ರೈತ ಸಂವಾದ ಕಾರ್ಯಕ್ರಮ: ಫಲವತ್ತತೆ ಕುರಿತು ಅರಿವು

0
17
loading...

ಮುಂಡಗೋಡ: 2017-18 ನೇ ಸಾಲಿನ ಆತ್ಮಾ ಯೋಜನೆಯ ಕಿಸಾನಗೋಷ್ಠಿ ಹಾಗೂ ರೈತ ಸಂವಾದ ಕಾರ್ಯಕ್ರಮ ತಾಲೂಕಿನ ಪಾಳಾ ರೈತ ಸಂಪರ್ಕ ಕೇಂದ್ರದಲ್ಲಿ ಜರುಗಿತು. ಜಿಲ್ಲಾ ರೈತ ಸಂಘದ ಅಧ್ಯಕ್ಷ ಹನುಮಂತಪ್ಪ ಗುಡ್ಡಣ್ಣನವರ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಣ್ಣಿನ ಫಲವತ್ತತೆಯ ಬಗ್ಗೆ ಹೆಚ್ಚಿನ ಅರಿವನ್ನು ನೀಡುವಂತೆ ಕೋರಿದರು. ಎಪಿಎಂಸಿ ಉಪಾದ್ಯಕ್ಷ ಬಾಬಣ್ಣ ಕೋಣನಕೇರಿ ಮಾತನಾಡಿ, ಇಲಾಖೆಯ ಕಾರ್ಯಕ್ರಮಗಳ ಬಗ್ಗೆ ಇನ್ನು ಹೆಚ್ಚಿನ ಪ್ರಮಾಣದಲ್ಲಿ ರೈತರಿಗೆ ಮನವರಿಕೆ ಮಾಡಿಕೊಡಲು ಕೋರಿದರು.  ಎ,ಪಿ,ಎಂ,ಸಿ ನಿರ್ದೇಶಕರು ಹಾಗೂ ಆತ್ಮಾ ರೈತ ಸಲಹಾ ಸಮಿತಿಯ ಸದಸ್ಯ ಶಿವಪ್ಪ ನಾಯ್ಕ ಇವರು ಮಾತನಾಡಿ ಆತ್ಮಾ ಯೋಜನೆಯ ಮೂಲ ಉದ್ದೇಶವನ್ನು ಹಾಗೂ ತಮ್ಮ ಅನುಭವಗಳನ್ನು ಹಂಚಿಕೊಂಡರು. ಕೃಷಿ ವಿಜ್ಷಾನ ಕೇಂದ್ರದ ವಿಜ್ಞಾನಿ ಡಾ|| ಸತೀಸ ಗುಣಗಾ ಇವರು ನೂತನ ತಳಿಗಳು, ಬೇಸಾಯ ಪದ್ದತಿಗಳು ಇತ್ಯದಿಗಳ ಬಗ್ಗೆ ವಿವರಣೆಯನ್ನು ನೀಡಿದರು. ತೋಟಗಾರಿಕೆ ಇಲಾಖೆಯ ಅಧಿಕಾರಿ ಶ್ರೀ ಕೆ.ವಿ ಪಠಾಣ ಇವರು ತೋಟಗಾರಿಕೆ ಇಲಾಖೆಯಿಂದ ದೊರೆಯುವ ಸವಲತ್ತುಗಳ ಬಗ್ಗೆ ವಿವರಣೆಯನ್ನು ನೀಡಿದರು. ಪಶು ಸಂಗೋಪನಾ ಇಲಾಖೆಯಿಂದ ಶ್ರಿ ವಿ.ಜಿ ಹೆಗಡೆ ಇವರು ಇಲಾಖೆಯ ಸವಲತ್ತುಗಳ ಜೋತೆಗೆ ಜಾನುವಾರುಗಳ ಪಾಲನೆ ಬಗ್ಗೆ ಮಾಹಿತಿಯನ್ನು ನೀಡಿದರು. ಸಹಾಯಕ ಕೃಷಿ ನಿರ್ದೇಶಕ ಎಂ, ಎಸ್‌ ಕುಲಕರ್ಣಿ ಆತ್ಮಾ ಯೋಜನೆಯ ಉದ್ದೇಶ, ಇಲಾಖೆಯಿಂದ ದೊರೆಯುವ ಸವಲತ್ತುಗಳು, ವಿವಿಧ ಬೆಳೆಗಳ ತಾಂತ್ರಿಕ ಮಾಹಿತಿಯನ್ನು ರೈತ ಸಂವಾದದೊಂದಿಗೆ ಹಂಚಿಕೊಂಡರು. ತಾಲೂಕ ಪಂಚಾಯ್‌ತ ಸದಸ್ಯರು ಹಾಗೂ ಆತ್ಮಾ ಯೋಜನೆಯ ರೈತ ಸಲಹಾ ಸಮಿತಿಯ ಸದಸ್ಯರಾದ ರೇಣುಕಾ ಕೋಡಣ್ಣನವರ, ರೈತ ಸಂಪರ್ಕ ಕೇಂದ್ರದ ಅಧಿಕಾರಿ ಅರವಿಂದ ಕಮ್ಮಾರ, ಯಲ್‌, ಯಲ್‌ ಯಲವಿಗಿ ಉಪಸ್ಥಿತರಿದ್ದರು. ಮಹೇಶ ಹೊಸಕೊಪ್ಪ, ರಮೇಶ ಜಿಗಳೇರ, ಪ್ರಗತಿಪರ ರೈತ ಚಂದ್ರಗೌಡ ಇವರನ್ನು ಒಳಗೊಂಡಂತೆ ಸುಮಾರು 75 ಜನ ರೈತರು/ ರೈತ ಮಹಿಳೆಯರು ಆಸಕ್ತಿಯಿಂದ ರೈತ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ತಾಲೂಕಾ ಆತ್ಮಾ ಯೋಜನೆಯ ವ್ಯವಸ್ಥಾಪಕರಾದ ಕೊಪ್ಪಣ್ಣ ಬಜಂತ್ರಿ ನಿರೂಪಿಸಿದರು.

loading...