ಶೈಕ್ಷಣಿಕ ಪೀಠಗಳಲ್ಲಿ ಕೆಎಲ್‍ಇ ಸಂಸ್ಥೆ ಅಪ್ರತೀಮ ವೆನೆಸಿದೆ: ಡಾ. ಮಾಳಿ

0
35
loading...

ಕನ್ನಡಮ್ಮ ಸುದ್ದಿ-ನಿಪ್ಪಾಣಿ: ಪಂಚಪೀಠಗಳಲ್ಲಿ ಶ್ರೀಶೈ¯ ಪೀಠ ಉನ್ನತ ಮತ್ತು ಶ್ರೇಷ್ಠವೆನೆಸಿದರೆ, ಶೈಕ್ಷಣಿಕ ಪೀಠಗಳಲ್ಲಿ ಕೆಎಲ್‍ಇ ಸಂಸ್ಥೆ ಅಪ್ರತೀಮವೆನೆಸಿದೆ, ಆ ಸಂಸ್ಥೆಗೆ ಭದ್ರ ಬುನಾದಿ ಹಾಕಿದ ಸಪ್ತರ್ಷಿಗಳು ಅವಿಸ್ಮರಣಿಯರು ಎಂದು ಹಾರೂಗೇರಿಯ ಸಾಹಿತಿ ಡಾ. ವಿ ಎಸ್. ಮಾಳಿ ಅಭಿಪ್ರಾಯಪಟ್ಟರು.
ಕೆಎಲ್‍ಇ ಸಂಸ್ಥೆಯ ಸ್ಥಳೀಯ ಜಿ ಐ. ಬಾಗೇವಾಡಿ ಮಹಾವಿದ್ಯಾಲಯದ ಆಶೀರ್ವಾದ ಸಾಂಸ್ಕøತಿಕ ಭವನದಲ್ಲಿ ಸ್ಥಳೀಯ ಅಂಗಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಸೋಮವಾರ ಜರುಗಿದ ಕೆಎಲ್‍ಇ ಸಂಸ್ಥೆಯ 102ನೇ ಸಂಸ್ಥಾಪನಾ ದಿನಾಚರಣೆಯ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.ಕೆಎಲ್‍ಇ ಸಂಸ್ಥೆಯ ಸ್ಥಳೀಯ ವಿವಿಧ ಅಂಗಸಂಸ್ಥೆಗಳ ಮುಖ್ಯಸ್ಥ ಪ್ರಾಚಾರ್ಯ ಡಾ. ಎಸ್ ಬಿ. ಸೊಲಬನ್ನವರ, ಪ್ರಾಚಾರ್ಯ ಪಿ ಆಯ್. ಪಾಟೀಲ, ಪ್ರಾಚಾರ್ಯ ಶರ್ಮಿಸ್ಟಾ ರಾಯ್, ಸೇರಿದಂತೆ ಮಹಾವಿದ್ಯಾಲಯದ ವಿದ್ಯಾರ್ಥಿ ಬಳಗ, ಸಿಬ್ಬಂದಿ ಉಪಸ್ಥಿತರಿದ್ದರು.
ಶೃತಿ ಪಾಟೀಲ ಹಾಗೂ ಸಂಗಡಿಗರು ನಾಡಗೀತೆ ಗೀತೆ ಹಾಡಿದರು. ಶುಭಂ ಮಂಗಸೂಳಿ ಪ್ರಾರ್ಥಿಸಿದರು. ಪ್ರಾಚಾರ್ಯ ಡಾ. ಎಮ್ ಬಿ. ಕೋಥಳೆ ಸ್ವಾಗತಿಸಿದರು. ಡಾ. ಜೆ ಕೆ. ಸಾಬೊಜಿ ಮತ್ತು ಡಾ. ಡಿ ವಿ. ಬಡಿಗೇರ ಪರಿಚಯಸಿದರು. ಪ್ರೊ. ಭಕ್ತಿ ಕಮತೆ ಮತ್ತು ಪ್ರೊ. ಕುಮಾರ ತಳವಾರ ನಿರೂಪಿಸಿದರು. ಬಿ ಎಚ್. ಪರಮನಟ್ಟಿ ವಂದಿಸಿದರು

loading...