ರಸ್ತೆ ಅಪಘಾತ: ಮಹಿಳೆಗೆ ಗಂಭೀರಗಾಯ

0
20
loading...

ಬೆಳಗಾವಿ: ರಸ್ತೆ ಮೇಲೆ ಸಂಚರಿಸುವ ಪಾದಾಚಾರಿಗೆ ಬೈಕ್ ಡಿಕ್ಕಿಹೊಡೆದ ಪರಿಣಾಮ ಗಂಭೀರ ಗಾಯವಾದ ಘಟನೆ ಮಂಗಳವಾರ ನಡೆದಿದೆ.
ಸಾಂಬ್ರಾದ ಮಹಾತ್ಮಪುಲೆ ಗಲ್ಲಿಯ ಸಾವಿತ್ರಿ ಲಕ್ಷ್ಮಣ ಜೋಗಾನಿ (42) ಗಾಯಗೊಂಡ ಮಹಿಳೆ. ಮನೆಯಿಂದ ಜಮೀನಿಗೆ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುವ ಸಮಯದಲ್ಲಿ ಅದೇ ವೇಳೆಯಲ್ಲಿ ಬೆಳಗಾವಿಯಿಂದ ಅತಿವೇಗವಾಗಿ ಬರುವ ಬೈಕ್ ಸವಾರನು ನಿಯಂತ್ರಣ ತಪ್ಪಿ ಮಹಿಳೆಗೆ ಡಿಕ್ಕಿ ಹೊಡೆದಿದ್ದ ಪರಿಣಾಮ ಮಹಿಳೆಗೆ ತೆಲೆಗೆ, ಸೊಂಟಕ್ಕೆ ಬಲವಾದ ಪೆಟ್ಟು ಬಿದ್ದಿದೆ. ತಕ್ಷಣಾ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ. ಚಿಕಿತ್ಸೆ ಚಾಲ್ತಿಯಲ್ಲಿದೆ. ಈ ಕುರಿತು ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...