ಶ್ರೀಗಳ ಹೇಳಿಕೆ ಖಂಡಿಸಿ ಮೌನ ಪ್ರತಿಭಟನೆ

0
26
loading...

ಕನ್ನಡಮ್ಮ ಸುದ್ದಿ- ಬೀಳಗಿ: ವೀರಶೈವ-ಲಿಂಗಾಯತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತ ಹೇಳಿಕೆಯನ್ನು ನೀಡಿದ ಕೂಡಲಸಂಗಮದ ಸ್ವಯಂ ಘೋಷಿತ ಪಂಚಮಸಾಲಿ ಪೀಠದ ಜಯ ಬಸವ ಮೃತಂಜ್ಯಯ ಸ್ವಾಮಿರವರ ಹೇಳಿಕೆ ಖಂಡಿಸಿ ಹಾಗೂ ಕೇಂದ್ರ ಮತ್ತು ರಾಜ್ಯ ಸರಕಾರ ವೀರಶೈವ-ಲಿಂಗಾಯತ ಧರ್ಮವನ್ನು ಅನುಷ್ಟಾನಕ್ಕೆ ತರಬೇಕೆಂದು ಒತ್ತಾಯಿಸಿ ಬೀಳಗಿ ತಾಲೂಕಿನ ಧಾರ್ಮಿಕರ ಮುಖಂಡರ ನೇತೃತ್ವದಲ್ಲಿ ಬಸವೇಶ್ವರ ವೃತದಿಂದ ತಹಶೀಲ್ದಾರ ಕಛೇರಿಯವರಿಗೆ ಮೌನ ಪ್ರತಿಭಟನೆ ನಡೆಸಿದರು.
ನೇತ್ರತ್ವ ವಹಿಸಿದ ಗಿರಿಸಾಗರ ಕಲ್ಯಾಣಹಿರೇಮಠದ ರುದ್ರಮುನಿ ಶಿವಾರ್ಚಾಯರು ಮಾತನಾಡಿ ಕೂಡಲ ಸಂಗಮದ ಪಂಚಮಸಾಲಿ ಪೀಠದ ಸ್ವಾಮಿಜಿಯವರು ವೀರಶೈವ ಲಿಂಗಾಯತದ ಜನಾಂಗದವರು ಕಾವಿ ಬಗ್ಗೆ ಹೊಂದಿರುವ ಗೌರವವನ್ನು ಹಾಳು ಮಾಡಿದಲ್ಲದೆ ತಾವು ತನ್ನತನವನ್ನು ಮರೆತು ಬಸವತತ್ವದ ಅನೂಯಾಯಿ ಎಂದು ಹೇಳುವ ಇವರು ಅಸಂಬದ್ಧವಾದ ಹೇಳಿಕೆಯನ್ನು ನೀಡಿ ಒಂದೇ ಕುಟುಂಬದತ್ತಿದ ನಮ್ಮ ವೀರಶೈವ ಲಿಂಗಾಯತ ಧರ್ಮವನ್ನು ಇಬ್ಬಾಗ ಮಾಡಿ ರಾಜಕೀಯ ಬೇಳೆ ಬೆಯಿಸಿಕೊಳ್ಳತ್ತಿರುವ ನೀವು ಸಾರ್ವಜನಿಕವಾಗಿ ವೀರಶೈವ-ಲಿಂಗಾಯತ ಸಮಾಜದ ಜನಾಂಗಕ್ಕೆ ಆಗಿರುವ ನೋವು ಶಮನವಾಗಬೇಕಾದರೆ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು, ಕೇಂದ್ರ ಹಾಗೂ ರಾಜ್ಯ ಸರಕಾರ ವೀರಶೈವ-ಲಿಂಗಾಯತ ಧರ್ಮವನ್ನು ಅನುಷ್ಟಾನಗೊಳಿಸಬೇಕು ಎಂದು ಒತ್ತಾಯಿಸಿದರು.

ಸಂಗಪ್ಪ ಕಟಗೇರಿ ಮಾತನಾಡಿ ರಾಜಕೀಯ ಲಾಭಗೋಸ್ಕರ ಸಚಿವರಾದ ಎಂ.ಬಿ.ಪಾಟೀಲ, ವಿನಯ ಕುಲಕರ್ಣಿ, ಶಿವಶರಣಗೌಡ ಪಾಟೀಲ, ಹಾಗೂ ವಿ.ಪ.ಸದಸ್ಯ ಬಸವರಾಜ ಹೊರಟ್ಟಿ ನಮ್ಮ ವೀರಶೈವ ಲಿಂಗಾಯತ ಧರ್ಮವನ್ನು ಹೊಡೆದು ಪ್ರತ್ಯೇಖ ಲಿಂಗಾಯತ ಧರ್ಮ ಸ್ಥಾಪನೆ ಮಾಡಲು ಹೊರಟಿರುವದರಿಂದ ಗಂಭೀರವಾದ ಪರಿಣಾಮ ಎದುರಿಸುವಂತ ದಿನಗಳು ದೂರವಿಲ್ಲ. ಕೂಡಲ ಸಂಗಮ ಶ್ರೀಗಳು ಹೇಳಿಕೆ ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.

ಕಲ್ಮಠದ ಗುರುಪಾದ ದೇವರು, ಬಸವರಾಜ ಉಮಚಗಿಮಠ, ಪ್ರಭಯ್ಯ ಹಿರೇಮಠ, ಶಿವಾನಂದ ನಿಂಗನೂರ, ವಿ.ಜಿ.ರೇವಡಿಗಾರ, ಶಂಕರಗೌಡ ಹಿರೇಗೌಡರ, ವಿರುಪಾಕ್ಷಯ್ಯ ಹಿರೇಮಠ, ಆರ್. ಎಸ್.ವಸ್ತ್ರದ, ಎಸ್.ಡಿ. ಚೌಕಿಮಠ, ಮುತ್ತು ವಸ್ತ್ರದ, ಬಸವರಾಜ ಮೋದಿ, ಶ್ರೀಶೈಲ ಯಂಕಚಿ, ಮಳಯ್ಯ ಹಿರೇಮಠ, ಕೋಮಾರದೇಶಾಯಿ, ಆರ್ ಎಸ್. ಬೆಣ್ಣಿರೋಟ್ಟಿ, ಮಲ್ಲಪ್ಪ ಗುರಪ್ಪ ಗೋಡಿ, ಮಹಾದೇವಪ್ಪ ಪಟ್ಟಶೆಟ್ಟಿ, ಸಂಗಯ್ಯ ಹಿರೇಮಠ ನಿಂಗಪ್ಪ ನಿಂಗನೂರ, ಚನ್ನಯ್ಯ ಹಿರೇಮಠ ಶೇಖರ ಕಾಖಂಡಕಿ, ಸುಭ್ರಾಯಗೌಡ ಪಾಟೀಲ ಇದ್ದರು.

loading...