ಸಿದ್ದಪ್ಪ ಈರಪ್ಪ ಗೋರಕೊಳ್ಳಿ ಅಧ್ಯಕ್ಷ. ಸುಶೀಲಾ ಮಹಾದೇವಪ್ಪ ನಾಡಗೌಡ್ರ ಉಪಾಧ್ಯಕ್ಷರಾಗಿ ಆಯ್ಕೆ.

ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಅಭ್ಯರ್ಥಿಗಳೊಂದಿಗೆ ಚುನಾವಣೆ ಅಧಿಕಾರಿ ಪ್ರವೀಣ ಹುಚ್ಚನ್ನವರ.
ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಅಭ್ಯರ್ಥಿಗಳೊಂದಿಗೆ ಚುನಾವಣೆ ಅಧಿಕಾರಿ ಪ್ರವೀಣ ಹುಚ್ಚನ್ನವರ.
loading...

ಕನ್ನಡಮ್ಮ ಸುದ್ದಿ ಚನ್ನಮ್ಮ ಕಿತ್ತೂರು.
ಸಮೀಪದ ಎಂ.ಕೆ.ಹುಬ್ಬಳ್ಳಿಯಲ್ಲಿ ಕಳೆದ ಎರಡು ತಿಂಗಳಿನಿಂದ ಬಾರಿ ಕುತುಹಲ ಕೆರಳಿಸಿದ ಪಟ್ಟಣ ಪಂಚಾಯತ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ನ 23 ರಂದು ತೆರೆ ಬಿದ್ದಿದೆ.
ಕಳೆದ ವರ್ಷ ಪಟ್ಟಣ ಪಂಚಾಯಿತಿಗೆ ನಡೆದ 14 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ 6, ಕಾಂಗ್ರೆಸ್‍ನಿಂದ 4, ಪಕ್ಷೇತರದಿಂದ 4 ಸದಸ್ಯರು ಆಯ್ಕೆ ಆಗಿದ್ದರು. ಅಧ್ಯಕ್ಷ ಸ್ಥಾನ ಅ ವರ್ಗಕ್ಕೆ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು.
ಕಳೆದ ವರ್ಷ ಆಗಷ್ಟ್ 2 ರಂದು ಚುನಾವಣೆ ನಡೆದು ಅಧ್ಯಕ್ಷರಾಗಿ ಆಯ್ಕೆಯಾದ ಮುಗುಟಸಾಬ ಅಲ್ಲಾಭಕ್ಷ ಜಮಾದಾರ ಹಾಗೂ ಉಪಾಧ್ಯಕ್ಷರಾಗಿ ಚನ್ನವ್ವ ಚಂದ್ರಪ್ಪ ಕಡಕೋಳ ಆಯ್ಕೆಯಾಗಿದ್ದರು (ಉಬಯತರು ಪಕ್ಷೇತರ ಸದಸ್ಯರಾಗಿದ್ದರು) ಕಳೆದ ಎರಡು ತಿಂಗಳ ಹಿಂದೆ ಇಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ರಾಜೀನಾಮೆಯಿಂದಾಗಿ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಅರುಣಾ ರುದ್ರಪ್ಪ ತೋರಗಲ ಹಾಗೂ ಬಿಜೆಪಿಯ ಬಂಡಾಯ ಅಭ್ಯರ್ಥಿ ಸಿದ್ದಪ್ಪ ಈರಪ್ಪ ಗೋರಕೊಳ್ಳಿ ನಾಮ ಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸಿನ ಸುಶೀಲಾ ಮಹಾದೇವಪ್ಪ ನಾಡಗೌಡ್ರÀ ಪಕ್ಷೇತರ ಅಭ್ಯರ್ಥಿ ಶೋಭಾ ಶಂಕರ ಕಿಲ್ಲೇದಾರ ನಾಮ ಪತ್ರ ಸಲ್ಲಿಸಿದರು.
