ಶ್ರೀಮಂತ ಭಾಷೆ ಕನ್ನಡ: ಕೋಮಾರ

0
30
loading...

ಮುಧೋಳ: ಅತ್ಯಂತ ಶ್ರೀಮಂತ ಭಾಷೆಯಾದ ಕನ್ನಡ ಹಿಂದೆಯೂ ಇತ್ತು ಇಂದು ಇದೆ ಮುಂದೆಯೂ ಇರುತ್ತದೆ ಇದು ಸೂರ್ಯ-ಚಂದ್ರರಷ್ಟೇ ಶಾಶ್ವತ ಭಾಷೆಯಾಗಿದೆ ಎಂದು ಜಿಲ್ಲಾ ಪಂಚಾಯತ ಉಪಾಧ್ಯಕ್ಷ ಮುತ್ತಪ್ಪ ಕೋಮಾರ ಹೇಳಿದರು.
ಬುಧವಾರ ತಾಲ್ಲೂಕಾ ಆಡಳಿತದಿಂದ ನಗರದ ನೂತನ ಬಾಲಕಿಯರ ಪ್ರೌಢ ಶಾಲೆಯಲ್ಲಿ ನಡೆದ ತಾಲ್ಲೂಕಾ ಮಟ್ಟದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿವಿಧ ರಂಗದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಮಾಡಿ ಅವರು ಮಾತನಾಡಿದರು.
ಹರಿದು ಹಂಚಿಹೋದ ಕನ್ನಡ ಭಾಷಿಗರನ್ನು ಒಂದು ಕೂಡಿಸಿದ ಇಂದಿನ ದಿನ ಎಲ್ಲರಿಗೂ ಉತ್ಸಾಹದ ದಿನವಾಗಿದ್ದು ಇನ್ನೂ ಅನ್ಯರಾಜ್ಯದಲ್ಲಿ ಉಳಿದ ಕನ್ನಡಿಗರನ್ನು ಮತ್ತೆ ರಾಜ್ಯದ ಮಾತೃಬಾಷಿಗರ ಜತೆಗೆ ಸೇರಿಸುವ ಪ್ರಯತ್ನ ಹಲವು ವರ್ಷಗಳಿಂದ ನಡೆಯುತ್ತಲೇ ಇದೆ ಎಂದು ಹೇಳಿದರು.
ಉಪನ್ಯಾಸಕರಾಗಿ ಆಗಮಿಸಿದ ನಿವೃತ್ತ ಉಪನ್ಯಾಸಕ ಎಸ್‌.ಬಿ.ಕೃಷ್ಣೇಗೌಡರ ಮಾತನಾಡಿ ಕನ್ನಡ ಭಾಷೆ, ಕನ್ನಡ ಭಾಷಿಗರು ಒಟ್ಟಾಗಿ ಮುನ್ನಡೆದರೆ ಕನ್ನಡದ ನೆಲ, ಜಲ,ಬಾಷೆಗೆ ಯಾವೂದೇ ದಕ್ಕೆ ಬಾರದು, ಮಹದಾಯಿ, ಕೃಷ್ಣಾ ಕಣಿವೆ, ಕಾವೇರಿ ವಿಷಯದಲ್ಲಿ ನಾವೆಲ್ಲ ಒಂದಾಗಿ ಪಕ್ಷಾತೀತ ಜ್ಯಾತ್ಯಾತೀತವಾಗಿ ಕನ್ನಡ ಮನಸುಗಳು ಒಂದು ಎಂದು ಹೋರಾಟ ಮಾಡುವ ಬೇಕಾಗಿದೆೆಂದು ಹೇಳಿದರು.
