ಸಾಮಾನ್ಯ ಸಭೆಯ ಚಳಿ ಬಿಡಿಸಿದ ಜಿಪಂ ಸದಸ್ಯರು

0
22
loading...

ಕನ್ನಡಮ್ಮ ಸುದ್ದಿ

ಬೆಳಗಾವಿ: ಕಳೆದ ಹತ್ತು ದಿನಗಳಿಂದ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಶಾಸಕರು ಬಾವಿಗಿಳಿದು ಪ್ರತಿಭಟನೆ ನಡೆಸುತ್ತಿದ್ದ ಹಾಗೇ ಜಿಪಂ ಅಧ್ಯಕ್ಷರ ಏಕಪಕ್ಷೀಯ ನಿರ್ದಾರ ವಿರೋಧಿಸಿ ಜಿಪಂ ಸದಸ್ಯರು ಬಾವಿಗಿಳಿದು ಪ್ರತಿಭಟನೆಯೊಂದಿಗೆ ಜಿಪಂ ಅಧ್ಯಕ್ಷರು ಮಾತನಾಡಬೇಕು ಎಂದು ಸಭೆಯ ಚಳಿ ಬಿಡಿಸಿದ ಘಟನೆ ಶನಿವಾರ ನಡೆದ ಜಿಲ್ಲಾ ಪಂಚಾಯತ ಸಾಮಾನ್ಯ ಸಭೆಯಲ್ಲಿ ನಡೆಯಿತು.
ಅಧಿವೇಶನಕ್ಕಿಂತ ಮುಂಚೆ ಜಿಪಂ ಸಾಮಾನ್ಯ ಸಭೆ ಕರೆಯಬೇಕು ಎಂದರು ಯಾಕೆ ಕರೆಯಲಿಲ್ಲ. ಸಣ್ಣ ಸಣ್ಣ ಜಿಲ್ಲೆಗಳಿಗೂ 90ಸದಸ್ಯರನ್ನು ಹೊಂದಿರುವ ಬೆಳಗಾವಿ ಜಿಪಂಗೆ ಒಂದೇ ಸಮನಾದ ಅನುಧಾನ ಹಂಚಿಕೆ. ಅಧಿಕಾರಿಗಳು ಮಹಿಳಾ ಸದಸ್ಯರ ಮಾತು ಕೇಳುವುದಿಲ್ಲ. ಈ ಬಗ್ಗೆ ಅಧ್ಯಕ್ಷರು ಮೊದಲು ಮಾತನಾಡಬೇಕು ಎಂದು ಕೆಲಹೊತ್ತು ಪಟ್ಟು ಹಿಡಿದು ಕುಳಿತುಕೊಂಡ ಜಿಪಂ ಸದಸ್ಯರು ಜಿಪಂ ರದ್ದು ಪಡಿಸುವಂತೆ ಸರಕಾರಕ್ಕೆ ಪ್ರಸ್ತಾವಣೆ ಸಲ್ಲಿಸುವಂತೆ ಆಗ್ರಹಿಸಿದರು.
ನಿಖಿಲ ಕತ್ತಿ, ಪವನ ಕತ್ತಿ, ಅಜೀತ ಚೌಗಲಟ, ಸರಸ್ವತಿ ಪಾಟೀಲ, ಗಂಗಾಧರಸ್ವಾಮಿ ತವಗಮಠ ಸೇರಿದಂತೆ 20 ಅಧಿಕ ಸದಸ್ಯರು ಪಕ್ಷಬೇದ ಮರೆತು ಪ್ರತಿಭಟನೆ ನಡೆಸಿದ ಮೊದಲ ಸಭೆ ಇದಾಗಿದೆ. ಸದಸ್ಯರು ನಡೆಸಿದ ಪ್ರತಿಭಟನೆಯಿಂದ ಸಭೆಯಲ್ಲಿ ಭಾಗವಹಿಸಿದ್ದ ಜನರ ಚಳಿ ಬಿಡಿಸಿದ ಹಾಗೇ ಇತ್ತು.
ತರಾಟೆಗೆ ತೆಗೆದುಕೊಂಡರು

loading...