ಸಂಚಾರಿ ತಾರಾಲಯ : ಮಕ್ಕಳಲ್ಲಿ ಖಗೋಳ ಶಾಸ್ತ್ರದ ಜ್ಞಾನ ಹೆಚ್ಚಿಸಲು ಅನುಕೂಲ

0
38
loading...

ಗದಗ : ಖಗೋಳ ಶಾಸ್ತ್ರದ ಕುರಿತು ಮಕ್ಕಳಲ್ಲಿ ಜ್ಞಾನ ಹೆಚ್ಚಿಸಲು ರಾಜ್ಯ ಸರಕಾರದ ಸಂಚಾರಿ ತಾರಾಲಯ ಕಾರ್ಯಕ್ರಮ ಅತ್ಯಂತ ಉಪಯುಕ್ತವಾಗಿದೆ ಎಂದು ರಾಜ್ಯ ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ನುಡಿದರು.
ಜಿಲ್ಲಾಡಳಿತ ಭವನದಲ್ಲಿರುವ ಅಡಿಟೋರಿಯಂ ಹಾಲ್‍ನಲ್ಲಿಂದು ಸಂಚಾರಿ ತಾರಾಲಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶಾಲಾ ಮಕ್ಕಳಿಗೆ ಬೋಧನೆ ಪರಿಣಾಮಕಾರಿ ಆಗಲು ಪ್ರಯೋಗಗಳು ಅತ್ಯಂತ ಉತ್ತಮ ಕ್ರಮವಾಗಿದೆ. ಆ £ಟ್ಟಿನಲ್ಲಿ ಸಂಚಾರಿ ತಾರಾಲಯ ವಿಧ್ಯಾರ್ಥಿಗಳಿಗೆ ಒಂದು ಉತ್ತಮ ಅನುಭಬವಾಗಿದೆ. ನಿಸರ್ಗದಲ್ಲಿ ಅನೇಕ ವೈಜ್ಞಾ£ಕ £ಗೂಢತೆಗಳಿವೆ. ಅವುಗಳ ಅಧ್ಯಯನಕ್ಕೆ ಇಂತಹ ಪ್ರಯೋಗಗಳು ಅವಶ್ಯವಾಗಿವೆ. ಈ ಸಂಚಾರಿ ತಾರಾಲಯ ಕಾರ್ಯಕ್ರಮವನ್ನು ಕೇವಲ ಸರಕಾರಿ ಫ್ರೌಢಶಾಲೆಗಳಿಗೆ ಸೀಮಿತಗೊಳಿಸದೆ ಎಲ್ಲ ಪ್ರೌಢ ಶಾಲೆಗಳಿಗೂ ವಿಸ್ತರಿಸಬೇಕು ಎಂದು ಸಲಹೆ ಮಾಡಿದರ ಎಸ್.ವಿ.ಸಂಕನೂರ ಗದಗ ಜಿಲ್ಲೆಗೆ ತಾರಾಲಯ ಹಾಗೂ ವಿಜ್ಞಾನ ಕೇಂದ್ರಗಳನ್ನು ಮಂಜೂರು ಮಾಡಿದ್ದಕ್ಕೆ ರಾಜ್ಯ ಸರಕಾರವನ್ನು ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಗದಗ ಜಿಲ್ಲಾಧಿಕಾರಿ ಮನೋಜ್ ಜೈನ್ ಅವರೊಂದಿಗೆ ಎಸ್.ವಿ.ಸಂಕನೂರ ಡಿಜಿಟಲ್ ತಾರಾಲಯ ವ್ಯವಸ್ಥೆ ಕುರಿತು ಮಾಹಿತಿಯನ್ನು ಪಡೆದರು.
ವರ್ಣಾಸ್ ಸಂಸ್ಥೆಯ ಸಿ.ಇ.ಓ ದಿನೇಶ ಬಾಡಗಂಡಿ ಮಾತನಾಡಿ ಖಗೋಳ ಶಾಸ್ತ್ರ ಹಾಗೂ ವಿಜ್ಞಾನದ ಕುರಿತು ಗ್ರಾಮೀಣ ಪ್ರದೇಶ ವಿಧ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ಅಗತ್ಯವಾಗಿದೆ. ಆ ದಿಸೆಯಲ್ಲಿ ಪ್ರೌಢ ಶಾಲಾ ಪಠ್ಯ ಕ್ರಮಕ್ಕನುಗುಣವಾಗಿ ಈ ಸಂಚಾರಿ ತಾರಾಲಯದಲ್ಲಿ ಪ್ರಯೋಗ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ಐದು ಸಂಚಾರಿ ತಾರಾಲಯ ವಾಹನಗಳು ಸಂಚರಿಸುತ್ತಿವೆ. ಮಕ್ಕಳಲ್ಲಿ ವಿಜ್ಞಾನದ ಕುರಿತು ಕುತೂಹಲ ಮೂಡಿಸಲು ಈ ಡಿಜಿಟಲ್ ತಾರಾಲಯ ತುಂಬುವ ಆಶಯವನ್ನು ಅವರು ವ್ಯಕ್ತ ಪಡಿಸಿದರು.
ಸಂಸ್ಥೆ £ರ್ದೇಶಕ ಅನಂತ ಕುಲPರ್ಣಿ, ಶಿಕ್ಷಣ ಇಲಾಖೆಯ ಜಿ.ಎಲ್.ಬಾರಾಟಕ್ಕೆ, ಆರ್.ಎಸ್.ಬುರಡಿ, ಸಿದ್ದಲಿಂಗ ನಗರದ ಸರಕಾರಿ ಪ್ರೌಢ ಶಾಲೆ ವಿಧ್ಯಾರ್ಥಿಗಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು. ಎ.ಎಂ.ವಡಿಗೇರಿ ಸ್ವಾಗತಿಸಿದರು, ಜಿ.ಟಿದಾಸರ ವಂದಿಸಿದರು. ಶ್ರೀಮತಿ ಗೌಡರ ಕಾಂiÀರ್iಕ್ರಮ £ರೂಪಿಸಿದರು.

loading...