ತಾ.ಪಂ ಅಧ್ಯಕ್ಷ ತಿಮ್ಮಣ್ಣ ಬಟಕುರ್ಕಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಗರಸಭೆ ಅಧ್ಯಕ್ಷೆ ದ್ರಾಕ್ಷಾಯಣಿ ಹಲಸಂಗಿಮಠ, ನಿತಹಸೀಲ್ದಾರ ಡಿ.ಜಿ.ಮಹಾತ್‌, ತಾ.ಪಂ ಇಓ ಬಿ.ವಿ.ಅಡವಿಮಠ,ವೀಣಾ ದೇಸಾಯಿ, ಕಸಾಪ ಅಧ್ಯಕ್ಷ ಸಂಗಮೇಶ ನೀಲಗುಂದ,ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಮೇಶ ನಿಡೋಣಿ,ಸಂಗಪ್ಪ ಇಮ್ಮಣ್ಣವರ,ಪೌರಾಯುಕ್ತ ಆರ್‌.ಪಿ.ಜಾದವ,ನ್ಯಾಯವಾದಿ ಐ.ಎಚ್‌.ಅಂಬಿ,ಎಂ.ಎಚ್‌.ಚಿಪ್ಪಲಕಟ್ಟಿ,ಮಹಾಂತೇಶ ನರಸನಗೌಡರ,ಪಿಎಸ್‌ಐ ಶಿವಶಂಕರ ಮುಖರಿ,ಸಿಪಿಐ ಕರಿಯಪ್ಪ ಬನ್ನಿ, ಎ.ವೈ.ಚಿಕ್ಕನಗೌಡರ ಸೇರಿದಂತೆ ಇತರರು ಇದ್ದರು.
ಸನ್ಮಾನ:- ಇದೇ ಸಂದರ್ಭದಲ್ಲಿ ಎಸ್‌.ಎಸ್‌.ಎಲ್‌.ಸಿಯಲ್ಲಿ 125 ಅಂಕ ಪಡೆದ ತಾಲ್ಲೂಕಿನ 6 ವಿದ್ಯಾರ್ಥಿಗಳನ್ನು ಮತ್ತು ಎಸ್‌.ಎಸ್‌.ಎಲ್‌.ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮಹೇಶ ಮನ್ನಯ್ಯನವರಮಠÀ(ಪತ್ರಿಕಾರಂಗÀ) ವೆಂಕಟೇಶ ಗುಡೆಪ್ಪನವರ(ಸಾಹಿತ್ಯ) ಗಣೇಶ ಮೇತ್ರಿ(ಪತ್ರಿಕಾ ರಂಗ), ವೈ.ಬಿ.ಗೋಸರವಾಡ, ಮಲ್ಲು ಒಗ್ಗೆನವರÀ(ಆರಕ್ಷಕ) ಶ್ರೀಕಾಂತ ಮೇಗಾಡಿ,ವೈ.ಎಸ್‌.ಅಗಸರ, ಚಂದ್ರಕಾಂತ ಸಕ್ರೋಜಿ, ಅನ್ನಪೂರ್ಣ ಸಕ್ರೋಜಿ, (ಸಾಹಿತ್ಯ)ವೀರಣ್ಣ ಕೊಡ್ಡಣ್ಣವರ(ಶಿಕ್ಷಣ), ಅಶೋಕ ಜನಗೌಡರ ಹುಕುನವರ, ಆರ್‌.ಸಿ.ವಾರದ, ಪ್ರೀತಮ ನಗಡೆ (ಚಲನಚಿತ್ರ), ಬಸವರಾಜ ಲಕ್ಷ್ಮೇಶ್ವರ ದಂಪತಿ(ಕಲೆ) ಸೇರಿದಂತೆ ಹಲವಾರು ಸಾಧಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಸಿಆರ್‌ಪಿಓ ಮಹಾಂತೇಶ ನರಸನಗೌಡರ ಸ್ವಾಗತಿಸಿ. ಸಿ.ಎಲ್‌.ರೂಗಿ ನಿರೂಪಿಸಿ, ಮಂಜುಳಾ ಕಲ್ಯಾಣಿ ನಿರೂಪಿಸಿ ಎಸ್‌.ಡಿ.ನೀಲಗುಂದ ವಂದಿಸಿದರು.

loading...