ಸ್ವಾತಂತ್ರ ಹೋರಾಟಗಾರ ನಾಡು ಕಂಡ ಅಪರೂಪದ ದೊರೆ ಹಜರತ್ ಟಿಪ್ಪು ಸುಲ್ತಾನ್:ಅಮಜದ ಪಟೇಲ್

0
20
loading...

ಕೊಪ್ಪಳ 10: ಸ್ವಾತಂತ್ರ ಹೋರಾಟಗಾರ ನಾಡು ಕಂಡ ಅಪರೂಪದ ದೊರೆ ಹಜರತ್ ಟಿಪ್ಪು ಸುಲ್ತಾನ್‍ರವರು ಈ ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ನಗರ ಸಬೆಯ ಮಾಜಿ ಅದ್ಯಕ್ಷ ಹಾಗೂ ಹಾಲಿ ಹಿರಿಯ ಸದಸ್ಯ ಅಮಜದ್ ಪಟೇಲ್ ಹೇಳಿದರು.
ಅವರು ಶುಕ್ರವಾರ ಮಿಲ್ಲತ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ಮಿಲ್ಲತ್ ಪಬ್ಲಿಕ್ ಶಾಲೆಯಲ್ಲಿ ಏರ್ಪಡಿಸಿದ ಹಜರತ್ ಟಿಪ್ಪು ಸುಲ್ತಾನರವರ ಜಯಂತಿ ಆಚರಣೆ ಸಮಾರಂಭವನ್ನು ಉದ್ಘಾಟಿಸಿ ಟಿಪ್ಪು ಬಾವ ಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದ ಬಳಿಕ ಕಾರ್ಯಕ್ರಮವನ್ನು ಉದ್ದೆಶೀಸಿ ಮಾತನಾಡಿದರು.
ಮುಂದುವರೆದು ಮಾತನಾಡಿದ ಅವರು ಈ ದೇಶದಲ್ಲಿ ವಾಸಿಸುವ ಹಿಂದೂ ಮುಸ್ಲಿಂ ಸಮಾಜ ಬಾಂಧವರು ಒಂದೇ ತಾಯಿಯ ಮಕ್ಕಳಿದ್ದಂತೆ ನಮ್ಮಲ್ಲಿ ಕೆಲ ಕೋಮುವಾದಿಗಳು ಜಾತಿ ವಿಷ ಬಿಜ ಬಿತ್ತಿ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ದೇಶದಲ್ಲಿ ಇಂದು ಅಶಾಂತಿಯ ವಾತಾವರಣ ನಿರ್ಮಿಸಿದ್ದಾರೆ ಇದಕ್ಕೆ ಯಾರು ಕಿವಿಗೊಡಬಾರದು ಎಂದರು.
ಬ್ರಿಟಿಷರ ಪಾಲಿಗೆ ಸಿಂಹ ಸ್ವಪ್ನವಾಗಿದ್ದ ಟಿಪ್ಪು ಸುಲ್ತಾನ್ ಶೋಷಿತ ಜನಾಂಗಕ್ಕೆ ನ್ಯಾಯ ದೊರಕಿಸಿ ಕೊಟ್ಟ ಇವರಿಗೆ ಇಂದು ಕೆಲ ದುಷ್ಟ ಶಕ್ತಿಗಳು ಮತಾಂದ ಮತ್ತು ಕ್ರೂರಿಯಂದು ಸುಳ್ಳು ಅಪಪ್ರಚಾರ ಮಾಡಿ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದರು ಶಿಕ್ಷಕರು ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಬೇಕು ಮಹಾನ ನಾಯಕರ ಆದರ್ಶ ಪಾಲಿಸಲು ನಗರ ಸಬೆಯ ಮಾಜಿ ಅದ್ಯಕ್ಷ ಹಾಗೂ ಹಾಲಿ ಹಿರಿಯ ಸದಸ್ಯ ಅಮಜದ್ ಪಟೇಲ್ ಕರೆ ನೀಡಿದರು.
ಸಮಾರಂಭದ ಅದ್ಯಕ್ಷತೆಯನ್ನು ಮಿಲ್ಲತ್ ಶಿಕ್ಷಣ ಸಂಸ್ಥೆಯ ಅದ್ಯಕ್ಷ ಎಂ.ಡಿ.ಆಸೀಫ ಕರ್ಕಿಹಳ್ಳಿ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಅಂಜುಮನ ಕಮೀಟಿ ಅದ್ಯಕ್ಷ ಎಂ.ಪಾಷಾ ಕಾಟನ್ ಉರ್ದು ಕವಿ ಎಂ.ವಿಜಾರತ್ ಅಲಿ ಗುತ್ತಿಗೆದಾರ ಸಾದಿಕ್ ಶೇಕ್ ಜೆಡಿಯೂ ಮುಖಂಡ ಮಹೆಬೂಬ ಖಾನ್ ಸೈಯದ್ ಬಷಿರದ ಅಹಮದ್ ಅತ್ತಾರ್, ಅಕ್ಬರ್‍ಸಾಬ ಪೊಲಿಸಮನಿ ಮತ್ತು ಹಿರಿಯ ಪತ್ರಕರ್ತ ಎಂ.ಸಾದಿಕ ಅಲಿ ಪಾಲ್ಗೊಂಡಿದ್ದರು.

loading...