ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಶಿಪ್: ಸಾಕ್ಷಿ , ಸುಶೀಲ್ ಗೆ ಚಿನ್ನದ ಪದಕ

0
24
loading...

ಇಂದೋರ್: 2014 ರ ಗ್ಲ್ಯಾಸ್ಗೋ ಕಾಮನ್ವೆಲ್ತ್ ಕ್ರೀಡಾಕೂಟದ ನಂತರ ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್ ಅವರು ಇಂದೋರ್ ನಲ್ಲಿ ನಡೆದ ರಾಷ್ಟ್ರೀಯ ಕುಸ್ತಿ  ಚಾಂಪಿಯನ್ ಶಿಪ್ ಪುರುಷರ 74 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

ಸುಶೀಲ್ ಕುಮಾರ್ ಒಟ್ಟು ಎರಡು ನಿಮಿಷ ಮತ್ತು 33 ಸೆಕೆಂಡುಗಳ ಕಾಲ ಹೋರಾಟ ನಡೆಸಿ ಅಂತಿಮ ಸುತ್ತಿನಲ್ಲಿ ಜಯಶಾಲಿಗಳದರು.ಮೂರು ವರ್ಷಗಳ ಬಳಿಕ ಸುಶೀಲ್ ರಾಷ್ಟ್ರೀಯ ಮಟ್ಟದ ಚಿನ್ನದ ಪದಕ ಗಳಿಸಿಕೊಂಡಿದ್ದಾರೆ.

ಇದೇ ವೇಳೆ ಭಾರತದ ಏಕೈಕ ಮಹಿಳಾ ಒಲಿಂಪಿಕ್ ಪದಕ ವಿಜೇತ ಕುಸ್ತಿ ಪಟು ಸಾಕ್ಷಿ ಮಲಿಕ್ ಮತ್ತು ಇನ್ನೋರ್ವ ಕುಸ್ತಿ ಪಟುವಾದ ಗೀತಾ ಫೋಗಟ್ ಅವರು ಕ್ರಮವಾಗಿ 62 ಕೆಜಿ ಮತ್ತು 59 ಕೆಜಿ ವಿಭಾಗಗಳಲ್ಲಿ ಚಿನ್ನದ ಪದಕವನ್ನು ಗಳಿಸಿಕೊಂಡಿದ್ದಾರೆ

ಮಧ್ಯಪ್ರದೇಶ ಕುಸ್ತಿ ಅಸೋಸಿಯೇಷನ್ ಆಯೋಜಿಸಿದ್ದ 62ನೇ ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಶಿಪ್ ನ.15ರಿಂದ ಮೂರು ದಿನಗಳ ಕಾಲ ನಡೆಯಲಿದೆ.

loading...