ರೈತರು ತಪ್ಪದೆ ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸಬೇಕು: ಮೂಗಿ

0
23
loading...

ಬೈಲಹೊಂಗಲ: ರಾಸುಗಳಿಗೆ ಬರುವ ಕಾಲು-ಬಾಯಿ ಜ್ವರ ರೋಗ ನಿಯಂತ್ರಣಕ್ಕಾಗಿ ಲಸಿಕೆಯಿಂದ ಮಾತ್ರ ಸಾಧ್ಯ. ಪ್ರತಿಯೊಬ್ಬ ರೈತರು ಚಾಚು ತಪ್ಪದೆ ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸಬೇಕು ಎಂದು ಪುರಸಭೆ ಅಧ್ಯಕ್ಷ ರಾಜಶೇಖರ ಮೂಗಿ ಹೇಳಿದರು.
ಇತ್ತೀಚೆಗೆ ಪಟ್ಟಣದ ಪಶು ಆಸ್ಪತ್ರೆಯಲ್ಲಿ ನಡೆದ ಪಶು ಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆ, ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಕಾಲುಬಾಯಿ ರೋಗಗಳ ನಿಯಂತ್ರಣ ಕುರಿತು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯಾವುದೇ ಪಶು, ಪ್ರಾಣಿಗಳಿಗೆ ರೋಗ ಬಾರದಂತೆ ತಡೆಯಬೇಕು. ಇಲಾಖೆಯ ಸಹಕಾರದಲ್ಲಿ ಕಾಲು ಬಾಯಿ ರೋಗ ತಡೆಯುವ ಕೆಲಸ ಆಗುತ್ತಿದೆ. ಈ ಯೋಜನೆಯನ್ನು ರೈತಾಪಿ ವರ್ಗದವರು ಸದುಪಯೋಗಪಡಿಸಿಕೊಳ್ಳಬೇಕೆಂದರು.ಪಶು ಇಲಾಖೆಯ ಡಾ. ಕೊಲ್ಹಾರ ಮಾತನಾಡಿ, ಲಸಿಕೆ ಹಾಕುವುದರಿಂದ ಜಾನುವಾರುಗಳಲ್ಲಿ ರೋಗ ನಿರೊಧಕ ಶಕ್ತಿ ಉತ್ಪತ್ತಿಯಾಗಿ ಆರೋಗ್ಯಕರವಾಗಿರಲು ಸಹಾಯವಾಗುತ್ತದೆ. ರೈತರೂ ಮುಂಜಾಗ್ರತೆಯಿಂದ ರೋಗ ಹರಡದಂತೆ ಹಾಗೂ ರೋಗಪೀಡಿತ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸುವ ಮೂಲಕ ಈ ರೋಗವನ್ನು ತಡೆಗಟ್ಟಬೇಕು. ಕಾಲು ಬಾಯಿ ರೋಗ ದನದ ಕರುಗಳಿಗೆ ಬೇಗ ಬರುತ್ತದೆ. ಇದನ್ನು ಕೂಡಲೇ ನಿಯಂತ್ರಿಸದೇ ಇದ್ದರೆ ಇದು ಮಾರಣಾಂತಿಕ ಕಾಯಿಲೆ ಆವರಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಪಶು ಇಲಾಖೆ ಡಾ. ಪಟ್ಟಣಶೆಟ್ಟಿ ಪುರಸಭೆ ಉಪಾಧ್ಯಕ್ಷ ನಿಸಾರ ತಿಗಡಿ, ಸದಸ್ಯರಾದ ಅಬ್ದುಲ್‍ಕರೀಂ ಲೋಧಿ, ಶ್ರೀಧರ ಲೋಕೂರ, ಆಸ್ಪತ್ರೆಯ ಸಿಬ್ಬಂದಿ ವರ್ಗ ಹಾಗೂ ರೈತರು ಇದ್ದರು.

loading...