ರಾಷ್ಟ್ರಪತಿ ಟಿಪ್ಪು ಸುಲ್ತಾನ ಬಗ್ಗೆ ಪ್ರಶಂಸೆ ವ್ಯಪ್ತಪಡಿಸಿದ್ದಾರೆ: ಶಾಸಕ ಪಟ್ಟಣ

0
35
loading...

ಕನ್ನಡಮ್ಮ ಸುದ್ದಿ-ರಾಮದುರ್ಗ: ರಾಷ್ಟ್ರಪತಿಗಳೆ ಟಿಪ್ಪು ಸುಲ್ತಾನ ಬಗ್ಗೆ ಪ್ರಶಂಸೆ ವ್ಯಪ್ತಪಡಿಸಿದಾಗ ವಿರೋಧ ಪಕ್ಷದ ನಾಯಕರು ವಿನಾಕಾರಣ ಗೊಂದಲವುಂಟು ಮಾಡುವ ಕೆಲಸ ಮಾಡುತ್ತಿರುವದು ಸಮಂಜಸವಲ್ಲ ಎಂದು ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಹೇಳಿದರು.
ಸ್ಥಳೀಯ ಪಟೇಲ್‍ಭಾಷಾ ದರ್ಗಾದಾ ಆವರಣದಲ್ಲಿ ತಾಲೂಕಾ ಆಡಳಿತ ಹಾಗೂ ಮುಸ್ಲಿಂ ಸಮುದಾಯದ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡ ಟಿಪ್ಪು ಸುಲ್ತಾನ್ ಜಯಂತ್ಯೂತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಧಾರವಾಡದ ಡಾ. ಎಸ್ ಬಿ. ಜೋಗುರ ಟಿಪ್ಪು ಸುಲ್ತಾನ ಕುರಿತು ಉಪನ್ಯಾಸ ನೀಡಿದರು. ಚನ್ನಮಲ್ಲ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಜನಾಬಮುಪ್ತಿ ಜಹೂರಹ್ಮದ ಹಾಜಿ ಕುರಾನ್ ಪಠಣ ಮಾಡಿದರು. ಪುರಸಭೆ ಉಪಾಧ್ಯಕ್ಷೆ ಹಜರಾಬಿ ಬೆಣ್ಣಿ, ಸಮಾಜದ ಮುಖಂಡರಾದ ಅಬ್ದುಲವಾಹಿದ್ ಖಾಜಿ, ಪೈರೋಜಖಾನ್ ಪಠಾಣ, ಅಲ್ತಾಪ್ ಜಾಗಿರದಾರ, ಮೈತಾಬಲಿ ಸಿರಗಾಪೂರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ತಹಶೀಲ್ದಾರ ಆರ್‍ವಿ. ಕಟ್ಟಿ ಸ್ವಾಗತಿಸಿದರು. ವೈ ವಿ. ಮಳಲಿ ನಿರೂಪಿಸಿ, ವಂದಿಸಿದರು.

loading...