ವಿದ್ಯುತ್ ಹಗರಣದ ವರದಿ ಸದನದ ಕೈ ಸೇರಿಲ್ಲ: ಸ್ಪೀಕರ್ ಕೋಳಿವಾಡ

0
34
loading...

ಕನ್ನಡಮ್ಮ ಸುದ್ದಿ
ಬೆಳಗಾವಿ( ಸುವರ್ಣ ವಿಧಾನ ಸೌಧ) :12 ಬಿಜೆಪಿ ಸರಕಾರದ ಅವಧಿಯಲ್ಲಿ ವಿದ್ಯುತ್ ಖರೀದಿಯಲ್ಲಿ ನಡೆದ ಅವ್ಯವಹಾರದ ಕುರಿತಾದ ಸಮಿತಿಯ ವರದಿ ಸದನದ ಕೈ ಸೇರಿಲ್ಲ ಎಂದು ಸ್ಪೀಕರ ಕೆ.ಬಿ.ಕೋಳಿವಾಡ ಹೇಳಿದರು.
ಅವರು ರವಿವಾರ ಸುವರ್ಣ ವಿಧಾನ ಸೌಧದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ, ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದ ವಿದ್ಯುತ್ ಖರೀದಿಯಲ್ಲಿನ ಅವ್ಯವಹಾರದ ಕುರಿತಾಗಿ ಸಮಿತಿಯ ವರದಿ ಇಲ್ಲಿಯವರೆಗೂ ಸದನ ಕೈ ಸೇರಿಲ್ಲ. ಒಂದು ವೇಳೆ ಸಮಿತಿ ವರದಿ ನೀಡಿದರೆ ವಿಚಾರ ಮಾಡೋಣ ಎಂದು ಅವರು ಹೇಳಿದರು.
ರಾಜ್ಯದಲ್ಲಿ ನಡೆದಿರುವ ಕೆರೆ ಒತ್ತುವರಿಯ ಕುರಿತಾಗಿ ಈಗಾಗಲೇ ಸಮಿತಿಯ ವರದಿ ಸದನದ ಕೈಗೆ ಸೇರಿದೆ. ಚಳಿಗಾಲದ ಅಧಿವೇಶನದಲ್ಲಿ ಚರ್ಚೆ ಕೈಗೊಳ್ಳಲಾಗುವುದು ಹಾಗೂ ಕೆ. ವಿಧಾನ ಸಭಾ ಸದಸ್ಯ ಕೆ. ಗೋಪಾಲಯ್ಯ ಅವರಿಂದ ಎರಡು ಖಾಸಗಿ ನಿರ್ಣಯವನ್ನು ಸ್ವೀಕರಿಸಲಾಗಿದೆ. ಕರ್ನಾಟಕದಲ್ಲಿ ನಡೆಯುವ ಬ್ಯಾಂಕಿಂಗ್, ಕೇಂದ್ರ ಅಬಕಾರಿ ಸೇವೆ ಹಾಗೂ ಸೆಲೆಕ್ಷನ ಸೇವೆ ಸೇರಿದಂತೆ ಇತರೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ಸಂಪೂರ್ಣ ಕನ್ನಡದಲ್ಲಿಯೇ ನಡೆಬೇಕೆಂದು ಅಧಿವೇಶನದಲ್ಲಿ ಸದನದಿಂದ ಕೇಂದ್ರ ಸರಕಾರಕ್ಕೆ ಒತ್ತಾಯಿಸಲಾಗುವುದು. ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಈ ಸದನವು ಕೇಂದ್ರ ಸರಕಾರವನ್ನು ಒತ್ತಾಯಿಸಲಾಗುತ್ತದೆ ಎಂದರು.
ಹಿಂದಿನ ಅಧಿವೇಶನದ 4 ವಿಧಯಕಗಳು ಬಾಕಿ ಇರತ್ತದೆ ಮತ್ತು ಈಊ ಅಧಿವೇಶನಕ್ಕೆ ಹೊಸದಾಗಿ 5 ವಿಧೇಯಕಗಳು ಸ್ವೀಕೃತವಾಗಿವೆ. ಮುಂದಿನ ದಿನಗಳಲ್ಲಿ ಯಾವುದೇ ವಿಧೇಯಕಗಳನ್ನು ಸದನದಲ್ಲಿ ಮಂಡಳಿಸಲು ಸರಕಾರದಿಂದ ಅಧಿಕೃತವಾಗಿ ಕೋರಿಕೆ ಬಂದಲ್ಲಿ ಚರ್ಚೆಗೆ ತೆಗೆದುಕೊಳ್ಳಲಾಗುವುದು. ಇಲ್ಲಿಯವರೆಗೆ ಒಟ್ಟು 1661 ಪ್ರಶ್ನೆಗಳು, 20 ಗಮನ ಸೆಳೆಯುವ ಸೂಚನೆಗಳು ಮತ್ತು 351ರಡಿಯಲ್ಲಿ 33 ಸೂಚನೆಗಳು ಸ್ವೀಕೃತವಾಗಿವೆ ಎಂದು ಅವರು ಹೇಳಿದರು.
