ವಿಬಿಪಿಎಲ್ ಕ್ರಿಕೆಟ್ ಪಂದ್ಯಾಕ್ಕೆ ಭರದ ತಯಾರಿ

0
15
loading...

ಖಾಜಾಮೈನುದ್ದೀನ್ ಪಟೇಲ್
ವಿಜಯಪುರ: ಬರುವ ತಿಂಗಳು ಗುಮ್ಮಟ ನಗರಿಯಲ್ಲಿ ಕೆಪಿಎಲ್ ಮಾದರಿಯ ವಿಬಿಪಿಎಲ್ ಕ್ರಿಕೆಟ್ ಪಂದ್ಯಾವಳಿಗಳು ಆರಂಭಗೊಳ್ಳಲಿವೆ. ಏಳು ವರ್ಷಗಳ ನಂತರ ಈ ಅಭೂತಪೂರ್ವ ಕ್ರಿಕಟ್ ಪಂದ್ಯಾವಳಿಗಳನ್ನು ಸಂಘಟಿಸಲಾಗುತ್ತಿದ್ದು, ಪಂದ್ಯಾವಳಿಗೆ ಆಟಗಾರರ ಪ್ರಕ್ರಿಯೆ ನಡೆಯಿತು.

ನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಶÀುಕ್ರವಾರ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಬಾಗಲಕೋಟ, ಬೀದರ, ಕಲಬುರ್ಗಿ, ಯಾದಗಿರಿ, ಕೊಪ್ಪಳ, ರಾಯಚೂರು, ವಿಜಯಪುರ ಸೇರಿಂದತೆ ಬಳ್ಳಾರಿ ಜಿಲ್ಲೆಯ ಕ್ರಿಕೆಟ್ ಆಟಗಾರರು ಆಯ್ಕೆ ಪ್ರತಿಕ್ರಿಯೆಲ್ಲಿ ಭಾಗವಹಿಸಿದ್ದರು.
ವಿಬಿಪಿಎಲ್ ಕ್ರಿಕೆಟ್ ಪಂದ್ಯಾವಳಿಗೆ ಆಯ್ಕೆ ಪ್ರಕಿಯೆಯಲ್ಲಿ 750ಕ್ಕೂ ಹೆಚ್ಚು ಆಟಗಾರರು ಸೇರಿದರು. 132 ಆಟಗಾರರನ್ನು ಕ್ರಿಕೆಟ್ ಲೀಗ್ ಆಯ್ಕೆ ಮಾಡಿಲಾಗಿದ್ದು, ಮೂರು ವಿಭಾಗಗಳಲ್ಲಿ ಎ, ಬಿ, ಸಿ ಶ್ರೇಣಿಯಲ್ಲಿ ಹಂಚಿಕೆ ಮಾಡಿಲಾಗಿದೆ. 8 ಫ್ರಾಂಚೈಸಿಗೆ ಈ ಆಟಗಾರರು ಸೇರಲಿದ್ದಾರೆ. `ಎ’ ವಿಭಾಗಕ್ಕೆ ಆಯ್ಕೆಯಾದ ಆಟಗಾರರಿಗೆ 5 ಸಾವಿರು ರೂ. ‘ಬಿ’ ವಿಭಾಗದಲ್ಲಿ ಆಯ್ಕೆಯಾದ ಆಟಗಾರರಿಗೆ ಮೂರು ಸಾವಿರು ರೂ. ಮತ್ತು ಸಿ ವಿಭಾಗದಲ್ಲಿ ಆಯ್ಕೆಯಾದ ಆಟಗಾರರಿಗೆ 2500 ರೂ. ಹರಾಜು ಪ್ರಕ್ರಿಯೆಲ್ಲಿ ನಿಗದಿ ಮಾಡಲಾಗಿದೆ.

