ರಾಜ್ಯ ಸರಕಾರ ಹಗಲು ದರೋಡೆ ಮಾಡುತ್ತಿದೆ

0
13
loading...

ಕನ್ನಡಮ್ಮ ಸುದ್ದಿ-ರಾಮದುರ್ಗ: ಕರ್ನಾಟಕದ ಅಭಿವೃದ್ಧಿಗಾಗಿ ಕೇಂದ್ರ ಸರಕಾರ ಸಾವಿರಾರು ಕೋಟಿ ಅನುದಾನ ನೀಡುತ್ತಿದ್ದರು. ಅದನ್ನು ಯಾವ ಕೆಲಸಕ್ಕೆ ಬಳಕೆ ಮಾಡಿಕೊಳ್ಳಲಾಗಿದೆ ಎಂದು ಹೇಳದ ರಾಜ್ಯ ಸರಕಾರ ಹಗಲು ದರೋಡೆ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಎಂದು ಆರೋಪಿಸಿದರು.
ಪಟ್ಟಣ ಹೊರವಲಯದ ಪ್ರಗತಿ ಶಾಲೆಯ ಎದುರಿನ ಆವರಣದಲ್ಲಿ ಶನಿವಾರ ಹಮ್ಮಿಕೊಂಡ ಬಿಜೆಪಿ ಪರಿವರ್ತನಾ ಯಾತ್ರೆ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ರೈತರು ಹಾಗೂ ನೇಕಾರರು ಪರಿಶ್ರಮ ಜೀವಿಗಳು. ಅವರಿಗೆ ಸ್ವಾಭಿಮಾನಿ ಬದುಕು ಕಟ್ಟಿಕೊಳ್ಳಲು ವ್ಯವಸ್ಥೆ ಕಲ್ಪಿಸಬೇಕಿದೆ. ಉತ್ತಮ ವಿದ್ಯುತ್‌, ನದಿ ಜೋಡನೆ ಮೂಲಕ ನೀರಾವರಿ ಸೇರಿದಂತೆ ಇತರ ಸೌಲಭ್ಯಗಳನ್ನು ಕಲ್ಪಿಸುವದು ಸರಕಾರದ ಪ್ರಾಮಾಣಿಕ ಕೆಲಸವಾಗಿದೆ ಎಂದು ಹೇಳಿದರು.
ಕಳಾಸ ಬಂಡೂರಿ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿಲ್ಲ. ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯ ಕಾಂಗ್ರೆಸ್‌ ಮುಖಂಡರು ಮನವೊಲಿಸುವಂತೆ ಕೇಳಿಕೊಂಡರು ಅದಕ್ಕೆ ಮುಂದಾಗದೆ ಕೇಂದ್ರ ಸರಕಾರದ ಕಡೆಗೆ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ. ಅವರು ಕೇಳಲಿ ಬಿಡಲಿ ಒಂದು ತಿಂಗಳಲ್ಲಿ ಬಿಜೆಪಿ ನಿಯೋಗದೊಂದಿಗೆ ಗೋವಾ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿಗಳ ಮನವಲಿಸಿ 7.5 ಟಿ.ಎಂ.ಸಿ ನೀರು ಹರಿಸುವ ಆದೇಶದ ಪತ್ರವನ್ನು ತಂದೆ ತರುತ್ತೇನೆ ಎಂದು ಭರವಸೆ ನೀಡಿದರು.
ಕೇಂದ್ರ ರಸಗೊಬ್ಬರ ಸಚಿವ ಅನಂತಕುಮಾರ ಮಾತನಾಡಿ, ರೈತರಿಗೆ ಅನುಕೂಲ ಒದಗಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಫಸಲಭೀಮಾ ಯೋಜನೆ
