ಸಂಸ್ಥೆಗಳು ಜನರಿಗೆ ದಾರಿ ದೀಪವಾಗಬೇಕು: ಉತ್ತರಕರ

0
18
loading...

ಕನ್ನಡಮ್ಮ ಸುದ್ದಿ-ವಿಜಯಪುರ: ಸಾಮಾನ್ಯ ಜನರ ಅಭಿವೃದ್ಧಿಯೇ ಸಂಸ್ಥೆಗಳ ಧ್ಯೇಯ, ಉದ್ಯೋಶವಾಗಬೇಕು ಎಂದು ರುಡಸೆಟ್ ಸಂಸ್ಥೆ ನಿರ್ದೇಶಕ ಆರ್.ಟಿ ಉತ್ತರಕರ ಅಭಿಪ್ರಾಯಪಡೆಸಿದರು.
ವೆಂಕಟೇಶ ನಗರದ ಭಾಗ್ಯವಂತಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಂಸ್ಥೆಯಲ್ಲಿ ಗುರುವಾರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಸಂಸ್ಥೆಗಳು ಜನರಿಗೆ ದಾರಿ ದೀಪವಾಗಬೇಕು. ಇಂತಹ ಸಂಸ್ಥೆಗಳಿಗೆ ಸರ್ಕಾರವು ಹಲವಾರು ಯೋಜನೆಗಳ ನೀಡುತ್ತಿದ್ದು, ಈ ನಿಟ್ಟಿನಲ್ಲಿ ಒಳ್ಳೆಯ ಮಾರ್ಗದರ್ಶಕರಾಗಿ, ಸಂಸ್ಥೆಯ ಅಡಿಯಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ಕಾರ್ಯವಾಗಬೇಕು ಎಂದರು.

ಈ ಸಂದರ್ಭದಲ್ಲಿ ಹಡಪದ ಅಪ್ಪಣ್ನ ವಿವಿಧ ಉದ್ದೇಶಗಳ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಎನ್.ಎ. ನಾವಿ, ಉಪಾಧ್ಯಕ್ಷ ನರಸು ನಾವಿ, ಮಲ್ಲಿಕಾರ್ಜುನ ನಾವಿ, ನಾಗಮ್ಮ ಕಲ್ಮಠ, ಶೃತಿ ನಾವಿ ಅವರನ್ನು ಸನ್ಮಾನಿಸಲಾಯಿತು.
ಶ್ರೀ ಭಾಗ್ಯವಂತಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಂಸ್ಥೆ ಅಧ್ಯಕ್ಷೆ ಭಾರತಿ ನಾವಿ ಅಧ್ಯಕ್ಷತೆಯನ್ನು ವಹಿಸಿದ್ದರು. ಕುಬಸದ, ಎಸ್.ಜಿ. ಚಿಂಚೋಳಿ, ಎಂ.ಎಸ್.ಮಠ, ಎಸ್.ಜಿ. ಪೂಜಾರಿ, ಬಿ.ವ್ಹಿ.ಕತಕನಹಳ್ಳಿ, ವಿರುಪಾಕ್ಷಿ ಕತ್ನಳ್ಳಿ, ಶಿವಾನಂದ ತೊರವಿ ಮುಂತಾದವರು ಇದ್ದರು.

loading...