ಶಾಸಕ‌ ಕತ್ತಿಗೆ ವಚನ ಪಾಠ ಮಾಡಿದ ಸಿಎಂ

0
30
loading...

ಕನ್ನಡಮ್ಮ ಸುದ್ದಿ
ಸುವರ್ಣ ವಿಧಾನ ಸೌಧ, ಬೆಳಗಾವಿ:23 ಕಾಯಕವೇ ಕೈಲಾಸ್ ಎಂದರೆನಪ್ಪಾ ಕತ್ತಿ… ಮಾಜಿ ಸಚಿವ, ಶಾಸಕ ಉಮೇಶ ಕತ್ತಿ ಅವರಿಗೆ ವಿಧಾನ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಸವಣ್ಣನ ವಚನದ ಪಾಠ ಮಾಡಿದರು.
ವಿಧಾನ ಸಭೆಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದವನ್ನು ರಾಜ್ಯ ಸರಕಾರ ಅಭಿವೃದ್ಧಿ ಪಡಿಸಿದೆ‌. ಉಮೇಶ ಕತ್ತಿ ಇನ್ನು‌ ಮುಂದೆ ಪ್ರತ್ಯೇಕ ರಾಜ್ಯದ ಕುರಿತಾಗಿ ಮಾತನಾಡಬೇಡ ಎಂದು ಕಿವಿಮಾತು ಹೇಳಿದರು. ಈ ಭಾಗದಲ್ಲಿ ಜಾನುವಾರುಗಳು ಮೃತ್ತಪಟ್ಟರೇ ರೈತರಿಗೆ ಪರಿಹಾರ ನೀಡಿದ್ದೇವೆ ಎಂದು ಹೇಳಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕ ಉಮೇಶ ಕತ್ತಿ ಎಮ್ಮೆ ಕೋಣ ಸತ್ತರೆ ಪರಿಹಾರ ನಿಮ್ಮ ಸರಕಾರ ಪರಿಹಾರ ನೀಡುವುದಿಲ್ಲ. ಉತ್ತರ ಕರ್ನಾಟಕದಲ್ಲಿ ಹೆಚ್ಷು ಎಮ್ಮೆ ಕೋಣಗಳಿವೆ ಲಿಂಗಾಯತ ಪ್ರತ್ಯೇಕ  ಧರ್ಮದ ಹೋರಾಟ ಮಾಡುತ್ತಿರುವ ನಿಮ್ಮ ಎಂ.ಬಿ.ಪಾಟೀಲರಿಗೆ ಹೇಳಿ ಎಂದು ಲೇವಡಿ ಮಾಡಿದರು.
ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಯಕ ದಾಸೋಹ ಅಂದ್ರೇನು ಗೋತ್ತಾ ಕತ್ತಿ… ? ಎಂದು ಪ್ರಶ್ನಿಸಿದ ಅವರು, ಬಸವಣ್ಣನವರು ಕಾಯಕ ಎಂದಿದ್ದಾರೆ.  ಕಾಯಕದಿಂದ ಸಂಪನ್ಮೂಲ ಉತ್ಪಾದಿಸುವುದು. ದಾಸೋಹ ಎಂದರೇ ಹಾಸ್ಟೆಲ್ ಗಳಲ್ಲಿ, ಎಲ್ಲರೂ ಸೇರಿ ಊಟ ಮಾಡುವುದಲ್ಲ. ಉತ್ಪಾದನೆ ಮಾಡಿದ್ದನ್ನು ಬೇರೆಯವರಿಗೆ ಹಂಚುವುದು ಇದನ್ನಾ ಮೊದಲು ಎಲ್ರಿಗೂ ಹೇಳ್ರಿ.. ಗೋತ್ತಾಯ್ತೇನಪ್ಪ ಕತ್ತಿ ಹೋಗಿ ಎಲ್ಲರಿಗೂ ಹೇಳು ಎಂದು ಹಾಸ್ಯಚಟಾಕಿ ಹಾರಿಸಿದರು.
ಇನ್ನೂ ಮುಂದೆ ರಾಜ್ಯದಲ್ಲಿ ಎಮ್ಮೆ, ಕೋಣಗಳು ಮೃತಪಟ್ಟರೂ 10 ಸಾವಿರ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
loading...