ಕಾಂಗ್ರೆಸಿನ ಸದಸ್ಯರಾದ ಪುಟ್ಟಪ್ಪ ಪಟ್ಟಣಶೆಟ್ಟಿ, ಅರೀಫ ದಪೇದಾರ, ಬಾಳಪ್ಪ ಪಾಗಾದ, ಸುಶೀಲಾ ನಾಡಗೌಡ್ರ (4), ಬಿಜೆಪಿಯ ಸದಸ್ಯರಾದ ಸಿದ್ದಪ್ಪ ಗೋರಕೊಳ್ಳಿ, ಮಂಜುಳಾ ಸಕ್ರೆಣ್ಣವರ(2), ಪಕ್ಷೇತರ ಸದಸ್ಯೆ ಚನ್ನವ್ವ ಕಡಕೊಳ್ಳ(1) ಹಾಗು ಚನ್ನಮ್ಮ ಕಿತ್ತೂರು ಶಾಸಕ ಡಿ.ಬಿ.ಇನಾಮದಾರ ಇವರುಗಳ ಬೆಂಬಲದೊಂದಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಸ್ರ್ಪಸಿದ ಉಬಯತರು ತಲಾ 8 ಮತ ಪಡೆದು ಜಿಜೆಪಿಯ ಬಂಡಾಯ ಅಭ್ಯರ್ಥಿ ಸಿದ್ದಪ್ಪ ಈರಪ್ಪ ಗೋರಕೊಳ್ಳಿ ಅಧ್ಯಕ್ಷರಾಗಿ ಮತ್ತು ಕಾಂಗ್ರೆಸಿನ ಸುಶೀಲಾ ಮಹಾದೇವಪ್ಪ ನಾಡಗೌಡ್ರ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಬಿಜೆಪಿ ಸದಸ್ಯರಾದ ಅರುಣಾ ತೋರಗಲ, ಶ್ರೀಕಾಂತ ಬಸರಗಿ, ಬಸವರಾಜ ಡೂಗನವರ, ಚನ್ನಬಸಪ್ಪ ಪಾಗಾದ (4), ಪಕ್ಷೇತರ ಸದಸ್ಯರಾದ ಮುಗುಟಸಾಬ ಜಮಾದಾರ, ರುದ್ರಪ್ಪ ಮುತ್ನಾಳ, ಶೋಭಾ ಕಿಲ್ಲೇದಾರ(3), ಒಟ್ಟು 7 ಸದಸ್ಯರ ಬೆಂಬಲ ಪಡೆದು ಅಧ್ಯಕ್ಷ ಸ್ಥಾನಕ್ಕೆ ಸ್ರ್ಪಸಿದ ಬಿಜೆಪಿಯ ಅರುಣಾ ರುದ್ರಪ್ಪ ತೋರಗಲ ಹಾಗು ಉಪಾಧ್ಯಕ್ಷ ಸ್ಥಾನಕ್ಕೆ ಸ್ರ್ಪಸಿದ ಪಕ್ಷೇತರ ಸದಸ್ಯೆ ಶೋಭಾ ಶಂಕರ ಕಿಲ್ಲೇದಾರ ಇವರು ತಲಾ 1 ಮತ ಅಂತರದಿಂದ ಪರಾಭವಗೊಂಡರು.
ಚುನಾವಣಾ ಅಧಿಕಾರಿಯಾಗಿ ಕಿತ್ತೂರು ತಹಶೀಲ್ದಾರ ಪ್ರವೀಣ ಹುಚ್ಚನ್ನವರ, ಚುನಾವಣೆ ವಿಷಯ ನಿರ್ವಾಹಕರು ಮಂಜುನಾಥ ಇಲ್ಲುರ, ಬಸವರಾಜ ಕೊಂಡಿಕೊಪ್ಪ ಪಿಎಸ್‍ಐ ಮಲ್ಲಿಕಾರ್ಜುನ ಕುಲಕರ್ಣಿ ಪಪಂ ಮುಖ್ಯಾಕಾರಿ ಸಂತೋಷ ಕುರಬೆಟ್ಟಿ, ಅಭಿಯಂತರ ರವೀಂದ್ರ ಗಡಾದ, ಎಸ್.ಎಸ್.ಪಾಟೀಲ, ಶೆಟ್ಟರ ಇದ್ದರು.

 

loading...