ಲೋಂಡಾ ಗ್ರಾಮದ ಸುತ್ತಮುತ್ತ ಹುಲಿ ಸಂಚಾರ: ಆತಂಕದಲ್ಲಿ ಗ್ರಾಮಸ್ಥರು

0
31
loading...

ಖಾನಾಪುರ: ತಾಲೂಕಿನ ಲೋಂಡಾ ಗ್ರಾಮದ ಹೊರವಲಯದಲ್ಲಿ ಹುಲಿ ಸಂಚರಿಸಿದೆ ಎಂಬ ವದಂತಿ ಹರಡಿದ್ದರಿಂದ ಶುಕ್ರವಾರ ಕೆಲಕಾಲ ಆತಂಕದ ವಾತಾವರಣ ನಿರ್ಮಾಣಗೊಂಡ ವರದಿಯಾಗಿದೆ. ಗ್ರಾಮದ ಸುತ್ತಮುತ್ತ ಹುಲಿ ಕಾಣಿಸಿಕೊಂಡಿದೆ ಎಂಬ ಸುದ್ದಿಯಿಂದ ಗ್ರಾಮದಲ್ಲಿ ಭಯದ ವಾತಾವರಣ ಮೂಡಿದೆ. ಗ್ರಾಮದಿಂದ ಬೆಳಗಾವಿ ಪಣಜಿ ರಾಷ್ಟ್ರೀಯ ಹೆದ್ದಾರಿಗೆ ಸಾಗುವ ಸಂಪರ್ಕ ರಸ್ತೆಯಲ್ಲಿ ಲೋಂಡಾ ಪ್ರೌಢಶಾಲೆಯ ಬಳಿ ಹುಲಿ ರೈಲು ಹಳಿಗಳನ್ನು ದಾಟುತ್ತಿದೆ ಎಂಬ ಉಲ್ಲೇಖವಿರುವ ಫೋಟೋ ವಾಟ್ಸಪ್‌ ಮೂಲಕ ಮೊಬೈಲ್‌ಗಳಲ್ಲಿ ಹರಡಿದ್ದರಿಂದ ಪ್ರೌಢಶಾಲೆಯ ಸುತ್ತಲಿನ ರೈಲು ಮಾರ್ಗದಲ್ಲಿ ಪರಿಶೀಲನೆ ನಡೆಸಿದ ಅರಣ್ಯ ಅಧಿಕಾರಿಗಳಿಗೆ ಪ್ರೌಢಶಾಲೆಯ ಬಳಿ ಹುಲಿ ಸಂಚರಿಸಿದ ಬಗ್ಗೆ ಯಾವುದೇ ಕುರುಹುಗಳು ಲಭ್ಯವಾಗಿಲ್ಲ ಎಂದು ಇಲಾಖೆಯ ಮೂಲಗಳು ಸ್ಪಷ್ಟಪಡಿಸಿವೆ.
ವಾಟ್ಸಪ್‌ ಗ್ರುಪ್‌ಗಳಲ್ಲಿ ಹುಲಿಯೊಂದು ರೈಲು ಹಳಿಗಳನ್ನು ದಾಟುವ ಚಿತ್ರ ಹರಿದಾಡಿದ್ದರಿಂದ ಆತಂಕದ ಸನ್ನಿವೇಶ ನಿರ್ಮಾಣವಾಗಿದೆ. ಹುಲಿ ಲೋಂಡಾ ಗ್ರಾಮದ ಬಳಿ ಹಳಿ ದಾಟಿ ಸಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ. ಆದರೆ ಗ್ರಾಮದ ಸುತ್ತಮುತ್ತಲಿನ ರೈಲು ಹಳಿಗಳ ಸ್ಥಳ ಪರಿಶೀಲಿಸಿದ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಈ ಮಾರ್ಗದಲ್ಲಿ ಹುಲಿ ಸಂಚರಿಸಿದ ಬಗ್ಗೆ ಯಾವುದೇ ಕುರುಹುಗಳು ಲಭ್ಯವಾಗಿಲ್ಲ ಎಂದು ಲೋಂಡಾ ಆರ್‌.ಎಫ್‌.ಒ ಬಸವರಾಜ ವಾಳದ ಮಾಹಿತಿ ನೀಡಿದ್ದಾರೆ.

loading...