ಸಮತಟ್ಟಾದ ರಸ್ತೆ ನಿರ್ಮಾಣದ 1 ಕೋಟಿ ವೆಚ್ಚದ ಕಾಮಗಾರಿ ವೀಕ್ಷಣೆ

0
16
loading...

ರಾಮದುರ್ಗ: ಭಾರವಾದ ವಸ್ತುಗಳನ್ನು ಸಾಗಿಸಲು ಸಮಸ್ಯೆ ಎದುರಿಸುತ್ತಿದ್ದ ವಾಹನಗಳ ಸಂಚಾರಕ್ಕೆ ಸರಳವಾದ ರಸ್ತೆ ನಿರ್ಮಿಸುವ ಕಾಮಗಾರಿಗಳನ್ನು ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ತಾಲೂಕಿನ ಕಿಲ್ಲಾ ತೊರಗಲ್ಲದಲ್ಲಿ ವೀಕ್ಷಣೆ ಮಾಡಿದರು.
ಕಿಲ್ಲಾ ತೊರಗಲ್‌ ಸಮೀಪದ ಏರಿಯನ್ನು ಕೊರೆದು ಸಮತಟ್ಟಾದ ರಸ್ತೆ ನಿರ್ಮಾಣದ 1 ಕೋಟಿ ವೆಚ್ಚದ ಕಾಮಗಾರಿ ವೀಕ್ಷಣೆ ನಡೆಸಿದ ಅವರು, ಕಿಲ್ಲಾ ತೊರಗಲ್‌ ಸಮೀಪದ ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸುವ ಟ್ರ್ಯಾಕ್ಟರ್‌ಗಳು ಏರಿ ಹತ್ತಲು ಹರಸಾಹಸ ಪಡುತ್ತಿದ್ದವು. ರೈತರ ತೊಂದರೆಯನ್ನು ಗಮನಿಸಿ ಕೊಟ್ಯಾಂತರ ಹಣದಲ್ಲಿ ಸಮತಟ್ಟಾದ ರಸ್ತೆ ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.
ಭಾರೀ ಪ್ರಮಾಣದಲ್ಲಿ ಕಬ್ಬು ಹೊತ್ತು ತರುವ ಟ್ರ್ಯಾಕ್ಟರ್‌ಗಳಿಗೆ ಏರಿ ಹತ್ತಲು ತೊಂದರೆಯಾಗದಂತೆ ಸಮತಟ್ಟು ರಸ್ತೆ ನಿರ್ಮಿಸಬೇಕು. ಇದರಿಂದ ರೈತರಿಗೆ ಉಂಟಾಗುವ ತೊಂದರೆಯನ್ನು ಗಮನದಲ್ಲಿಟ್ಟುಕೊಂಡು ಗುಣಮಟ್ಟದ ಕಾಮಗಾರಿ ಮಾಡಲು ಶಾಸಕರು ಗುತ್ತಿಗೆದಾರರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಎ.ಪಿ.ಎಂ.ಸಿ ಅಧ್ಯಕ್ಷ ಬಿ.ಎಂ.ಪಾಟೀಲ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಆರ್‌.ಕೆ. ನಿಂಗನೂರೆ, ಕಿರಿಯ ಇಂಜಿನಿಯರ್‌ ರವಿಕುಮಾರ ಮತ್ತು ಗ್ರಾಮಸ್ಥರು ಇದ್ದರು.

loading...