ಸಂಘಟನೆಯ ಹೋರಾಟ ಹಿಂದುಳಿದ ವರ್ಗಗಳ ಪರವಾಗಿ ನಡೆಸಬೇಕು

0
26
loading...

ಮುದ್ದೇಬಿಹಾಳ: ಸಮಾಜದಲ್ಲಿ ಶೋಷಣೆಗೊಳಗಾಗುತ್ತಿರುವ ದಲಿತರು, ಅಲ್ಪಸಂಖ್ಯಾತರ, ಹಿಂದುಳಿದ ವರ್ಗಗಳ ಪರವಾಗಿ ಸಂಘಟನೆಗಳು ಹೋರಾಟ ನಡೆಸಬೇಕು ಎಂದು ಅಂಬೇಡ್ಕರ್ ಸೇನೆ ಉತ್ತರ ಕರ್ನಾಟಕ ಪ್ರಧಾನ ಕಾರ್ಯದರ್ಶಿ,ಸಿಂಧಗಿ ತಾಲೂಕಾಧ್ಯಕ್ಷ ಸಂತೋಷ ಸಿಂಗೆ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಅಂಬೇಡ್ಕರ್ ಸೇನೆ(ರಿ) ಮುದ್ದೇಬಿಹಾಳ ತಾಲೂಕಾ ನೂತನ ಘಟಕದ ಉದ್ಘಾಟನೆ ಹಾಗೂ ಪದಾಧಿಕಾಸರಿಗಳಿಗೆ ಅಧಿಕಾರದ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಂಘಟನೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಲ್ಲಿ ತಾವು ಸಂಘಟನೆಯೊಂದರ ಮುಖ್ಯಸ್ಥರು ಎಂದು ವಿಸಿಟಿಂಗ್ ಕಾರ್ಡ್, ಲೆಟರ್ ಹೆಡ್ ಮಾಡಿಸಿ ಜೇಬಿನಲ್ಲಿಟ್ಟುಕೊಂಡು ಪಿಡಿಓ, ಪಿಎಸೈ ಮತ್ತಿತರರ ಸರಕಾರಿ ಇಲಾಖೆಯ ಅಧಿಕಾರಿಗಳಿಗೆ ಬೆದರಿಸುವುದು, ಹಣ ವಸೂಲಿ ಮಾಡುವುದನ್ನು ಬಿಟ್ಟು ಸರಕಾರಿ ಸೌಲಭ್ಯಗಳನ್ನು ಕೊಡಿಸುವಲ್ಲಿ ತಾರತಮ್ಯ ಮಾಡುತ್ತಿರುವ ವ್ಯವಸ್ಥೆಯ ವಿರುದ್ಧ ಹೋರಾಟ ಮಾಡಬೇಕು.ನಮ್ಮವರೇ ನಮ್ಮನ್ನು ತುಳಿಯುವ ಪರಿಸ್ಥಿತಿ ಸಮಾಜದಲ್ಲಿದ್ದು ಅದಕ್ಕೆ ಎಂದಿಗೂ ಅವಕಾಶ ನೀಡಬಾರದು ಎಂದು ಹೇಳಿದರು.

ಇದೇ ವೇಳೆ ಸಂಘಟನೆಯ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಪ್ರಕಾಶ ಚಲವಾದಿ (ಸರೂರ), ತಾಲೂಕಾ ಪ್ರಧಾನ ಕಾರ್ಯದರ್ಶಿ ಅಪ್ಪು ತಳವಾರ, ವಿದ್ಯಾರ್ಥಿ ಘಟಕದ ಅಧ್ಯಕ್ಷರಾಗಿ ಮಂಜುನಾಥ ಅರಸನಾಳ,ವಿವಿಧ ಗ್ರಾಮ ಘಟಕದ ಅಧ್ಯಕ್ಷರನ್ನಾಗಿ ರಮೇಶ ಮಾದರ (ಹಂಡರಗಲ್),ಬಸವರಾಜ ಕಟ್ಟಿಮನಿ(ಮೂಕಿಹಾಳ)
ಮುತ್ತು ಮಾದರ(ನಾಲತವಾಡ)ರಮೇಶ ಚಲವಾದಿ (ರೂಢಗಿ) ಬಾಲು ಚಲವಾದಿ (ಜಲಪೂರ) ಎಂ.ಎಚ್.ಭಜಂತ್ರಿ (ಕಾಳಗಿ) ಅವರಿಗೆ ಅಧಿಕಾರ ಪತ್ರ ವಿತರಿಸಲಾಯಿತು.ಮುಖಂಡ ಸುರೇಶ ಹೊಸಮನಿ,ಶ್ರೀಕಾಂತ ಚಲವಾದಿ,ದೇವೇಂದ್ರ ಚಲವಾದಿ,ಸುನೀಲ ಧರ್ಮಗಿರಿ ಇದ್ದರು.ರಮೇಶ ಮಾದರ ನಿರೂಪಿಸಿದರು.

loading...