ಸಿದ್ದರಾಮಯ್ಯನಿಂದ ಕುರಬ ಸಮಾಜಕ್ಕೆ ಅನ್ಯಾಯ :ಪುಂಡಲಿಕ ಕುರುಬರ

0
25
  • ಸಿದ್ದರಾಮಯ್ಯನಿಂದ ಕುರಬ ಸಮಾಜಕ್ಕೆ ಅನ್ಯಾಯ :ಪುಂಡಲಿಕ ಕುರುಬರಕನ್ನಡಮ್ಮ ಸುದ್ದಿ
    loading...

    ಸಂಕೇಶ್ವರ ೨೬:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ೨೦೧೩ ರ ಚುನಾವಣಾ ಪೂರ್ವದಲ್ಲಿ ಕುರಬರ ದಶಕಗಳ ಬೇಡಿಕೆಯಾದ ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಬೆಂಬಲ ನೀಡಿ ಬೇಡಿಕೆ ಇಡೇರಿಸುವ ಆಶ್ವಾಸನೆ ನೀಡಿದರು ಆದರೆ ಆ ಮಾತು ಮರೆತು ಹಾಲುಮತ ಸಮಾಜಕ್ಕೆ ಸಿದ್ದರಾಮಯ್ಯ ಅನ್ಯಾಯ ಮಾಡಿದ್ದಾರೆ ಎಂದು ಹುಕ್ಕೇರಿ ತಾಲೂಕಿನ ಬಾಡ ಗ್ರಾಮದ ಯುವ ಮುಖಂಡ ಪುಂಡಲಿಕ ಕುರುಬರ ಆರೋಪಿಸಿದ್ದಾರೆ .
    ಇಂದು ಪಟ್ಟಣದಲ್ಲಿ ಪತ್ರಿಕಾ ಹೇಳಿಕೆ ನೀಡಿರುವ ಅವರು ರಾಜ್ಯದಲ್ಲಿ ಹಿಂದುಳಿದ ಸಮಾಜವಾದ ಕುರುಬರನ್ನ ಸಂವಿಧಾನದ ಆಶಯದಂತೆ ಪರಿಶಿಷ್ಟ ಪಂಗಡಕ್ಕೆ ಸೇರಿಸಲು ರಾಜ್ಯ ಸರಕಾರ ಕೂಡಲೆ ಕೇಂದ್ರ ಸರಕಾರಕ್ಕೆ ಶಿಪಾರಸ್ಸು ಮಾಡಬೇಕು.ಹಿಂದುಳಿದ ಕುರಬ ಸಮಾಜದ ಮುಂದಿನ ಪೀಳಿಗೆಗಾಗಿ ಎಸ್ಟಿ ಮೀಸಲಾತಿ ಅವಶ್ಯವಿದ್ದು .ಕುರಬ ಸಮಾಜದವರೆಯಾದ ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆಗೆರಲು ಕುರುಬ ಸಮಾಜದ ಶ್ರಮವಿದೆ ಆದರೆ ಸಮಾಜದ ಋಣ ಮರೆತಿರುವ ಸಿದ್ದು ಸಮಾಜಕ್ಕೆ ಅನ್ಯಾಯ ಮಾಡುತ್ತಿದ್ದಾರೆ .ಕಾಂಗ್ರೆಸ್ ಸರಕಾರ ಕುರಬರನ್ನ ಕಡೆಗಣೆಸಿದ್ದು ಬರುವ ಚುನಾವಣೆಯಲ್ಲಿ ಇಡಿ ಕುರಬ ಸಮಾಜದಿಂದ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲಾಗುವುದು ಎಂದು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರಕಾರದ ವಿರುದ್ದ ಹರಿಹಾಯ್ದರು .

loading...