ಸಹಕಾರಿ ಕ್ಷೇತ್ರಕ್ಕೆ ಪ್ರೋತ್ಸಾಹ ಅಗತ್ಯ: ಶಾಸಕ ಜೆ.ಟಿ.ಪಾಟೀಲ

0
21
loading...

ಕನ್ನಡಮ್ಮ ಸುದ್ದಿ-ಬೀಳಗಿ: ಸಹಕಾರವಿಲ್ಲದಿದ್ದರೆ ಕೌಟುಂಬಿಕ ಬದುಕು ಕೂಡ ಅಸಾಧ್ಯ. ಸಹಕಾರ ಮನೆಯಿಂದಲೇ ಆರಂಭವಾಗುವುದು. ರೈತರ ಆರ್ಥಿಕ ಚೈತನ್ಯಕ್ಕೆ ಭದ್ರ ಭುನಾದಿಯಾಗಿರುವ ಸಹಕಾರಿ ಕ್ಷೇತ್ರಕ್ಕೆ ಪ್ರಸ್ತುತ ಹೆಚ್ಚಿನ ಪ್ರೋತ್ಸಾಹ ಸಿಗುವುದು ಅಗತ್ಯವಾಗಿದೆ ಎಂದು ಶಾಸಕ ಜೆ.ಟಿ.ಪಾಟೀಲ ಹೇಳಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್, ತಾಲೂಕಿನ ಎಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಹಾಗೂ ಪತ್ತಿನ ಸಹಕಾರಿ ಸಂಘಗಳು ಮತ್ತು ಸೌಹರ್ದ ಪತ್ತಿನ ಸಹಕಾರ ನಿಯಮಿತಗಳ ಸಹಯೋಗದಲ್ಲಿ ಪಟ್ಟಣದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ 64 ನೇ ಸಹಕಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಂತರ ಕಾನೂನು ಚೌಕಟ್ಟನ್ನು ಪಡೆಯುವ ಮೂಲಕ ಸಹಕಾರಿ ಸಂಘಗಳು ಸ್ಥಾಪನೆಯಾದವು. ರಾಷ್ಟ್ರೀಕೃತ ಬ್ಯಾಂಕುಗಳಿಗೆ ಕೆಲವರಷ್ಟೇ ಮಾಲೀಕರಿದ್ದರೆ, ಸಹಕಾರಿ ಸಂಘದಲ್ಲಿ ಇರುವ ಎಲ್ಲ ಸದಸ್ಯರೂ ಇಲ್ಲಿ ಮಾಲೀಕರೆ. ರೈತರ ಜೀವನಾಡಿಯಾಗಿ ಕೆಲಸ ಮಾಡುವ ಸಹಕಾರಿ ಸಂಘಗಳಿಗೆ ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಡೆ ಅವರ ಅವಧಿಯಲ್ಲಿ ಹೆಚ್ಚು ಪ್ರೋತ್ಸಾಹ ಸಿಕ್ಕಿತ್ತು. ನಿರ್ಲಕ್ಷ್ಯಕ್ಕೆ ಒಳಗಾಗಿರುವ ಸಹಕಾರಿ ಸಂಘಗಳ ವಹಿವಾಟು ಹೆಚ್ಚಬೇಕು. ಸಮಗ್ರ ಅಭಿವೃದ್ಧಿಗೆ ಸಹಕಾರಿ ಸಂಘ ಹಾಗೂ ಗ್ರಾಪಂ ಗ್ರಾಮದ ಎರಡು ಕಣ್ಣುಗಳಿದ್ದಂತೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಲಕ್ಷಾವಧಿ ಕೋಟಿ ಸಾಲವನ್ನು ಉದ್ಯಮಿಗಳು ಪಡೆದುಕೊಂಡಿದ್ದಾರೆ. ಸಾಲ ಪಡೆದ ಕೆಲ ಉದ್ಯಮಿಗಳು ಬ್ಯಾಂಕಿಗೆ ಟೋಪಿ ಹಾಕಿದ್ದಾರೆ. ಬಾಕಲಕೋಟೆ ಜಿಲ್ಲೆಯಲ್ಲಿ ಸಹಕಾರಿ ಸಂಘಗಳು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ ಎಂದು ಶ್ಲಾಘಿಸಿದ ಅವರು, ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ಎಲ್ಲರೂ ಸಹಕಾರ ನೀಡಬೇಕೆಂದರು.
ಪ್ರಾಚಾರ್ಯ ಡಾ|ಸಾಗರ ತೆಕ್ಕೆನ್ನವರ ಉಪನ್ಯಾಸ ನೀಡಿದರು. ಕಲ್ಮಠದ ಗುರುಪಾದ ದೇವರು ಸಾನಿಧ್ಯ ವಹಿಸಿದ್ದರು. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕಾಂತ ದೊಡಮನಿ, ನಿರ್ದೇಶಕ ನಿಂಗಪ್ಪ ಹೂಗಾರ, ತಾಪಂ ಅಧ್ಯಕ್ಷ ಶ್ರೀಶೈಲ ಸೂಳಿಕೇರಿ, ಸಿದ್ದಪ್ಪ ಕಡಪಟ್ಟಿ, ಮಲ್ಲಪ್ಪ ಶಂಭೋಜಿ, ಹನುಮಂತ ಬನಹಟ್ಟಿ, ಬಿ.ಆರ್.ದೇಸಾಯಿ, ಮಲ್ಲಯ್ಯ ಕಂಬಿ ಇತರರು ಇದ್ದರು. ಸಹಕಾರ ಅಭಿವೃದ್ಧಿ ಅಧಿಕಾರಿ ಎಸ್.ಆರ್.ಬಟಕುರ್ಕಿ ಸ್ವಾಗತಿಸಿದರು. ಕುಂಬಾರ ನಿರೂಪಿಸಿದರು. ಸುರೇಂದ್ರ ನಾಯಕ ವಂದಿಸಿದರು.

loading...