ಸತತ ಬರಗಾಲದಿಂದ ರಾಜ್ಯದ ರೈತರು ತತ್ತರ: ಯಾದವಾಡ

0
16
loading...

ರಾಮದುರ್ಗಃ ರಾಜ್ಯದಲ್ಲಿ ಸತತ ಬರಗಾಲ ಆವರಿಸಿದ್ದರಿಂದ ರೈತರು ಸಂಕಷ್ಟ ಎದುರಿಸುತಿದ್ದಾರೆ ಸರ್ಕಾರ ರೈತರಿಗೆ ಯಾವುದೇ ರೀತಿಯ ಸಹಕಾರ ಸ್ಪಂಧಿಸುತ್ತಿಲ್ಲ ಎಂದು ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಆರೋಪಿಸಿದರು.
ಪಟ್ಟಣದ ಪತ್ರಿಕಾಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ಹಿಂಗಾರು ಮಳೆ ಹೆಚ್ಚು ಸುರಿದ ಕಾರಣ ಗೋವಿನಜೋಳ ಬೆಳೆ ನಾಶವಾಗಿವೆ ಹಾಗೂ ದರ ಇಳಿಕೆ ಯಾಗಿದೆ 1700 ರಿಂದ 1150ಕ್ಕೆ ಇಳಿಕೆ ಯಾಗಿದೆ ಶೀಘ್ರವಾಗಿ ಸರ್ಕಾರ ಗೋವಿನಜೋಳ ಖರೀದಿ ಕೇಂದ್ರವನ್ನು ಆರಂಭಿಸಿ ಬೆಂಬಲ ಬೆಲೆಯಲ್ಲಿ ರೈತರ ಮಕ್ಕೆಜೋಳವನ್ನು ಖರೀದಿ ಮಾಡಬೇಕೆಂದು ಆಗ್ರಹಿಸಿದರು.
ಈ ಹಿಂದೆ ತಾಲೂಕಿಗೆ ಬಿಡುಗಡೆಯಾದ ಬೆಳೆಹಾನಿ ಪರಿಹಾರದಲ್ಲಿ ಸಾಕಷ್ಟು ಅವ್ಯವಹಾರವಾಗಿದ್ದು ಅಧಿಕಾರಿಗಳ ಮೇಲಾ ಕೇಸ್‌ ದಾಕಲಾದರು ಯಾವುದೇ ಕ್ರಮ ಕೈಗೊಳ್ಳಲು ಸರ್ಕಾರ ಹಿಂದೆಟು ಹಾಕುತ್ತಿದೆ. ರಾಮದುರ್ಗ ನಗರದಲ್ಲಿ 18 ರಂದು ಬಿಜೆಪಿ ಪರಿವರ್ತನಾ ರ್ಯಾಲಿ ಬರುವ ಹಿನ್ನೆಲೆಯಲ್ಲಿ ನ 8 ರಂದು ಮರಾಠಾ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ತಾಲೂಕಿನ ಎಲ್ಲ ಕಾರ್ಯಕರ್ತರು ಭಾಗವಹಿಸಬೇಕೆಂದು ಹೇಳಿದರು. ಬಿಜೆಪಿ ತಾಲೂಕಾ ಅಧ್ಯಕ್ಷರು ಹಾಗೂ ತಾಲೂಕಿ ಚುನಾಯಿತ ಜನಪ್ರತಿನಿಧಿಗಳು ಹಾಗೂ ಬಿಜೆಪಿ ಮುಂಖಂಡರ ಸೇರಿದಂತೆ ಇತರರು ಇದ್ದರು.

loading...