ಸೈಕ್ಲೀಂಗ್‌ ಸ್ಪರ್ಧೆಯಲ್ಲಿ ಸಾಧನೆ

0
22
????????????????????????????????????
loading...

ರಾಮದುರ್ಗ: ತಾಲೂಕಿನ ಚಂದರಗಿಯ ಕ್ರೀಡಾ ಶಾಲೆಯ ಸೈಕ್ಲಿಂಗ್‌ ಕ್ರೀಡಾಪಟುಗಳಾದ ಯಶವಂತ ಬಿರಾದಾರ ಇತನು ಬಾಗಲಕೋಟ ಜಿಲ್ಲೆ ಜಮಖಂಡಿಯಲ್ಲಿ ನಡೆದ ರಾಷ್ಟ್ರ ಮಟ್ಟದ ಸೈಕ್ಲಿಂಗ್‌ ಚಾಂಪಿಯನ್‌ಶಿಫ್‌ನಲ್ಲಿ 14 ವರ್ಷದೊಳಗಿನ ಬಾಲಕರ 10 ಕಿ.ಮಿ ವೈಯಕ್ತಿಕ ವಿಭಾಗದಲ್ಲಿ ಬಂಗಾರದ ಪದಕವನ್ನು ಜಯಿಸಿದ್ದಾನೆ.
ಇದೇ ವಿಭಾಗದಲ್ಲಿ ಶಾಲೆಯ ಮತ್ತೋರ್ವ ವಿದ್ಯಾರ್ಥಿ ಲಾಯಪ್ಪ ಮುಧೋಳ ಈತನು ಕಂಚಿನ ಪದಕವನ್ನು ಜಯಿಸಿದ್ದಾನೆ. 16 ವರ್ಷದೊಳಗಿನ ಬಾಲಕರ ಗುಂಪು ಸ್ಪರ್ದೆಯಲ್ಲಿ ನಾಗರಾಜ ಸೋಮಗೊಂಡ, ಮತ್ತು 18 ವರ್ಷದೊಳಗಿನ ಬಾಲಕರ ಗುಂಪು ಸ್ಪರ್ಧೆಯಲ್ಲಿ ಪ್ರಶಾಂತ ಈ. ವಿದ್ಯಾರ್ಥಿಗಳು ಸೇರಿ ಒಟ್ಟು 4 ಜನ ಶಾಲೆಯಿಂದ ರಾಷ್ಟ್ರ ಮಟ್ಟದ ಈ ಸೈಕ್ಲಿಂಗ್‌ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಸಾಧನೆಗೈದ ವಿದ್ಯಾರ್ಥಿಗಳನ್ನು ಹಾಗೂ ತರಬೇತಿ ನೀಡಿದ ಬಿ.ಬಿ.ವಿಜಯನಗರ ಅವರನ್ನು ಸಂಸ್ಥೆಯ ಸಂಸ್ಥಾಪಕರು, ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು, ಪ್ರಾಚಾರ್ಯರು, ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

loading...