ಶೋಭಾ ಬೆಳ್ಳಿಕೊಪ್ಪ ವರ್ಗಾವಣೆ ರದ್ದುಪಡಿಸಬಾರದೆಂದು ಆಗ್ರಹ

0
27
loading...

ಕನ್ನಡಮ್ಮ ಸುದ್ದಿ-ಶಿರಹಟ್ಟಿ: ಸ್ಥಳೀಯ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಶೋಭಾ ಬೆಳ್ಳಿಕೊಪ್ಪ ಅವರ ವರ್ಗಾವಣೆಯನ್ನು ಯಾವುದೇ ಕಾರಣಕ್ಕೂ ರದ್ದುಗೊಳಿಸಬಾರದೆಂದು ಪಟ್ಟಣ ಪಂಚಾಯತಿಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ತಹಶೀಲ್ದಾರ ಮೂಲಕ ಜಿಲ್ಲಾಧಿಕಾರಿಗೆ ಇಂದು ಮನವಿ ಸಲ್ಲಿಸಿದರು.
ಶೋಭಾ ಪಟ್ಟಣ ಪಂಚಾಯತಿ ಸದಸ್ಯರ ಜೊತೆ ಅಸಹಕಾರ ಮತ್ತು ಅಗೌರವದೊಂದಿಗೆ ವರ್ತಿಸುವುದು ಜನಪ್ರತಿನಿಧಿಗಳೊಂದಿಗೆ ಸರಿಯಾಗಿ ಸ್ಪಂದಿಸದೇ ಸರ್ವಾಧಿಕಾರಿ ಧೋರಣೆ ಅನುಸರಿಸುವುದು ಮತ್ತು ಶಾಸಕರೊಂದಿಗೂ ಸಹ ಆಡಳಿತಾತ್ಮಕವಾಗಿ ಸರಿಯಾಗಿ ಸ್ಪಂದಿಸದೇ ಇರುವುದರಿಂದ ಕಳೆದ ದಿನಾಂಕ ಆ.3 ಹಾಗೂ 4 ರಂದು ಶಾಸಕರ ನೇತೃತ್ವದಲ್ಲಿ ಸರ್ಕಾರಕ್ಕೆ ಎರಡು ಪ್ರತ್ಯೇಕವಾಗಿ ದೂರುಗಳು ದಾಖಲಾಗಿದ್ದರಿಂದ ರಾಜ್ಯ ಸರ್ಕಾರ ಅ. 28 ರಂದು ಬಂಕಾಪೂರ ಪುರಸಭೆಗೆ ಇವರನ್ನು ವರ್ಗಾವಣೆಗೊಳಿಸಿ ಆದೇಶಿಸಿದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಅದರಂತೆ ಶೋಭಾ ಅವರನ್ನು ಬಿಡುಗಡೆಗೊಳಿಸಿದ್ದಾರೆ.
ಇದರಿಂದ ಪಟ್ಟಣ ಪಂಚಾಯತಿಯ ಕೆಲ ಸದಸ್ಯರು ವರ್ಗಾವಣೆಯನ್ನು ರದ್ದುಗೊಳಿಸಬೇಕೆಂದು ಶೋಭಾ ಅವರನ್ನು ಇಲ್ಲಿಯೇ ಮುಂದುವರೆಸುವಂತೆ ಮನವಿ ನೀಡಿದ್ದಾರೆ. ಒಬ್ಬ ಇಲಾಖೆ ಅಧಿಕಾರಿಗಳು ವರ್ಗಾವಣೆಯಾಗುವುದು ಸಾಮಾನ್ಯ ಹಾಗಾಗಿ ಈ ಅಧಿಕಾರಿ ಪರವಾಗಿ ಕೆಲ ರಾಜಕೀಯ ವ್ಯಕ್ತಿಗಳು ಶ್ರೀರಕ್ಷೇ ನೀಡುತ್ತಿದ್ದಾರೆ ಎಂದರೆ ಹಲವು ಕಾರಣಗಳಿಗೆ ಎಡೆಮಾಡಿದಂತಾಗಿದೆ ಎಂದು ಪಪಂ ಸದಸ್ಯ ಸಂತೋಸ ಕುರಿ ಅವರು ಆರೋಪಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ ಮಾಜಿ ಅಧ್ಯಕ್ಷ ಉಮಾಹಿನ್ ಮಾಗಡಿ, ಕನ್ನಡಪರ ಹೋರಾಟಗಾರ ಸುರೇಶ ಅಕ್ಕಿ, ಡಿಎಸ್‍ಎಸ್ ತಾಲೂಕಾ ಅಧ್ಯಕ್ಷ ಹೊನ್ನಪ್ಪ ಬಡೆಪ್ಪನವರ, ತಿಪ್ಪಣ್ಣ ನಿಲಣ್ಣವರ, ಮಂಜುನಾಥ ಸುಣಗಾರ, ಮಂಜುನಾಥ ಘಂಟಿ, ಮಾಬುಸಾಬ್ ಲಕ್ಷ್ಮೇಶ್ವರ, ಯಲ್ಲಪ್ಪಗೌಡ ಅಣ್ಣೀಗೇರಿ, ಈಶ್ವರ ಮುಂಡರಗಿ ಸೇರಿದಂತೆ ಇತರರು ಇದ್ದರು.

loading...