ಸಮಾಜದ ವಿಭಜನೆಗೆ ಸಿಎಂ ಕಾರಣ: ಜಿ.ಜನಾರ್ಧನ್‌ ರೆಡ್ಡಿ ಆರೋಪ

0
23
loading...

ಕನ್ನಡಮ್ಮ ಸುದ್ದಿ-ಮುದ್ದೇಬಿಹಾಳ : ರಾಜ್ಯ ಆಳುವ ಮುಖ್ಯಮಂತ್ರಿ ದುರಹಂಕಾರದಿಂದ ಮಾತನಾಡುತ್ತಿದ್ದಾರೆ. ಸಿಎಂ ಒಬ್ಬ ಮಿಮಿಕ್ರಿ ಆರ್ಟಿಸ್ಟ್‌ನಂತೆ ವರ್ತಿಸುತ್ತಿದ್ದಾರೆ. ಅವರು ಧರ್ಮ ಧರ್ಮಗಳ ಮಧ್ಯೆ ಜಗಳವನ್ನು ತಂದಿಟ್ಟು ಸಮಾಜವನ್ನು ಒಡೆದಾಳುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಮಾಜಿ ಸಚಿವ ಗಾಲಿ ಜನಾರ್ಧನ್‌ ರೆಡ್ಡಿ ಆರೋಪಿಸಿದರು.
ಪಟ್ಟಣದ ವಿಜಯಪುರ ರಸ್ತೆಯಲ್ಲಿ ಬುಧವಾರ ದಿ.ಪ್ರಭುಗೌಡ ಬಿರಾದಾರ ಅವರ ಸ್ಮರಣಾರ್ಥ ಹಮ್ಮಿಕೊಂಡಿದ್ದ ಸರ್ವಧರ್ಮಗಳ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದಲ್ಲಿ ಒಡಕನ್ನುಂಟು ತರಲು ಮುಂದಾದವರು ಯಾರೇ ಇದ್ದರೂ ಅವರಿಗೆ ಉಳಿಗಾಲವಿಲ್ಲ. ಧಾರವಾಡ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಹಾಗೂ ವಿಜಯಪುರ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಪತ್ರಿಕೆಗಳಿಗೆ ಜಾಹೀರಾತು ಕೊಡುವ ಮೂಲಕ ಲಿಂಗಾಯತ ಧರ್ಮದ ಪ್ರತ್ಯೇಕತೆಯ ಬಗ್ಗೆ ಮಾತನಾಡುತ್ತಿದ್ದಾರೆ.ಸಮಾಜದಲ್ಲಿ ಆ ಮೂಲಕ ಒಡಕನ್ನುಂಟು ಮಾಡಿದ್ದಾರೆ. ಕೊಲೆ ಕೇಸಲ್ಲಿ ಸಚಿವ ವಿನಯ ಕುಲಕರ್ಣಿಗೆ ಮುಂದಿದೆ ಕಾದಿದೆ ಎಂದು ಹೇಳಿದರು. ಬ.ಬಾಗೇವಾಡಿಯ ಶಿವಪ್ರಕಾಶ ಶ್ರೀ ಮಾತನಾಡಿ,ರಾಜ್ಯ ಆಳುವ ನಾಯಕರಿಗೆ ಲಿಂಗಾಯತ ಧರ್ಮದ ಮೇಲೆ ಪ್ರೀತಿ ಇದ್ದರೆ ನಾಲ್ಕು ವರ್ಷ ಸುಮ್ಮನೆ ಕೂತಿದ್ದೇಕೆ ? ಮೊದಲು 2ಎಗೆ ಲಿಂಗಾಯತ ಧರ್ಮವನ್ನು ಸೇರ್ಪಡೆ ಮಾಡಿ.ಚುನಾವಣೆ ಸಮೀಪಿಸುತ್ತಿರುವಂತೆ ಈ ಹೋರಾಟ ಮಾಡುತ್ತಿದ್ದಾರೆ.ಸಂವಿಧಾನದಲ್ಲಿ ಪ್ರತ್ಯೇಕ ಧರ್ಮದ ಮಾನ್ಯತೆ ಇಲ್ಲ.ಆದರೂ ವೀರಶೈವ ಲಿಂಗಾಯತರನ್ನು ಒಡೆಯುವ ಕನಸು ಕಾಣುತ್ತಿದ್ದಾರೆ.ಲಿಂಗಾಯತ ಧರ್ಮ ಅನ್ನುವಂತಹದ್ದು ಎಲ್ಲಿಯೂ ಇಲ್ಲ.ಒಂದು ವೇಳೆ ಇದ್ದಿದ್ದೇ ಆದರೆ ನಾನು ಕಾವಿ ಕಳಚಲು ಸಿದ್ಧನಿದ್ದೇನೆ ಎಂದು ಹೇಳಿದರು.
