ಹಂಪಿ ಉತ್ಸವದಲ್ಲಿ ಜನಮನ ಸೆಳೆದಸಿದ್ದೇಶ್ವರ ತೆಲ್ಲೂರವರ ಕಥಾಕೀರ್ತನ

0
21
loading...

ಗದಗ: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರೂ ಕಲಾಶ್ರೀ ಪ್ರಶಸ್ತಿ ವಿಜೇತರೂ ಆದ ಗದುಗಿನ ವೇ.ಸಿದ್ದೇಶ್ವರ ಶಾಸ್ತ್ರೀಗಳು ತೆಲ್ಲೂರ ಅವರು ವಿಶ್ವ ವಿಖ್ಯಾತ ಹಂಪಿ ಉತ್ಸವದಲ್ಲಿ ನ. 5 ರಂದು ರವಿವಾರ ರಾತ್ರಿ 10-30 ಗಂಟೆಗೆ ಹಂಪಿಯ ಕಡಲೆ ಕಾಳು ಗಣೇಶ ಸಭಾ ಮಂಟಪದಲ್ಲಿ ಪ್ರಸ್ತುತಪಡಿಸಿದ ರಾಮಕೃಷ್ಣ ಪರಮಹಂಸರ ಕುರಿತಾದ ಕಥಾಕೀರ್ತನ ಜನಮನ ಸೆಳೆಯಿತು. ರಾಮಕೃಷ್ಣ ಪರಮಹಂಸರು ಧಾರ್ಮಿಕ, ಆಧ್ಯಾತ್ಮಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅವರ ಬದುಕು ಸಾಧನೆಯನ್ನು ಕಥಾಕೀರ್ತನೆಯ ಮೂಲಕ ಸಿದ್ದೇಶ್ವರ ಶಾಸ್ತ್ರೀಗಳು ತೆಲ್ಲೂರ ಅವರು ವಿಶ್ಲೇಷಿಸಿದರು. ಕಥಾಕೀರ್ತನೆಗೆ ಸುರೇಶ ಮಂಗಳೂರು ವೈಲೀನ್, ಸಂತೋಷ ಜೇವರ್ಗಿ ತಬಲಾ ಹಾಗೂ ತೋಟೇಂದ್ರ ಅಬ್ಬೇತುಮಕೂರ ಅವರ ವೀಣೆಯ ಸಾಥ್ ಮೆರಗು ನೀಡಿತು. ಹಂಪಿ ಐತಿಹಾಸಿಕ ಪ್ರೇಕ್ಷಣಿಯ ತಾಣವಾಗಿ, ಆಧ್ಯಾತ್ಮಿಕ ಕೇಂದ್ರ ಬಿಂದು ಆಗಿ ಸಾಂಸ್ಕøತಿಕ ಕಾರ್ಯಕ್ರಮಗಳ ಮೂಲಕ ಹಂಪಿ ಉತ್ಸವ ಇಂದು ಖ್ಯಾತಿಯನ್ನು ಹೊಂದಿದೆ. ರಾಜ ಮಹಾರಾಜರು ಆಳಿದ ಈ ಕ್ಷೇತ್ರದಲ್ಲಿ ಬಂಗಾರ, ಮುತ್ತು ರತ್ನಗಳ ವೈಭವ ಮೆರೆದ ನಾಡಾಗಿತ್ತು ಕವಿ ಕಲಾವಿದರನ್ನು ಪೋಷಿಸಿದ ಕ್ಷೇತ್ರದಲ್ಲೀಗ ನಡೆದು ಬಂದಿರುವ ಹಂಪಿ ಉತ್ಸವ ಸಾಂಸ್ಕøತಿಕ ಕಲಾಪ್ರಜ್ಞೆಗೆ ಸಾಕ್ಷಿಯಾಗಿದೆ ಎಂದು ಬಣ್ಣಿಸಿದರು. ಕಾರ್ಯಕ್ರಮದಲ್ಲಿ ಬಳ್ಳಾರಿ ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರು ಜನಪ್ರತಿನಿಧಿಗಳು ಅಧಿಕಾರಿಗಳು ಹಾಗೂ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೋಂಡಿದ್ದರು.

loading...