ಸಿದ್ದ ರಾಮ ಮೂರನೇ ಕಣ್ಣು ತೆರೆದು ಕೊಳಚೆ ಪ್ರದೇಶದ ಹಕ್ಕು ಪತ್ರ ವಿತರಿಸಲಿ: ಈಶ್ವರಪ್ಪ

0
14
loading...

ಕನ್ನಡಮ್ಮ ಸುದ್ದಿ
ಸುವರ್ಣ ವಿಧಾನ ಸೌಧ ಬೆಳಗಾವಿ: 20 ರಾಜ್ಯದ ಮುಖ್ಯಮಂತ್ರಿ ಸಿದ್ದ, ರಾಮ ಮೂರನೇ ಕಣ್ಣು ತೆರೆದು‌ ಕೊಳಚೆ ಪ್ರದೇಶದಲ್ಲಿ ವಾಸಿಸುವ ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆ ಮಾಡಬೇಕೆಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದರು.
ಸೋಮವಾರ ವಿಧಾನ ಪರಿಷತ್ ನಲ್ಲಿ ಮಾತನಾಡುತ್ತ, ಸಿದ್ದರಾಮಯ್ಯ ‌ನೇತೃತ್ವದ ಕಾಂಗ್ರೆಸ್ ಸರಕಾರ ಕಳೆದ ನಾಲ್ಕೂವರೆ ವರ್ಷಗಳಿಂದ ಹಿಂದುಳಿದ ಹಾಗೂ ದಲಿತರ ಪರವಾಗಿದೆ ಎಂದು ಹೇಳುವ ಸಿದ್ದರಾಮಯ್ಯ ನವರು‌ ಮೂರನೇ‌ ಕಣ್ಣು ತೆರೆದು ಬಡವರಿಗೆ‌  ಹಕ್ಕುಪತ್ರ ವಿತರಣೆ ಮಾಡಬೇಕೆಂದರು.
ಕಳೆದ ನಾಲ್ಕುವರೆ ವರ್ಷದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಏನ‌ ಉದ್ಯೋಗವಿದೆ.  ಕೊಳಚೆ ಪ್ರದೇಶದಲ್ಲಿ ವಾಸಿಸುವ ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆ ಮಾಡಲು ಸಾಧ್ಯಾಗುತ್ತಿಲ್ಲ ಎಂದರೆ ರಾಜ್ಯದ ಜನತೆಯ ದುರಂತವಾಗಿದೆ. ಪ್ರತಿ‌ ಬಾರಿ‌ ಸಿಎಂ ಸಿದ್ದರಾಮಯ್ಯ ಸುಳ್ಳು‌ ಹೇಳಿಕೊಂಡ ತಿರುಗಾಡುತ್ತಿದ್ದಾರೆ. ಮೂರು ದೇವರ ಹೆಸರು ಇಟ್ಟುಕೊಂಡಿರುವ ಸಿದ್ದ ರಾಮೇ ಶ್ವರ ಎರಡು‌ ಕಣ್ಣಿನಿಂದ ಬೇಡಾ‌ ಮೂರನೇ ಕಣ್ಣು ತೆರೆದು ಕೊಳಚೆ ಪ್ರದೇಶದಲ್ಲಿ ವಾಸಿಸುವ ಜನರಿಗೆ ಹಕ್ಕು ಪತ್ರ ವಿತರಣೆ ಮಾಡಲಿ ಎಂದರು.
ರಾಜ್ಯದಲ್ಲಿ ಒಟ್ಟು 2804 ಕೊಳಚೆ ಪ್ರದೇಶಗಳಿವೆ. ಈ ಹಿಂದಿ‌ನ ವಸತಿ‌ ಸಚಿವ ಅಂಬರೀಶ್ ಅವರು ಸಿನಿಮಾ ಸ್ಟೈಲ್ ನಲ್ಲಿ ಹಕ್ಕು ಪತ್ರ ನೀಡುತ್ತೇನೆ ಎಂದಿದ್ದರು ಅವರು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹಾಲಿ ವಸತಿ ಸಚಿವ ಎಂ.ಕೃಷ್ಣಪ್ಪ ಕೊಳಚೆ ಪ್ರದೇಶದ ಮನೆಗಳಲ್ಲಿ ವಾಸವಿರುವ ಜನರಿಗೆ ಹಕ್ಕಿ ಪತ್ರಗಳನ್ನು ವಿತರಿಸಬೇಕೆಂದರು.
ವಿಪ ಸದಸ್ಯ ರಮೇಶ‌ ಬಾಬು ಮಾತನಾಡಿ, ರಾಜ್ಯ ಸರಕಾರ ಕೊಳಚೆ ಪ್ರದೇಶದ ಮೂಲಭೂತ ಸೌಕರ್ಯಕ್ಕೆ ಕೋಟ್ಯಾಂತರ ರೂ.ಗಳನ್ನು ವೆಚ್ಚ ಮಾಡುವ ಸರಕಾರ ಹಕ್ಕು ಪತ್ರ ವಿತರಣೆ‌ ಮಾಡದಿರುವುದು‌‌ ವಿಪರ್ಯಾಸದ ಸಂಗತಿ ಎಂದರು.
loading...