ವೀರಶೈವ ಲಿಂಗಾಯತ ಧೋರಣೆಗೆ ಬದ್ಧ: ದಿಂಗಾಲೇಶ್ವರ ಸ್ವಾಮೀಜಿ

0
33
loading...

ಗದಗ, ನ. 12 : ಬಸವಣ್ಣನವರ ಹೆಸರಿನಲ್ಲಿ ಕೆಲವು ಮಠಾಧೀಶರು ಹಣ ಗಳಿಕೆಯ ಕಾರ್ಯದಲ್ಲಿ ತೊಡಗಿದ್ದಾರೆ. ವೀರಶೈವರೆಂಬ ಸೋಗಿನಲ್ಲಿದ್ದವರು ಇದೀಗ ಲಿಂಗಾಯತ ಸೋಗಿನಲ್ಲಿ ಧರ್ಮ ಮತ್ತು ಸಮಾಜದಲ್ಲಿ ಗೊಂದಲ ಉಂಟು ಮಾಡುತ್ತಿದ್ದಾರೆ ಇದು ಬಹು ದಿನ ನಡೆಯದು ಎಂದು ಬಾಲೇಹೂಸೂರಿನ ಜ.ದಿಂಗಾಲೇಶ್ವರ ಮಹಾಸ್ವಾಮಿಗಳು ಹೇಳಿದರು. ರವಿವಾರ ಗದುಗಿನ ಜಗದ್ಗುರು ಪಂಚಾಚಾರ್ಯ ಮಾಂಗಲ್ಯ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದವರು ಅವರು  ಬೆರಳೆಣಿಕೆಯ ಮಠಾದೀಶರು ಮತ್ತು ಬೆರಳೆಣಿಕೆಯ ರಾಜಕಾರಣಿಳು ವೀರಶೈವ ಲಿಂಗಾಯತ ಎಂದು ಗೊಂದಲವನ್ನುಂಟು ಮಾಡುತ್ತಿದ್ದಾರೆ  ವೀರಶೈವ ಲಿಂಗಾಯತ ಎರಡೂ ಒಂದೇ ಇದನ್ನು ಎರಡು ಮಾಡಲು ಹೊರಟಿದ್ದರ ಪರಿಣಾಮವಾಗಿ ಈ ರೀತಿಯ ಗೊಂದಲ ಉಂಟಾಗಿದೆ ಎಂದರು. ನಾಡಿನ ಪ್ರತಿಷ್ಠಿತ ಮಠಗಳೆಂದು ಹೇಳುವ ಮಠಗಳು ಈ ಮೊದಲು ವೀರಶೈವ ಪ್ರಗತಿಶೀಲ ಯುವಕ ಸಂಘ ಎಂದೂ, ವೀರಶೈವ ಅಧ್ಯಯನ ಸಂಸ್ಥೆ ಎಂದೂ ಪುಸ್ತಕಗಳನ್ನು ಪ್ರಕಟಿಸಿವೆ. ಈ ಎಲ್ಲ ಪುಸ್ತಕಗಳಿಗೆ ನಾಡಿನ ಹಿರಿಯ ಸಂಶೋಧಕರಾಗಿದ್ದ ದಿ.ಡಾ.ಎಂ.ಎಂ.ಕಲಬುರ್ಗಿ ಅವರು ಮಾರ್ಗದರ್ಶನ ನೀಡಿದ್ದಲ್ಲದೆ ಇವರೇ ಸಂಪಾದಿಸಿದ ಬಸವಣ್ಣನವರ ವಚನ ಸಂಪುಟಗಳಲ್ಲಿ ಲಿಂಗದೀಕ್ಷೆ ಪಡೆಯುವ ಮೂಲಕ ನಾನು ವೀರಶೈವನಾದೆ ಎಂದು ಉಲ್ಲೇಖಿಸಿದ್ದು ಐತಿಹಾಸಿಕ ದಾಖಲೆಯಾಗಿದೆ. ಜನಗಣತಿಯ ಸಂದರ್ಭದಲ್ಲಿ ವೀರಶೈವ ಲಿಂಗಾಯತರೆಂದು ಬರೆಯಿಸಬೇಕೆಂದು ಸಭೆ ಸಮಾರಂಭಗಳಲ್ಲಿ ಭಾಷಣ ಮಾಡಿದ ಇದೇ ಮಠದ ಮಠಾಧೀಶರು ಇದೀಗ ಏಕಾಏಕಿಯಾಗಿ ವೀರಶೈವ ಎಂದು ಇದ್ದಿದ್ದನ್ನು ಲಿಂಗಾಯತ ಎಂದು ಹೇಳಿಕೆ ನೀಡಿ ಸಮಾಜವನ್ನು ಗೊಂದಲಕ್ಕಿಡು ಮಾಡುತ್ತಿರುವದು ಸಲ್ಲದು, ಒಂದು ಇದ್ದದ್ದನ್ನು ಎರಡು ಮಾಡಲು ಹೋರಟಿರುವ ಅಖಂಡತೆಯನ್ನು ತುಂಡಾಗಿಸಲು ಹೋರಟಿರುವವರಿಗೆ ಜಾಗೃತ ಸಮಾಜ ಬರಲಿರುವ ದಿನಗಳಲ್ಲಿ ತಕ್ಕ ಉತ್ತರ ನೀಡಲಿದೆ ಎಂದರು. ಇತ್ತಿಚೆಗೆ ಹುಬ್ಬಳ್ಳಿಯಲ್ಲಿ ಲಿಂಗಾಯತ ನಡೆದ ಸಮಾವೇಶ ನಡೆದಾಗ ಎಂತಹ ಅವಘಡಗಳು ನಡೆದವು ಎಂಬುದನ್ನು ನಾಡಿಗೆ ನಾಡೇ ಗಮನಿಸಿದೆ ಮಾಧ್ಯಮಗಳು ಈ ವಿಷಯವಾಗಿ ವಿಸ್ತ್ರತ ವರದಿಯನ್ನೇ ನೀಡಿವೆ. ಇಲ್ಲವೆ ವೀರಶೈವ ಲಿಂಗಾಯತ ಧೋರಣೆಗೆ ಅವರು ಬದ್ಧರಾಗಿದ್ದಲ್ಲಿ ನಾವೂ ಮುಂದಡಿ ಇಡಲು ಸಿದ್ದ ಎಂದರು. ಪತ್ರಿಕಾಗೋಷ್ಠಿಯಲ್ಲಿ ಹುಲ್ಲತ್ತಿಯ ಮಹಾಲಿಂಗೇಶ್ವರ ಸ್ವಾಮೀಜಿ, ಕುಂಟೋಜಿಯ ಚನ್ನವೀರದೇವರು, ಮುದೇನೂರಿನ ಸಿದ್ದಲಿಂಗ ದೇವರು, ಬಸಣ್ಣ ಮಲ್ಲಾಡದ,  ಡಾ.ಶೇಖರ ಸಜ್ಜನರ, ವ್ಹಿ.ಕೆ.ಗುರುಮಠ, ಚಂದ್ರಣ್ಣ ಬಾಳಿಹಳ್ಳಿಮಠ, ಎಚ್.ವ್ಹಿ.ಶಾನಭೋಗರ, ರಾಜು ಖಾನಾಪೂರ, ಸಿ.ಕೆ.ಕಡಣಿಶಾಸ್ತ್ರೀ, ರವಿ ದುಂಡಸಿ ಮುಂತಾದವರಿದ್ದರು.

loading...