ಶಾರಿರೀಕ ಆರೋಗ್ಯಕ್ಕೆ ಪರಿಸರ ಶುಚಿಯಾಗಿಟ್ಟುಕೊಳ್ಳಿ: ಪಾಟೀಲ

0
37
loading...

ಕನ್ನಡಮ್ಮ ಸುದ್ದಿ-ಕೋಹಳ್ಳಿ: ಶಾರಿರೀಕ ಆರೋಗ್ಯಕ್ಕೆ ಶುಚ್ಚಿತ್ವ ಅವಶ್ಯಕತೆ ಇದ್ದು, ನಮ್ಮ ಸುತ್ತಮುತ್ತಲಿನ ಪರಿಸರವನ್ನು ಶುಚ್ಚಿಯಾಗಿಡುವಲ್ಲಿ ಇಂದೇ ಕಾರ್ಯೋನ್ಮುಖರಾಗೋಣ ಎಂದು ಬಿಜೆಪಿ ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ಸಂಗನಗೌಡ ಪಾಟೀಲ ಹೇಳಿದರು.
ಅವರು ಶನಿವಾರ ಕಕಮರಿ ಗ್ರಾಮದಲ್ಲಿ ನಮೋ ಸೇವಾ ಕೇಂದ್ರ ಅಥಣಿ ಹಾಗೂ ಸಂಗನಗೌಡ ಪಾಟೀಲ ಅಭಿಮಾನಿಗಳ ಬಳಗ ಕಕಮರಿ ಹಾಗೂ ಕೊಟ್ಟಲಗಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿ, ಮಹಾತ್ಮ ಗಾಂಧಿ 150ನೇ ಜನ್ಮ ಶತಮಾನೋತ್ಸವ 2019 ರಲ್ಲಿ ನಡೆಯಲಿದ್ದು, ಪ್ರಧಾನಿ ಮೋದಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಸ್ವಚ್ಛತಾ ಆಂದೋಲನ ಯಶಸ್ವಿಯಾಗಿ ಮಾಡಿ ಕೊಡುಗೆ ನೀಡಲು ಪಣ ತೊಟ್ಟಿದ್ದಾರೆ. ಅವರ ಸಂಕಲ್ಪಕ್ಕೆ ನಾವೇಲ್ಲರೂ ಕಂಕಣ ಬದ್ದರಾಗಬೇಕು.ನಮ್ಮ ಮನೆ-ಮನ ಸ್ವಚ್ಛವಾಗಿಟ್ಟುಕೊಳ್ಳಬೇಕು. ಅಂದಾಗ ಗಾಂಧಿ ಕಂಡ ಗ್ರಾಮ ರಾಜ್ಯ ಸಾಕಾರವಾಗಲು ಸಾದ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಪಂ ಮಾಜಿ ಸದಸ್ಯ ವೆಂಕಣ್ಣಗೌಡ ಪಾಟೀಲ, ಶಮೇನಸಾಬ ನಿಡೋಣಿ, ಶ್ರೀಶೈಲ ಸಿಂಧೂರ, ಶಿವಪ್ಪ ಜನಗೌಡ, ಲಾಯಪ್ಪ ದಾಶ್ಯಾಳ, ಗುರು ಆಜೂರ, ಭೀಮಪ್ಪ ಬಡವಗೋಳ, ಸಿದ್ದು ದಾನಪ್ಪಗೋಳ, ಸಂತೋಷ ಕನಮಡಿ, ರಾಜು ಡಂಗಿ, ದಯಾನಂದ ಬಾಳೀಕಾಯಿ, ಸಂಗಮೇಶ ಪುಠಾಣಿ, ಬಸವರಾಜ ಬಾಳಿಕಾಯಿ, ಶ್ರೀಧರ ಹೊನವಾಡ, ಈರಣ್ಣ ಜನಗೌಡ, ವಿಜಯ ಸಿಂಧೂರ, ಶ್ರೀಕಾಂತ ಸನದಿ ಸೇರಿದಂತೆ ಅನೇಕರು ಇದ್ದರು.

loading...