ವಿನೂತನ ರೀತಿಯಲ್ಲಿ ರಾಜ್ಯೋತ್ಸವ ಆಚರಣೆ

0
33
loading...

ದಾಂಡೇಲಿ: ನಮ್ಮ ಕರ್ನಾಟಕ ರಕ್ಷಣಾ ವೇದಿಕೆಯ ದಾಂಡೇಲಿ ಘÀಟಕವು ಸ್ಥಳೀಯ ಕುಳಗಿ ರಸ್ತೆಯಲ್ಲಿರುವ ವನವಾಸಿ ಕಲ್ಯಾಣ ಸಂಸ್ಥೆಯ ಕರ್ನಾಟಕ ರುಕ್ಮಿಣಿ ಬಾಲಕಿಯರ ವಸತಿ ನಿಲಯಯ ವಿದ್ಯಾರ್ಥಿನಿಯರಿಗೆ ಕಲಿಕಾ ಸಾಮಾಗ್ರಿಗಳನ್ನು, ಕ್ರೀಡಾ ಸಾಮಾಗ್ರಿಗಳನ್ನು ಹಾಗೂ ಬೋಜನವನ್ನು ವಿತರಿಸುವುದರ ಮೂಲಕ ವಿನೂತನವಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿತು.
ಈ ಸಂದರ್ಭದಲ್ಲಿ ನಮ್ಮ ಕರ್ನಾಟಕ ರಕ್ಷಣಾ ವೇದಿಕೆಯ ದಾಂಡೇಲಿ ಘÀಟಕದ ಅಧ್ಯಕ್ಷ ಶಬ್ಬೀರ ಪಾನಾವಾಲೆಯವರು ಮಾತನಾಡಿ ಕನ್ನಡ ನಾಡಿನಲ್ಲಿ ಹುಟ್ಟಿದ ನಾವೆಲ್ಲರೂ ಧನ್ಯರು. ನಾಡು, ನುಡಿ ಸೇವೆ ಮಾಡುವುದರ ಮೂಲಕ ಕನ್ನಡ ನಾಡನ್ನು ಬಲಿಷ್ಟ ನಾಡನ್ನಾಗಿ ಕಟ್ಟೋಣ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ವೇದಿಕೆಯ ಪದಾಧಿಕಾರಿಗಳಾದ ಸಿದ್ದರಾಮಯ್ಯ ತೆಂಗಿನಮಠ, ರಿಯಾಜ ಖಾನ್‌, ಆರಿಫ್‌, ಜೇಮ್ಸ್‌, ಮಂಜು, ಮಹಾಂತೇಶ, ಜಿಲಾನಿ ಮತ್ತು ಇಮಾಮಬೈಲೂರು ಹಾಗೂ ವನವಾಸಿ ಕಲ್ಯಾಣ ಸಂಸ್ಥೆಯ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

loading...