ರೈತರನ್ನು ಕಡೆಗಣಿಸುತ್ತಿರುವ ಸರ್ಕಾರ: ಶ್ರೀಗಳು

0
21
loading...

ಕನ್ನಡಮ್ಮ ಸುದ್ದಿ-ರಾಮದುರ್ಗ: ರೈತರು ದೇಶದ ಬೆನ್ನೆಲುಬು ಎಂದು ಹೇಳುತ್ತಿರುವ ಸರ್ಕಾರಗಳು ಇಂದು ರೈತರಿಗಾಗಿ ಏನು ಮಾಡುತ್ತಿವೆ. ರೈತ ಕುಲವೇ ಇಡೀ ಜಗತ್ತಿಗೆ ಅನ್ನ ನೀಡುವ ಕಾಯಕ ಮಾಡುತ್ತಿದ್ದರೆ ಇಂದು ಅದೇ ಒಂದು ತುತ್ತು ಅನ್ನಕ್ಕಾಗಿ ರೈತ ಪರಿತಪಿಸುವ ಪರಿಸ್ಥಿತಿಗೆ ಬಂದಿದ್ದಾನೆಂದು ರೈತ ಸೇನೆಯ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ಇತ್ತೀಚೆಗೆ ತಾಲೂಕಿನ ಮುಳ್ಳೂರು ಗ್ರಾಮದ ಮಾರುತೇಶ್ವರ ದೇವಸ್ಥಾನದಲ್ಲಿ ರೈತ ಸೇನೆ ಕರ್ನಾಟಕದ ಗ್ರಾಮ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ಮಹಾದಾಯಿ ನದಿ ನೀರಿಗಾಗಿ 3 ವರ್ಷಗಳಿಂದ ನಿರಂತರ ಹೋರಾಟ ಮಾಡುತ್ತಾ ಬಂದಿದ್ದರೂ ರಾಜಕೀಯ ಪಕ್ಷಗಳು ತಮ್ಮ ಸ್ವಹಿತಾಸಕ್ತಿಗಾಗಿ ಈ ಹೋರಾಟವನ್ನು ಹತ್ತಿಕ್ಕುತ್ತಿರುವುದು ಖೇದಕರ ಸಂಗತಿ. ಇಲ್ಲಿಯ ವರೆಗೂ ಬರಿ ಭರವಸೆಗಳನ್ನು ನೀಡುತ್ತಾ ಹೊರಟಿದ್ದಾರೆ. ರೈತರು ಇಲ್ಲಿಯ ವರೆಗೂ ತಾಳ್ಮೆಯಿಂದಿದ್ದಾರೆ. ಇನ್ನು ಸಹಿಸಿಕೊಳ್ಳಲುವದಿಲ್ಲ ತಾವು ಭರಸವೆ ನೀಡಿದಂತೆ ಶೀಘ್ರ ಈ ಯೋಜನೆಯನ್ನು ಅನುಷ್ಠಾನಗೊಳಿಸಿದ್ದರೆ ಮುಂದಿನ ದಿನಗಳಲ್ಲಿ ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಮುಳ್ಳೂರ ಅನ್ನದಾನೇಶ್ವರಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ, ಪ್ರತಿ ಗ್ರಾಮದಲ್ಲಿ ರೈತರು ಸಂಘಟಿತರಾಗಬೇಕು. ಸಂಘಟಿತರಾದರೆ ಮಾತ್ರ ಸಮಸ್ಯೆಗಳಿಗೆ ಪರಿಹಾರ ಸಿಗಲು ಸಾಧ್ಯವಿದೆ. ವ್ಯಸನದಿಂದ ಮುಕ್ತರಾಗಿ ಸಂಘಟನೆಯಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು.
ಸಂಘದ ಜಿಲ್ಲಾ ಸಂಚಾಲಕ ಶಂಕರಗೌಡ ಪಾಟೀಲ, ತಾಲೂಕು ಅಧ್ಯಕ್ಷ ಎಚ್ ಎಸ್. ಪಾಟೀಲ, ಘಟಕದ ಅಧ್ಯಕ್ಷ ಚನ್ನಬಸಪ್ಪ ಅನವಾಲ, ಜಿಪಂ ಸದಸ್ಯ ರೇಣಪ್ಪ ಸೋಮಗೊಂಡ ಸಂಘಟನೆ ಕುರಿತು ಮಾತನಾಡಿದರು.

ಈ ಸಂದರ್ಭದಲ್ಲಿ ರೈತ ಮುಖಂಡರಾದ ಆನಂದ ಜಗತಾಪ, ಹನಮಂತಗೌಡ ಪಾಟೀಲ, ಹನಮಂತ ಕಮತರ, ಬಾಳಪ್ಪ ರಡರಟ್ಟಿ, ಮಾಯಪ್ಪ ಒಡೆಕನವರ, ಗಿರಿಯಪ್ಪ ಹಂಜಿ, ಬಾಳಪ್ಪ ಚುಂಚನೂರ, ಯಲ್ಲಪ್ಪ ಹಿರೇಕುಂಬಿ, ಹನಮಂತ ವಾರ್ತೆಪ್ಪನವರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಸಿದ್ದಪ್ಪ ನವಲಗುಂದ ಸ್ವಾಗತಿಸಿ, ವಂದಿಸಿದರು.

loading...