ಬಿಜೆಪಿ ನಾಯಕಿ ಮಂಗಳಾದೇವಿ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಗುತ್ತಿಗೆದಾರ ಶಾಂತಗೌಡ ಬಿರಾದಾರ, ಹಿರೂರಿನ ಜಯಸಿದ್ದೇಶ್ವರ ಶ್ರೀ, ಕುದುರಿಸಾಲವಾಡಗಿಯ ಶಿವಬಸವ ಶ್ರೀ, ತುಂಬಗಿಯ ಮಹಾಂತಲಿಂಗ ಶ್ರೀ, ಗುಂಡಕನಾಳದ ಗುರುಲಿಂಗ ಶ್ರೀ, ಕರಿಭಂಟನಾಳದ ಶಿವಕುಮಾರ ಶ್ರೀ, ಢವಳಗಿಯ ಘನಮಠೇಶ್ವರ ಶ್ರೀ, ಯರಝರಿಯ ಮಲ್ಲಾರಲಿಂಗ, ಪಡೆಕನೂರದ ಶಿವಕುಮಾರ ಶ್ರೀ, ನೆರಬೆಂಚಿಯ ವೇ.ಸಂಗಯ್ಯ ಹಾಲಗಂಗಾಧರಮಠ, ಸರೂರಿನ ಮರುಳಸಿದ್ದಯ್ಯ ಗುರುವಿನ, ಮಾಜಿ ಸಚಿವ ಗೋವಿಂದ ಕಾರಜೋಳ, ಬಿಜೆಪಿ ರಾಜ್ಯ ಕಾರ್ಯದರ್ಶಿ ಎನ್‌.ರವಿಕುಮಾರ, ಬಜೆಪಿ ರಾಜ್ಯ ಉಪಾಧ್ಯಕ್ಷ ಕೆ.ಪಿ.ನಂಜುಂಡಿ, ಬಿಜೆಪಿ ಮುಖಂಡರಾದ ಮಲಕೇಂದ್ರಗೌಡ ಪಾಟೀಲ, ನಿಂಗಪ್ಪಗೌಡ ಬಪ್ಪರಗಿ, ಯಾದಗಿರಿ ಜಿಪಂ ಮಾಜಿ ಅಧ್ಯಕ್ಷ ಸಿದ್ದನಗೌಡ ಪೊಲೀಸಪಾಟೀಲ, ಶಿವಶಂಕರಗೌಡ ಹಿರೇಗೌಡರ ,ನ್ಯಾಯವಾದಿ ಬಿ.ಜಿ.ಜಗ್ಗಲ, ಜಿಪಂ ಸದಸ್ಯೆ ಪದ್ಮಾವತಿ ವಾಲೀಕಾರ, ಜ್ಯೋತಿ ಅಸ್ಕಿ, ತಾಲೂಕಾಧ್ಯಕ್ಷ ಎಂ.ಡಿ.ಕುಂಬಾರ, ಬಿ.ಪಿ.ಕುಲಕರ್ಣಿ, ಪ್ರಭು ಕಡಿ, ನ್ಯಾಯವಾದಿ ಜೆಎ.ಚಿನಿವಾರ, ಮೌಲಾನಾ ಅಲ್ಲಾಭಕ್ಷ್ಯ ಖಾಜಿ, ಕೆಯುಸಿ ಬ್ಯಾಂಕ್‌ ಅಧ್ಯಕ್ಷ ಸತೀಶ ಓಸ್ವಾಲ, ಸಿ.ಪಿ.ಸಜ್ಜನ, ವಿಕ್ರಂ ಓಸ್ವಾಲ, ತಾಪಂ ಮಾಜಿ ಅಧ್ಯಕ್ಷ ಮುತ್ತಣ್ಣ ಹುಗ್ಗಿ, ಆರ್‌ಎಸ್‌ಎಸ್‌ನ ದಾಮೋದರಜಿ, ತಾಪಂ ಗ್ರಾಪಂ ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ಪಾಲ್ಗೊಂಡಿದ್ದರು.

loading...