ಸಿದ್ದರಾಮಯ್ಯನ ಸರಕಾರ ದಿವಾಳಿ ಅಂಚೆಗೆ ಬಂದಿದೆ: ಮಾಜಿ ಸಿಎಂ ಯಡಿಯೂರಪ್ಪ

0
25
loading...

ಕನ್ನಡಮ್ಮ ಸುದ್ದಿ-ಚನ್ನಮ್ಮ ಕಿತ್ತೂರುಃ ಎಂಪಿ ಎಂಎಲ್‍ಎಗಳ ಪಿಎಗಳಿಗೆ ಸಂಬಳ ನೀಡಲಾಗದ ಸ್ಥಿತಿಯಲ್ಲಿರುವ ಸಿದ್ದರಾಮಯ್ಯನ ಸರಕಾರ ದಿವಾಳಿ ಅಂಚೆಗೆ ಬಂದಿದ್ದು ಬೆಳಗಾವಿ ಅದಿವೇಶನದಲ್ಲಿ ರಾಜ್ಯ ಹಣಕಾಸಿನ ಸ್ಥಿತಿಗತಿ ಕುರಿತು ಶ್ವೇತ ಪತ್ರ ಹೊರಡಿಸಲಿ ಎಂದು ಮಾಜಿ ಮುಖ್ಯಮಂತ್ರಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್. ಯಡಿಯೂರಪ್ಪ ಭರವಸೆ ನೀಡಿದರು.
ಇಲ್ಲಿಯ ಗುರುಸಿದ್ದೇಶ್ವರ ಪ್ರೌಢ ಶಾಲಾ ಮೈದಾನದಲ್ಲಿ ಬಿಜೆಪಿ ನವ ಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆ ಅಂಗವಾಗಿ ಆಯೋಜಿಸಲಾಗಿದ್ದ ಬ್ರಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಯಡಿಯೂರಪ್ಪ ಜೈಲಿಗೆ ಹೋಗಿ ಬಂದಿದ್ದಾನೆ ಎನ್ನುತಾನೆ ಆದರೆ ಅವರ ನಾಯಕರೆ ನ್ಯಾಶನಲ್ ಹೆರಾಲ್ಡ ಪತ್ರಿಕೆಯ ಹಗರಣದಲ್ಲಿ ಸೋನಿಯಾ ಗಾಂಧಿ, ರಾಹುಲ ಗಾಂಧಿ ಆರೋಪಿಗಳಾಗಿ ಜಾಮೀನಿನ ಮೇಲೆ ಹೊರಗಡೆ ಇದ್ದಾರೆ ಎನ್ನುವದನ್ನು ಅವರ ಅರಿತುಕೊಂಡು ಮಾತನಾಡಬೇಕು.

ನ್ಯಾ. ಶಿವರಾಜ್ ನೀಡಿರುವ ವರದಿಯಂತೆ ಸರಿತಾ ಅಯ್ಯರ ಅತ್ಯಾಚಾರ ಪ್ರಕರಣದಲ್ಲಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣು ಗೋಪಾಲನನ್ನು ನೈತಿಕತೆ ಇದ್ದರೆ ಸಿದ್ದರಾಮಯ್ಯ ತಕ್ಷಣವೆ ರಾಜ್ಯದಿಂದ ಹೊರದೂಡಬೇಕು. ಅಲ್ಲದೆ ಕೇಂದ್ರ ಸಚಿವ ಅನಂತ ಕುಮಾರ ಲೋಕಸಭೆಯಲ್ಲಿ ಪ್ರಸ್ತಾಪಿಸಿ ಲೋಕಸಭಾ ಸ್ಥಾನದಿಂದ ಕಿತ್ತೊಗೆಯಬೇಕು. ಮುಂದಿನ ದಿನಗಳಲ್ಲಿ ರೈತರ ಮಹಿಳೆಯರ ಹಾಗೂ ದುರ್ಬಲ ವರ್ಗದವರ ಅಭಿವೃದ್ಧಿಗಾಗಿ ಈ ಪರಿವರ್ತನಾ ಯಾತ್ರೆ ನಡೆದಿದೆ ಎಂದು ಹೇಳಿದರು.
ಸಂಸದರಾದ ಪ್ರಲ್ಹಾದ ಜೋಶಿ, ಸುರೇಶ ಅಂಗಡಿ, ಶಾಸಕರಾದ ಉಮೇಶ ಕತ್ತಿ, ವಿಶ್ವನಾಥ ಪಾಟೀಲ, ಪಿ.ರಾಜೀವ, ಮಹಾಂತೇಶ ಕವಟಗಿಮಠ, ಎನ್ ರವಿಕುಮಾರ, ಜಗದೀಶ ಹಿರೇಮನಿ, ಮಾಜಿ ಶಾಸಕ ಸುರೇಶ ಮಾರಿಹಾಳ, ಮಹಾಂತೇಶ ದೊಡಗೌಡರ, ಹನುಮಂತ ಕೊಟಬಾಗಿ, ಸಿ.ಆರ್.ಪಾಟೀಲ, ಬಸನಗೌಡ ಸಿದ್ರಾಮನಿ, ಆನಂದ ಜಕಾತಿ, ಸಿದ್ದಯ್ಯ ಹಿರೇಮಠ, ಭಾರತಿ ಮಗದುಮ್, ಈರಣ್ಣ ಕಡಾಡಿ, ಶಂಕರಗೌಡ ಪಾಟೀಲ ಸೇರಿದಂತೆ ಇತರ ನಾಯಕರು ಇದ್ದರು. ಸುರೇಶ ಮಾರಿಹಾಳ ಸ್ವಾಗತಿಸಿದರು. ಇದಕ್ಕೂ ಮೊದಲು ರಾಣಿ ಚನ್ನಮ್ಮಾ ಪ್ರತಿಮೆಗೆ ಬಿ.ಎಸ್. ಯಡಿಯೂರಪ್ಪ ಮಾಲಾರ್ಪಣೆ ಮಾಡಿ ಗೌರವ ಸಲ್ಲಸಿದ ನಂತರ ಬೈಕ ರ್ಯಾಲಿ ಹಾಗೂ ಸಾವಿರಾರು ಜನರ ಹರ್ಷೊದ್ಘಾರದ ನಡುವೆ ಯಾತ್ರೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ವೇದಿಕೆಗೆ ತೆರಳಿದರು.

loading...