ಸಂತ ಶ್ರೇಷ್ಠ ಕನಕದಾಸರ ಜೀವನ ಅಪರೂಪ: ಲಕ್ಷ್ಮಣ ಸವದಿ

0
29
loading...

ಅಥಣಿ : ದಾಸ ಪಂಕ್ತಿಯಲ್ಲಿ ಸಂತ ಶ್ರೇಷ್ಟ ಕನಕದಾಸರ ಜೀವನ ಆದರ್ಶಗಳು ನಮ್ಮೆಲ್ಲರಿಗೂ ದಾರಿದೀಪವಾಗಿವೆ. ಹಾಗೂ ಅವರ ಜೀವನ ಅಪರೂಪ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ತಾಲೂಕಾಡಳಿತದ ವತಿಯಿಂದ ಮಿನಿ ವಿಧಾನಸೌದಲ್ಲಿ ಹಮ್ಮಿಕೊಂಡ ಕನಕದಾಸರ ಜಯಂತಿ ಸಮಾರಂಭದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಾತನಾಡಿದ ಅವರು, ಶೈಕ್ಷಣಿಕವಾಗಿ ಹಾಲುಮತ ಸಮುದಾಯ ಪ್ರಗತಿದಾಯಕ ಮಾರ್ಗದಲ್ಲಿ ನಡೆದು ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಬೆಳೆಯುವಲ್ಲಿ ಎರಡು ಮಾತಿಲ್ಲ ಎಂದರು.
ಉಪತಹಸೀಲ್ದಾರ ರಾಜು ಬುರ್ಲಿ ಮಾತನಾಡಿ ,ಕನಕದಾಸರ ಜೀವನದ ಮೌಲ್ಯಗಳನ್ನು ಎಲ್ಲರು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಲ್ಲಿ ಜೀವನ ಪಾವನಮಯವಾಗುವುದು ಎಂದರು.

ಅಧಿಕಾರಿಗಳಾದ ಎ.ಟಿ.ಅಸ್ಕಿ ,ಎ.ಬಿ.ಢವಳೇಶ್ವರ,ಎಂ.ಎಸ್.ಒಡೆಯರ, ಆರ್.ಡಿ.ಧರಿಗೌಡರ, ಡಿವೈಎಸ್.ಪಿ.ಎಂ.ಬಿ.ಬಸರಗಿ, ಸಿ.ಪಿ.ಐ ಎಚ್.ಶೇಖರಪ್ಪ ಮತ್ತು ಹಾಲಮತ ಸಮುದಾಯದ ಮುಖಂಡರು ಗಣ್ಯಮಾನ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.

loading...