ಹದಗೆಟ್ಟ ರಸ್ತೆ ಸರಿಪಡಿಸುವಂತೆ ಮನವಿ

0
14
loading...

ಕನ್ನಡಮ್ಮ ಸುದ್ದಿ-ಸಿಂದಗಿ: ತಾಲೂಕಿನ ಹಳ್ಳಿಗಳಿಗೆ ಹೋಗುವ ರಸ್ತೆಗಳು ಹದಗೆಟ್ಟಿದ್ದು ಈ ಕಾಮಗಾರಿಗಳನ್ನು ಕಂಡು ಕಾಣದ ಹಾಗೆ ಜಾಣ ಕುರುಡುತನ ಪ್ರದರ್ಶಿಸುತ್ತಿರುವ ಅಧಿಕಾರಿಗಳ ಹಾಗೂ ಶಾಸಕರ ದೊರಣೆ ಖಂಡಿಸಿ ರಣಧೀರಪಡೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಶೀಲ್ದಾರ ಬಿ.ಎಸ್.ಖಡಕಬಾವಿ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಹಾಗೂ ಲೋಕೋಪಯೋಗಿ ಸಚಿವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಉಪಾದ್ಯಕ್ಷ ನಿಂಗರಾಜ ಅತನೂರ ಹಾಗೂ ಉತ್ತರ ವಲಯ ಅಧ್ಯಕ್ಷ ಸಂತೋಷ ಮಣಿಗೇರಿ ಅವರು ಮಾತನಾಡಿ, ಸಿಂದಗಿ ಕ್ಷೇತ್ರದ ಶಾಸಕರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಬಹುತೇಕ ಹಳ್ಳಿಗಳಿಗೆ ಹೊಗುವ ರಸ್ತೆಗಳು ಸಂಪೂರ್ಣ ಹಾಳಾಗಿ ಎಲ್ಲೆಂದರಲ್ಲಿ ತಗ್ಗು-ದಿನ್ನೆಗಳು ತುಂಬಿಕೊಂಡು ಮೂಲ ರಸ್ತೆಗಳೇ ಮಾಯವಾಗಿ ಅಪಘಾತ ನಡೆಯುವ ಕೆಂದ್ರವಾಗಿದೆ ಈ ತಾಲೂಕಿನ ರಸ್ತೆಗಳ ದುರಿಸ್ಥಿಗೆ ಸರಕಾರದಿಂದ ಸಾಕಷ್ಟು ಅನುದಾನ ಬಂದಿದೆ ಆದರೆ ಯಾವುದೇ ಕಾಮಗಾರಿಗಳನ್ನು ಕೈಗೊಳ್ಳದೇ ದಾಖಲೆಗಳಲ್ಲಿ ಮಾತ್ರ ಕಾಮಗಾರಿಗಳು ಮುಗಿದಿವೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಸರಕಾರದ ಹಣ ಪೋಲಾಗಿ ಹೋಗಿದೆ ಎನ್ನುವುದಕ್ಕೆ ಗತ್ತರಗಿ ರಸ್ತೆಯಲ್ಲಿನ ಕುಳೆಕುಮಟಗಿ, ಸಿರಸಗಿ, ಚಿಕ್ಕ ಹಾವಳಗಿ, ಮಲಗಾಣ ದಿಂದ ಸೊಮಜ್ಯಾಳ, ಸಿಂದಗಿಯಿಂದ ಗಣಹಾರ, ಚಾಂದಕವಟೆ, ಅಲ್ಲದೆ ಸಿಂದಗಿಯಿಂದ ರಾಂಪೂರ, ಕೊರಳ್ಳಿ, ಹೂನಳ್ಳಿ ಕ್ರಾಸ್ ಸೇರಿದಂತೆ ತಾಲೂಕಿನ ಅನೇಕ ಗ್ರಾಮಗಳ ರಸ್ತೆಗಳು ಹಾಳಾಗಿರುವುದಕ್ಕೆ ತಾಜಾ ಉದಾಹರಣೆ ಇದಾಗಿದೆ ಜನಪ್ರತಿನಿಧಿಗಳು ಕಣ್ಣೆತ್ತಿ ನೋಡಲಿಲ್ಲದಿದ್ದರೆ ಮುಂದೊಂದು ದಿನ ರಸ್ತೆಗಳನ್ನು ಹುಡುಕಿ ಕೊಡಿ ಎನ್ನುವ ಪ್ರಶ್ನೇ ಉದ್ಬವಿಸುವ ಮುನ್ನ ಕಾಮಗಾರಿ ಕೈಕೊಳ್ಳುವಂತೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ವಿಠ್ಠಲಗೌಡ ಬಿರಾದಾರ, ಯುವರಾಜ ಅಕ್ಕಲಕೋಟ, ನಿಂಗರಾಜ ಹಚಡದ, ಅನೀಲ ಮಾಶ್ಯಾಳ, ಸಾಗರ ಕಟಕದೊಂಡ, ಮೈಬೂಬ ಬಗಲೂರ, ಶಿವಾನಂದ ಪಾಟೀಲ, ಶ್ರೀಧರ ಮೋರಟಗಿ, ಗುರುರಾಜ ದೇವಣಗಾಂವ, ನಾಗರಾಜ ತಳವಾರ, ಸಚೀನ ಹಿರಬಟ್ಟಿ, ದಸ್ತಗೀರ ಕೊಕಟನೂರ, ಶಬ್ಬೀರ ಅವಟಿ, ಅಜೀತ ಕದಂಬ, ಸಿದ್ದು ಮಲಗಾಣ ಸೇರಿದಂತೆ ಹಲವರು ಇದ್ದರು.

loading...