14ನೇ ವಿಧಾನ ಸಭೆಯ 15ನೇ ಅಧಿವೇಶನವು ದಿ.13 ರಿಂದ 24ರ ವರೆಗೆ ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿರುವ ವಿಧಾನ ಸಭಾಂಗಣದಲ್ಲಿ ಸಮಾವೇಶಗೊಳ್ಳಲಿದೆ. ಮೊದಲ ದಿನವಾದ ಮಂಗಳವಾರದಂದು 11 ಗಂಟೆಗೆ ಸದನ ಸೇರಿ ಕಳೆದ ಅಧಿವೇಶನ ಮುಕ್ತಾಯವಾದ ನಂತರ ನಿಧನ ಹೊಂದಿದ ಮಾಜಿ ಮುಖ್ಯಮಂತ್ರಿ ಎನ್. ಧರ್ಮಸಿಂಗ್, ಶಾಸಕ ಖಮರುಲ್ ಇಸ್ಲಾಂ ಮತ್ತು ಚಿಕ್ಕಮಾದು ಎಸ್., ವಿಧಾನ ಸಭಾ ಪರಿಷತ್ತಿನ ಮಾಜಿ ಸಭಾಪತಿ ಮತ್ತು ಮಾಜಿ ಸಚಿವ ರಾಮಭಾವು ಭೀಮರಾವ ಪೋತದಾರ, ವಿಧಾನ ಪರಿಷತಿನ ಮಾಜಿ ಸದಸ್ಯರುಗಳಾದ ವಿದ್ಯಾದರ ಗುರೂಜಿ, ಸಿದ್ದನಗೌಡ ಪಾಟೀಲ, ಬಿ.ಬಿ.ಶಿವಪ್ಪ, ಜಯಪ್ರಕಾಶ, ಜಯಪ್ರಕಾಶ ಶೆಟ್ಟಿ, ಬಿ.ಜೆ. ಕೊಟ್ರಪ್ಪ, ಬಾಹ್ಯಾಕಾಶ ವಿಜ್ಞಾನಿ ಪ್ರೊ. ಯುವ್.ಆರ್.ರಾವ್, ಯಕ್ಷಗಾನ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ, ಹಿರಿಯ ರಂಗಕರ್ಮಿ ಏಣಗಿ ಬಾಳಪ್ಪ ಹಾಗೂ ಪತ್ರಕರ್ತರಾದ ಗೌರಿ ಲಂಕೇಶ, ಖಾದ್ರಿ ಎಸ್. ಅಚ್ಯುತನ ರವರಿಗೆ ಸಂತಾಪ ಸೂಚಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಸಭೆಯ ಕಾರ್ಯದರ್ಶಿ ಎಸ್.ಮೂರ್ತಿ, ಬೆಳಗಾವಿ ಜಿಲ್ಲಾಧಿಕಾರಿ ಜಿಯಾವುಲ್ಲಾ ಎಸ್. ಅಪರ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ, ನಗರ ಪೊಲೀಸ್ ಆಯುಕ್ತ ಟಿ.ಜೆ.ಕೃಷ್ಣಭಟ್ ಸೇರಿದಂತೆ ಮೊದಲಾದವರು ಹಾಜರಿದ್ದರು.
ಬಾಕ್ಸ್
ಹಿಂದಿನ ಅಧಿವೇಶನದ 4 ವಿಧಯಕಗಳು ಬಾಕಿ ಇರತ್ತದೆ ಮತ್ತು ಈಊ ಅಧಿವೇಶನಕ್ಕೆ ಹೊಸದಾಗಿ 5 ವಿಧೇಯಕಗಳು ಸ್ವೀಕೃತವಾಗಿವೆ. ಮುಂದಿನ ದಿನಗಳಲ್ಲಿ ಯಾವುದೇ ವಿಧೇಯಕಗಳನ್ನು ಸದನದಲ್ಲಿ ಮಂಡಳಿಸಲು ಸರಕಾರದಿಂದ ಅಧಿಕೃತವಾಗಿ ಕೋರಿಕೆ ಬಂದಲ್ಲಿ ಚರ್ಚೆಗೆ ತೆಗೆದುಕೊಳ್ಳಲಾಗುವುದು. ಇಲ್ಲಿಯವರೆಗೆ ಒಟ್ಟು 1661 ಪ್ರಶ್ನೆಗಳು, 20 ಗಮನ ಸೆಳೆಯುವ ಸೂಚನೆಗಳು ಮತ್ತು 351ರಡಿಯಲ್ಲಿ 33 ಸೂಚನೆಗಳು ಸ್ವೀಕೃತವಾಗಿವೆ.
ಕೆ.ಬಿ.ಕೋಳಿವಾಡ
ಸ್ಪೀಕರ್

 

loading...