ಯುವಕರ ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ಅಗತ್ಯ: ರೋಹಿತ ನೇಮಾ

0
33
loading...

ಚಿಕ್ಕೋಡಿ 23: ತಾಂತ್ರಿಕ ಶಿಕ್ಷಣ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ ಮುಂಬರುವ ದಿನಗಳಲ್ಲಿ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹಮ್ಮಿಕೊಳ್ಳಬೇಕಾದ ಅಗತ್ಯವಿದೆ ಎಂದು ಮನಿಪಾಲ ಸಿಟಿ ಆ್ಯಂಡ ಗ್ಲಾಡ್ಸ ಕಂಪನಿಯ ಇಂಜೀನಿಯರ್ ರೋಹಿತ ನೇಮಾ ಹೇಳಿದರು.ಇಲ್ಲಿನ ಕೆಎಲ್‍ಇ ಸಂಸ್ಥೆಯ ತಾಂತ್ರಿಕ ಮತ್ತು ಅಭಿಯಾಂತ್ರಿಕ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಯೋಜನೆಯಡಿ ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆಯ ಅವಿದ್ಯಾವಂತ ಯುವಕರಿಗೆ ಹಮ್ಮಿಕೊಂಡಿರುವ ಮೆಸನ ಜನರಲ್ ಕಟ್ಟಡ ನಿರ್ಮಾಣ ತರಬೇತಿ ಕೊರ್ಸನ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಈ ಮಹಾವಿದ್ಯಾಲಯದ ವತಿಯಿಂದ ಇಂಥಹ ಸಮಾಜಮುಖಿ ಕಾರ್ಯಗಳನ್ನು ಎರ್ಪಡಿಸಿರುವುದು ಶ್ಲಾಘನೀಯ ಎಂದರು.
ಅಧ್ಯಕ್ಷತೆವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಸಿದ್ದರಾಮಪ್ಪ ಇಟ್ಟಿ ಮಾತನಾಡಿ, ಈ ಭಾಗದ ಅವಿದ್ಯಾವಂತ ಯುವಕರ ಕೌಶಲ್ಯ ಅಭಿವೃದ್ಧಿಪಡಿಸಲು ಈ ಕೊರ್ಸನ್ನು ಹಮ್ಮಿಕೊಳ್ಳಲಾಗಿದೆ. ಈ ತರಬೇತಿಯಲ್ಲಿ ಪಡೆದ ಜ್ಞಾನವನ್ನು ಅರಿತುಕೊಂಡ ತಾವು ಕಡಿಮೆ ವಸ್ತುಗಳನ್ನು ಬಳಸಿ ಗುಣಮಟ್ಟದ ಕಟ್ಟಡಗಳನ್ನು ನಿರ್ಮಿಸುವತ್ತ ಕಾರ್ಯೋನ್ಮುಖರಾಗಬೇಕೆಂದು ಹೇಳಿದರು. ಈ ಯೋಜನೆಯಲ್ಲಿ 25 ಅವಿದ್ಯಾವಂತ ಯುವಕರು ತರಬೇತಿ ಪಡೆದುಕೊಂಡಿದ್ದಾರೆ. ಪ್ರೊ. ವಿವೇಕ ಪಾಟಿಲ ಸ್ವಾಗತಿಸಿದರು. ಪ್ರೋ. ವೀರಣ್ಣಾ ಮೋದಿ ವಂದಿಸಿದರು.

 

loading...