ಮಹಿಳಾ ತಂಡ: ಈ ಬಾರಿ ವಿಶೇಷವಗಾಗಿ ವಿಬಿಪಿಎಲ್ ಲೀಗ್‍ನಲ್ಲಿ ಮಹಿಳಾ ಕ್ರಿಕೆಟ್ ಆಡಲಿದ್ದಾರೆ. ವಿಬಿಪಿಎಲ್ ಟ್ರೋಪಿಯಲ್ಲಿ ಮೂರು ತಂಡ ಮಹಿಳಾ ಕ್ರಿಕೆಟ್ ಪಂದ್ಯಾವಳಿ ಜರುಗಲಿದ್ದು, ಬಿಜಾಪುರ ಮಹಿಳಾ ಕ್ರಿಕೆಟ್ ತಂಡ, ಕರ್ನಾಟಕ ಮಹಿಳಾ ಕ್ರಿಕೆಟ್ ತಂಡ ಮತ್ತು ಗೋವಾದ ಮಹಿಳಾ ಕ್ರಿಕೆಟ್ ತಂಡಗಳು ಆಡಲಿದ್ದು, ಈ ಮಹಿಳಾ ಕ್ರಿಕೆಟ್ ತಂಡದಲ್ಲಿ ವಿಶ್ವಕಪ್ ಕ್ರಿಕೆಟ್ ಆಟಗಾರರು ಇಲ್ಲಿ ಪಾಲ್ಗೊಳ್ಳಿದ್ದಾರೆ.
ವಿಜಯಪುರ-ಬಾಗಲಕೋಟೆ ಪ್ರಿಮಿಯರ್ ಲೀಗ್ (ವಿಬಿಪಿಎಲ್) ನಡೆಸಲು ಕ್ರಿಕೆಟ್ ಕ್ಲಬ್‍ಗಳ ಸಂಘಟಕರು ನಿರ್ಧರಿಸಿದ್ದಾರೆ. ಇದರಿಂದ ಕ್ರೀಡಾಭಿಮಾನಿಗಳಲ್ಲಿ ಮಂದಹಾಸ ಮೂಡಿಸಿದೆ. 2009ರಲ್ಲಿ ಮೊದಲ ಬಾರಿಗೆ ಪ್ರಾರಂಭವಾದ ಬಿಜಾಪುರ ಪ್ರಿಮಿಯರ್ ಲೀಗ್ (ಬಿಪಿಎಲ್) 2010 ರಲ್ಲಿ 2ನೇ ಬಾರಿಗೆ ಆಯೋಜನೆ ಮಾಡಲಾಗಿತ್ತು. ಇದೀಗ ಏಳು ವರ್ಷಗಳ 3 ನೇ ಬಾರಿ ಆಯೋಜನೆಯಿಚಿದ ಪುನರ್‍ಜೀವ ಬಂದೊದಗಿದ್ದು, ವಿಬಿಪಿಎಲ್ ಹೆಸರಿನಲ್ಲಿ ಪುನಃ ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದು ಸಂಘಟಕ ಫಯಾಜ್ ಕಲಾದಗಿ ತಿಳಸಿದರು.

8 ಫ್ರಾಂಚೆಸಿ…
ಪಂದ್ಯಾವಳಿಯಲ್ಲಿ ಭಾಗವಹಿಸಿರುವ 8 ತಂಡಗಳು ಫ್ರಾಂಚೈಸಿ ಪಡೆದಿವೆ. ಬಾಗಲಕೋಟೆಯ ಡಾ.ಬಾಬುರಾಜೇಂದ್ರ ನಾಯಕ ಮತ್ತು ಡಾ.ಪ್ರಶಾಂತ ಕಟಕೋಳ ಅವರ ಒಡೆತನದ ಚಾಲುಕ್ಯನ ಚಿತಾ ಸಿಮಿಕೇರಿ ಇವರ ಸಿಟಿ ಕ್ರಿಕೆಟ್ ಕ್ಲಬ್, ಬಾಗಲಕೋಟೆಯ ಫಯಾಜ ಸಾಸನೂರ ಅವರ ರಿಹಾನ ಸಿಸಿ, ವಿಜಯಪುರದ ಅಬ್ದುಲ್ ಹಮೀದ ಶೇಖ ಒಡೆತನದ ಅಸ್ಪೈರ್ ರಾಯಲ್ಸ್, ರಾಜಶೇಖರ ಚವ್ಹಾಣ ಅವರ ಬಂಜಾರಾ ಶಿಕ್ಷಣ ಸಂಸ್ಥೆಯ ಬಂಜಾರಾ ಟೈಗರ್ಸ್, ವಿಜಯಪುರ ಎನ್.ಎಂ.ಬಿರಾದಾರ ಅವರ ಚಾಣಕ್ಯ ಕರಿಯರ್ ಅಕಾಡೆಮಿ, ಬಾಗಲಕೋಟೆ ಜಿಲ್ಲಿಯ ಅಮಿನ್‍ಗಡದ ಸುಜಾತಾ ಶ್ರೀಶೈಲ ತತ್ರಾಣಿ ಅವರ ನಮ್ಮ ಸಾರಥಿ, ವಿಜಯಪುರದ ಚಡಚಣದ ಇರ್ಫಾನ್ ಪಟೇಲ ಅವರ ಯಹಾ ಚಡಚಣ ಬುಲ್ಸ್ ತಂಡಗಳು ಭಾಗವಹಿಸಲಿವೆ.

loading...