ರಾಜ್ಯದ ಖಜಾನೆ ಲೂಟಿ ಮಾಡಿ ಸಾಲದ ಹೊರೆ ನನ್ನ ಕೈಗೆ ನೀಡಲು ಮುಂದಾಗಿದ್ದಾರೆ

0
23
loading...

ಕನ್ನಡಮ್ಮ ಸುದ್ದಿ-ಕಾಗವಾಡ: ಉತ್ತರ ಕರ್ನಾಟಕದಲ್ಲಿ ನೀರಾವರಿಯೋಜನೆಗಳಿಗೆ ಆಧ್ಯತೆ ನೀಡದೆ ಪರ್ಸಂಟೆಜ್ ವ್ಯವಹಾರದಲ್ಲಿ ತೊಡಗಿರುವ ರಾಜ್ಯ ಸರಕಾರ ಹಿಂದೆಂದೂ ಕಂಡರಿಯಯದಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ. ಸಿದ್ದರಾಮಯ್ಯ ಮುಂದೆಂದೂ ಮುಖ್ಯಮಂತ್ರಿಯಾಗಲ್ಲ. ರಾಜ್ಯದ ಖಜಾನೆ ಲೂಟಿ ಮಾಡಿ, ಸಾಲದ ಹೊರೆಯನ್ನು ನನ್ನ ಕೈಗೆ ನೀಡಲು ಮುಂದಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯುರಪ್ಪ ವಾಗ್ದಾಳಿ ನಡೆಸಿದರು.
ಬಿಜೆಪಿ ಪರಿವರ್ತನಾ ಯಾತ್ರೆ ಅಂಗವಾಗಿ ಬುಧವಾರ ಕಾಗವಾಡ ಮತಕ್ಷೇತ್ರದ ಉಗಾರ ಖುರ್ದ ಪಟ್ಟಣದ ವಿಹಾರ ಕ್ರೀಡಾಂಗಣದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಭ್ರಷ್ಟ- ಬುರುಡೆ ಸರಕಾರ ಹೆತ್ತ ತಾಯಿಯೇ ಮಗುವಿಗೆ ವಿಷ ಕುಡಿಸಿದರೆ ಯಾರು ಮಗುವನ್ನು ರಕ್ಷಿಸಬೇಕು ಎಂದು ಪ್ರಶ್ನಿಸಿದರು. ಕೇಂದ್ರದಲ್ಲಿ ಅಧಿಕಾರ ನಡೆಸಿದ ಯುಪಿಎ ಸರಕಾರಧಿಕಾರದ ಕೊನೆಯ ಸಂದರ್ಭದಲ್ಲಿ ದೇಶದ ಖಜಾನೆ ಸಂಪೂರ್ಣ ಖಾಲಿ ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿಟ್ಟು ಕೊಟ್ಟಿತು. ಆದರೆ ಮೋದಿ ಅವರು ಕೇವಲ ಮುರು ವರ್ಷಗಳಲ್ಲಿ ದೇಶದ ಆರ್ಥಿಕತೆಯನ್ನು ಸುಧಾರಿಸಿ ಪ್ರಪಂಚವೇ ಅಚ್ಚರಿಪಡಿಸುವಂತೆ ಮಾಡಿದರು ಎಂದು ಶ್ಲಾಘಿಸಿದರು. ಅಮೇರಿಕಾದ ಅಧ್ಯಕ್ಷ ಟ್ರಂಪ್ ಅವರು ಭಾರತದ ಅರ್ಥ ವ್ಯವಸ್ಥೆ ಸುಧಾರಣೆಯ ಕುರಿತು ಶ್ಲಾಘಿಸಿದ್ದಾರೆ.

ಕೇಂದ್ರ ಸಚಿವರಾದ ರಮೇಶ ಜಿಗಜಿಣಗಿ, ರಾಜ್ಯಸಭಾ ಸದಸ್ಯ ಡಾಭಾಕರ ಕೋರೆ, ಶೋಭಾ ಕರಂದ್ಲಾಜೆ, ಮಾಜಿ ಸಚಿವ,ಅಥಣಿ ಶಾಸಕ ಲಕ್ಷ್ಮಣ ಸವದಿ, ರವಿಕುಮಾರ, ಮಾಜಿ ಸಂಸದ ರಮೇಶ ಕತ್ತಿ,ಜಿಲ್ಲಾ ಬಿಜೆಪಿ ಅಧ್ಯಕ್ಷ ಶಶಿಕಾಂತ ನಾಯಿಕ, ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಚಿದಾನಂದ ಸವದಿ, ಮಹಾರಾಷ್ಟ್ರ ರಾಜ್ಯ ಬಿಜೆಪಿ ಸ್ಟಾರ್ ಪ್ರಚಾರಕ ಗೋಪಿಚಂದ ಪಡೋಳಕರ, ಮಾತನಾಡಿದರು.ಶಾಸಕರಾದ ಮಹಾಂತೇಶ ಕವಟಗಿಮಠ, ದುರ್ಯೋದನ ಐಹೊಳೆ,ಪಿ.ರಾಜೀವ, ಪರಪ್ಪಣ್ಣ ಸವದಿ,ಅಮೀತ ಕೋರೆ, ಉಮೇಶರಾವ್ ಬಂಟೋಡಕರ,ಸುಶೀಲಕುಮಾರ ಪತ್ತಾರ, ಪವನಕುಮಾರ ಕತ್ತಿ,ಜ್ಯೋತಗೌಡ ಪಾಟೀಲ, ನಿಂಗಪ್ಪ ಖೋಕಲೆ, ಶಿವಗೌಡ ಕಾಗೆ,ಗಜಾನನ ಯರಂಡೋಲಿ,ಅಣ್ಣಾಸಾಹೇಬ ಪಾಟೀಲ,ಶೀತಲಗೌಡ ಪಾಟೀಲ, ಅಜೀತ ಚೌಗುಲೆ, ಶಿವಗೌಡ ಪಾರಶೆಟ್ಟಿ, ಎಸ.ಎಸ್.ಪಾಟೀಲ(ವಕೀಲರು)ಅಭಯಕುಮಾರ ಅಕಿವಾಟೆ,ಗುಳಪ್ಪ ಜತ್ತಿ, ಶಾಂತಿನಾಥ ನಂದೇಶ್ವರ, ವಿಶ್ವನಾಥ ಪೊಲಿಸಪಾಟೀಲ ಸೇರಿದಂತೆ ಅನೇಕ ರಾಜ್ಯ ಹಾಗೂ ಜಿಲ್ಲೆಯ ನಾಯಕರು ಇದ್ದರು. ಈ ಸಮಾರಂಭದಲ್ಲಿ 30 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಪಾಲ್ಗೊಂಡಿದ್ದರು. ಸಾವಿರಾರು ಕಾರ್ಯಕರ್ತರು ಬೈಕ್ ಮೂಲಕ ರ್ಯಾಲಿ ನಡೆಸಿದರು

loading...