲ್ಲಿ ನಡೆಯುತ್ತಿರುವ ನಾಯ್ಡು ಟ್ರೋಫಿಯ ಕರ್ನಾಟಕ ಮತ್ತು ಬಂಗಾಳ ಮಧ್ಯ ಪಂದ್ಯದಲ್ಲಿ ಮೊದಲ ದಿನವಾಗಿದ ಶುಕ್ರವಾರ ಬಂಗಾಳ ಬ್ಯಾಟಿಂಗ್ ನಡೆಸಿ ಮೊದಲನೇಯ ಇನಿಂಗ್ಸ್‍ನಲ್ಲಿ 4 ವಿಕೆಟ್ ನಷ್ಟಕ್ಕೆ 244 ರನ್ ಗಳಿಸಿದೆ.
ಟಾಸ್ ಗೆದ್ದ ಕರ್ನಾಟಕ ಮೊದಲು ಬಾಲಿಂಗ್ ಆಯ್ಕೆ ಮಾಡಿಕೊಂಡು ಬಂಗಾಳ ಬ್ಯಾಟಿಂಗ್ ನೀಡಿತ್ತು. ಮೊದಲ 8 ಓವರ್‍ನಲ್ಲಿ ಸಾರ್ವಕರ್, ಶಹಬಾಜ ಮತ್ತು ಖಾಜಿ 3 ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಗಿತ್ತು. ವಿಕೆಟ್ ಕಳೆದುಕೊಂಡು ಬಂಗಾಳ ಸಂಕಷ್ಟಕ್ಕೆ ಸಿಲುಕಿದ ಸಮಯದಲ್ಲಿ ಬಂಗಾಳಗೆ ಆಸರೆಯಾದ ಸುರಭಿ ಸಿಂಗ್ ಮತ್ತು ಚೌಧರಿ ಶತಕ ಆಟದೊಂದಿಗೆ ಬಂಗಾಳ 186 ರನ್ ಗಳಿಸಿತ್ತು. ಅಭಿನವ್ ಮನೋಹರ್‍ನ 64.5 ಓವರ್‍ನಲ್ಲಿ ಚೌಧರಿ ವಿಕೆಟ್‍ನೊಂದಿಗೆ ಮತ್ತೆ ಸಂಕಷ್ಟದಲ್ಲಿ ಸಿಲುಕಿತ್ತು.
ಸುರಭಿ ಸಿಂಗ್ ಮತ್ತು ಅಗ್ನಿವ ಪನ್ನಾ ನಾಟೌಟ್‍ನೊಂದಿಗೆ ಇವತ್ತಿಗೆ ಆಟವನ್ನು ಕಾಯ್ದುಕೊಂಡು 4 ವಿಕೆಟ್ ನಷ್ಟಕ್ಕೆ 244 ರನ್ ಗಳಿಸಿದೆ. ಕರ್ನಾಟಕ ಎಮ್. ಪ್ರಸಿದ್ಧ ಎರಡು ವಿಕೆಟ್, ವಿ.ವೈಶಾಖ ಮತ್ತು ಅಭಿನವ್ ಮನೋಹರ ತಲಾ ಒಂದು ವಿಕೆಟ್ ಪಡೆದುಕೊಂಡು ಬಂಗಾಳ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

loading...