ಶಾಸಕ ಜಾರಕಿಹೊಳಿ ಅವರ ಅಭಿವೃದ್ಧಿ ಕಾರ್ಯಗಳು ಶ್ಲಾಘನೀಯ :ತವಗಮಠ

0
19
  • ಶಾಸಕ ಜಾರಕಿಹೊಳಿ ಅವರ ಅಭಿವೃದ್ಧಿ ಕಾರ್ಯಗಳು ಶ್ಲಾಘನೀಯ :ತವಗಮಠ
    ಕನ್ನಡಮ್ಮ ಸುದ್ದಿ
loading...

ಸಂಕೇಶ್ವರ 26 :ಹಳ್ಳಿಗಳು ಸುಧಾರಣೆಯಾದರೆ ದೇಶ ಅಭಿವೃದ್ಧಿಯಾಗುತ್ತದೆ ಎಂಬ ಮಾತಿನಂತೆ ಇಡಿ ಕ್ಷೇತ್ರದಲ್ಲಿ ಹಳ್ಳಿಗಳೆ ಹೊಂದಿರುವ ಕ್ಷೇತ್ರ ಯಮಕನಮರಡಿ ಈ ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿರುವ ಶಾಸಕರಾದ ಸತೀಶ ಜಾರಕಿಹೋಳಿ ಅವರ ಕಾರ್ಯಗಳು ಶ್ಲಾಘನೀಯ ಎಂದು ಹೆಬ್ಬಾಳ ಜಿಲ್ಲಾ ಪಂಚಾಯತ ಸದಸ್ಯರು ಹಿರಿಯ ಕಾಂಗ್ರೆಸ್ ಮುಖಂಡರಾದ ಗಂಗಾಧರಸ್ವಾಮಿ ತವಗಮಠ ಇಂದಿಲ್ಲಿ ಹೇಳಿದರು.

ತಾಲ್ಲೂಕಿನ ಗೋಟುರ ಗ್ರಾಮದಲ್ಲಿ ಶಾಸಕರ ಅನುದಾನದಲ್ಲಿ ಮಂಜೂರಾದ ಇಪತ್ತು ಲಕ್ಷ ರೂಪಾಯಿ ಅನುಧಾನದ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ಸತೀಶ ಜಾರಕಿಹೊಳಿ ಅವರು ಹಳ್ಳಿಗಳ ಸುಧಾರಣೆ ಒತ್ತು ನೀಡುತ್ತಿದ್ದು ಇಂದು ಇಡಿ ಕ್ಷೇತ್ರದಲ್ಲಿ ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯಗಳಿಗೆ ಹೆಚ್ಚು ಗಮನ ನೀಡಿ ಗ್ರಾಮಗಳ ಅಭಿವೃದ್ಧಿ ಮಾಡುತ್ತಿದ್ದಾರೆ ಎಂದು ಶಾಸಕ ಸತೀಶ ಜಾರಕಿಹೊಳಿ ಅವರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಹರ್ಷ ವ್ಯಕ್ತ ಪಡಿಸಿದರು .
ಈ ಸಂದರ್ಭದಲ್ಲಿ ತಾ.ಪಂ ಸದಸ್ಯರಾದ ನಿಂಗನಗೌಡ ಪಾಟೀಲ,ಮುಖಂಡರಾದ ಶಂಕರಗೌಡ ಪಾಟೀಲ ,ಡಿ.ಬಿ.ಪಾಟೀಲ,ಹನುಮಂತ ಶೇಕನ್ನವರ,,ಕಲಗೌಡ ಕಮತೆ,ಸತೀಶ ಮನ್ನಿಕೇರಿ, ಗುರುನಾಥ ಶಿಂಧೆ,ಶಿವಾನಂದ ಮನ್ನಿಕೇರಿ,ದತ್ತಾ ಮನಗುತ್ತಿ ಗುತ್ತಿಗೆದಾದ ದುಂಡಪ್ಪಾ ಪಾಟೀಲ ಮುಂತಾದವರು ಉಪಸ್ಥಿತರಿದ್ದರು .

loading...