ರೋಗಿಗಳ ನೋವಿಗೆ ಸ್ಪಂದಿಸದ ವೈದ್ಯರು

0
18
loading...

ಕುಮಟಾ: ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಅ.31 ರಿಂದ ನ.19ರ ವರೆಗೆ ತಂಗಿದ್ದ ಲೈಫ್ ಲೈನ್ ರೈಲ್ವೆ ಆಸ್ಪತ್ರೆಯಲ್ಲಿ ಜಿಲ್ಲೆಯ ಸಾಗರ, ಭಟ್ಕಳ ಮತ್ತು ಹೊನ್ನಾವರದಿಂದ ಆಗಮಿಸಿ ಸಶ್ತ್ರ ಚಿಕಿತ್ಸೆ ಮಾಡಿಸಿಕೊಂಡ ಬಡ ಕ್ಯಾನ್ಸರ್ ರೋಗಿಗಳಿಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಸಮರ್ಪಕ ಚಿಕಿತ್ಸೆ ಮತ್ತು ಅಗತ್ಯ ವೈದ್ಯಕೀಯ ಸಲಹೆಗಳು ದೊರೆಯದೆ ಪರದಾಡುವಂತಾಗಿದೆ. ಆದರೆ, ಸಶ್ತ್ರ ಚಿಕಿತ್ಸೆಯ ಬಳಿಕ ವೈದ್ಯರು ರೋಗಿಯನ್ನು ಭೇಟಿಯಾಗಿ, ಅವರ ಸ್ಥಿತಿಗತಿಗಳನ್ನು ಪ್ರತಿನಿತ್ಯ ಪರೀಕ್ಷಿಸುವ ಸೌಲಭ್ಯವಿರದ ಕಾರಣ ಈ ಸಮಸ್ಯೆ ಎದುರಾಗಿದೆ.
ಈ ಲೈಫ್ ಲೈನ್ ರೈಲ್ವೆ ಆಸ್ಪತ್ರೆಯಲ್ಲಿ ನ.12 ರಂದು 7 ಮಂದಿ ಕ್ಯಾನ್ಸರ್ ರೋಗಿಗಳಿಗೆ ಸಶ್ತ್ರ ಚಿಕಿತ್ಸೆ ಮಾಡಿದ ಬಳಿಕ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿದ್ದರು. ವಿವಿಧ ತಾಲೂಕುಗಳಿಂದ ಆಗಮಿಸಿದ ಬಡ ರೋಗಿಗಳಿಗೆ ಸಶ್ತ್ರ ಚಿಕಿತ್ಸೆಯ ಬಳಿಕ ನಡೆಯುವ ಮುಂದಿನ ಚಿಕಿತ್ಸೆಗಳ ಕುರಿತು ಯಾವುದೇ ಮಾಹಿತಿ ನೀಡಿಲ್ಲ. ಈ ಕುರಿತು ಸರ್ಕಾರಿ ಆಸ್ಪತ್ರೆಯಲ್ಲಿರುವ ವೈದ್ಯರು ಮತ್ತು ನರ್ಸ್‍ಗಳನ್ನು ವಿಚಾರಿಸಿದರೆ, ತಮಗೆ ಮಾಹಿತಿ ಇಲ್ಲ ಎಂದು ಕೈಚಲ್ಲುವುದಲ್ಲದೇ ರೋಗಿಗಳಿಗೆ ಏನಾದರೂ ತೊಂದರೆಯಾದರೆ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂಬುದು ರೋಗಿಗಳ ಕುಟುಂಬದ ಸದಸ್ಯರ ಆರೋಪವಾಗಿದೆ. ಅಲ್ಲದೆ ಮುಂದಿನ ವೈದ್ಯಕೀಯ ಸಲಹೆಗಾಗಿ ಗೋವಾದ ಆಸ್ಪತ್ರೆಗೆ ವರ್ಗಾಹಿಸಲು ಈ ರೋಗಿಗಳನ್ನು ಬುಧವಾರ ತಾಲೂಕು ಆಸ್ಪತ್ರೆಯಿಂದ ಡಿಸ್‍ಚಾರ್ಜ್ ಮಾಡಲಾಗುತ್ತಿದೆ. ಗೋವಾ ಆಸ್ಪತ್ರೆಯಲ್ಲಿ ಮುಂದಿನ ಚಿಕಿತ್ಸೆಯ ಕುರಿತು ಯಾವುದೇ ಮಾಹಿತಿಯಿರದ ರೋಗಿಗಳು ಆತಂಕಕ್ಕ ಒಳಗಾಗಿದಾರೆ. ಈ ಲೈಫ್ ಲೈನ್ ರೈಲ್ವೆ ಆಸ್ಪತ್ರೆಯಲ್ಲಿ ಯಾಕಾದರೂ ಸಶ್ತ್ರ ಚಿಕಿತ್ಸೆ ಮಾಡಿಕೊಂಡಿದ್ದಿವಿ ಎಂದು ರೋಗಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಪ್ರರ್ತಕರ್ತರೊಂದಿಗೆ ಮಾತನಾಡಿದ ಚಂದಾವರ ಗ್ರಾಪಂ ಅಧ್ಯಕ್ಷ ಚಂದ್ರಕಾಂತ ನಾಯ್ಕ ಅವರು, ನನ್ನ ಮಾವನಿಗೆ ಕುತ್ತಿಗೆ ಬಳಿ ಸಶ್ತ್ರ ಚಿಕಿತ್ಸೆ ಮಾಡಲಾಗಿದೆ. ಬ್ಲೀಡಿಂಗ್ ಆದರೂ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಸೂಕ್ತ ಸ್ಪಂದನೆ ನೀಡುತಿಲ್ಲ. ನರ್ಸ್‍ಗಳನ್ನು ಕೇಳಿದರೆ, ಈ ಶಸ್ತ್ರ ಚಿಕಿತ್ಸೆ ಮಾಡಿದ್ದು ಸರ್ಕಾರಿ ಆಸ್ಪತ್ರೆಯಲ್ಲಿ ಅಲ್ಲ. ಅಲ್ಲದೇ ಈ ಕುರಿತು ನಮಗ ಯಾವುದೇ ಮಾಹಿತಿ ಕೂಡ ಇಲ್ಲ ಎಂದು ನಿರ್ಲಕ್ಷೃವಹಿಸುತ್ತಿದ್ದಾರೆ. ಇವರೆ ಈ ರೀತಿ ಮಾತನಾಡಿದರೆ, ಸಶ್ತ್ರ ಚಿಕಿತ್ಸೆ ಮಾಡಿಸಿಕೊಂಡ ಬಡ ರೋಗಿಗಳು ಎಲ್ಲಗೆ ಹೋಗಬೇಕು. ಇದಕ್ಕೆ ಇಲ್ಲಾಧಿಕಾರಿಗಳೇ ಉತ್ತರ ನೀಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

loading...