ಜಾರಿಗೆ ತಂದು ವಿಮಾ ಕಂಪನಿಗಳನ್ನು ನೆಮಿಸುವ ಜವಾಬ್ದಾರಿ ರಾಜ್ಯ ಸರಕಾರಕ್ಕೆ ನೀಡಿ ಸರಕಾರವೇ ವಿಮಾ ಸಂಸ್ಥೆ ತೆರೆಯುವಂತೆ ಪ್ರಧಾನಿಯವರು ಸಲಹೆ ನೀಡಿದರು ರೈತರ ಕಳಾಜಿ ಮಾಡದ ರಾಜ್ಯ ಕಾಂಗ್ರೆಸ್‌ ಸರಕಾರ ಖಾಸಗಿ ಕಂಪನಿಗೆ ಗುತ್ತಿಗೆ ನೀಡಿ ಕಮಿಷನ್‌ ದಂದೆಗೆ ಮುಂದಾಗಿದೆ ಎಂದು ಆರೋಪಿಸಿದರು.
ಕೇಂದ್ರ ಕುಡಿಯುವ ನೀರು, ನೈರ್ಮಲ್ಯ ಸಚಿವ ರಮೇಶ ಜಿಗಜಿಣಗಿ ಮಾತನಾಡಿ, ಭಿನ್ನಾಭಿಪ್ರಾಯದಿಂದ ರಾಮದುರ್ಗದಲ್ಲಿ 10 ವರ್ಷ ಅಧಿಕಾರ ಕಳೆದುಕೊಂಡಿದೆ ಅಸಮಾದಾನ ಬಿಟ್ಟು ಆಕಾಂಕ್ಷಿಗಳು ಸಾಕಷ್ಟಿದ್ದರು ಪಕ್ಷ ಗುರ್ತಿಸುವ ಒಬ್ಬರನ್ನು ಕಾರಣ ಪಕ್ಷ ಹೇಳಿದ ವ್ಯಕ್ತಿಗಳನ್ನು ಗೆಲ್ಲಿಸುವಲ್ಲಿ ಎಲ್ಲ ಕಾರ್ಯಕರ್ತರು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.
ಧಾರವಾಡ ಸಂಸದ ಪ್ರಲ್ಹಾದ ಜೋಶಿ, ಬೆಳಗಾವಿ ಸಂಸದ ಸುರೇಶ ಅಂಗಡಿ, ವಿಧಾನ ಪರಿಷತ್ತ ಸದಸ್ಯರಾದ ಮಹಾಂತೇಶ ಕವಟಗಿಮಠ, ಅಶ್ವಥನಾರಾಯಣ ಮಾತನಾಡಿದರು. ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಸದೆ ಶೋಭಾ ಕರಂದ್ಲಾಜೆ, ಜಿಲ್ಲಾಧ್ಯಕ್ಷ, ಶಾಸಕ ವಿಶ್ವನಾಥ ಪಾಟೀಲ, ತಾಲೂಕಾಧ್ಯಕ್ಷ ತುಕಾರಾಮ ಬಲಕುಂದಿ, ಜಿಲ್ಲಾ ಉಪಾಧ್ಯಕ್ಷೆ ಮಂಜುಳಾ ದೇವರಡ್ಡಿ, ಶಾಸಕರಾದ ಉಮೆಶ ಕತ್ತಿ, ಲಕ್ಷ್ಮಣ ಸವದಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಜಗದೀಶ ಹಿರೇಮನಿ, ಮಾಜಿ ಜಿ.ಪಂ ಅಧ್ಯಕ್ಷ ಈರಣ್ಣಾ ಕಡಾಡಿ, ತಾಲೂಕಾ ಚುನಾವಣಾ ಉಸ್ತುವಾರಿ ಭಾರತಿ ಮಗದುಮ್‌, ತಾಲೂಕಾ, ಮುಖಂಡರಾದ ಪ್ರಶಾಂತಗೌಡ ಪಾಟೀಲ, ಕೆ.ವಿ.ಪಾಟೀಲ, ಟಿ.ರಾಜೇಶ, ಚಂದ್ರಕಾಂತ ಯತ್ನಟ್ಟಿ, ಜಿ.ಪಂ, ತಾ.ಪಂ ಹಾಗೂ ಪುರಸಭೆ ಸದಸ್ಯರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ರಮೆಶ ಪಂಚಕಟ್ಟಿವ್ಮಠ ಸ್ವಾಗತಿಸಿದರು. ಗಂಗಾಧರ ಬೋಸಲೆ ನಿರೂಪಿಸಿ, ವಂದಿಸಿದರು.

loading...