ಹುಕ್ಕೇರಿ ಹಿರೇಮಠದ ಶಾಖಾ ಮಠದಲ್ಲಿ ಮಾಸಿಕ‌ ಸುವಿಚಾರ ಕಾರ್ಯಕ್ರಮಕ್ಕೆ ಕಾಶಿ ಶ್ರೀಗಳ ಆಗಮನ

0
19
loading...

ಕನ್ನಡಮ್ಮ ಸುದ್ದಿ
ಬೆಳಗಾವಿ:30 ನಗರದಲ್ಲಿರುವ ಹುಕ್ಕೇರಿ‌ ಹಿರೇಮಠದ‌‌ ಶಾಖಾದಲ್ಲಿ ಪ್ರತಿ ತಿಂಗಳ ಮೊದಲ ರವಿವಾರ ಮಾಸಿಕ ಸುವಿಚಾರ ಕಾರ್ಯಕ್ರಮವನ್ನು‌ ಹಮ್ಮಿಕೊಳ್ಳಲಾಗಿದೆ.
ಇದೇ ದಿ. 3 ರವಿವಾರ ದಂದು ಮೊದಲ ಮಾಸಿಕ ಸುವಿಚಾರವನ್ನು ಕಾಶಿ ಜಗದ್ಗುರುಗಳ ಸಮ್ಮುಖದಲ್ಲಿ ನಗರದ ಲಕ್ಣ್ಮೀ ಟೆಕಡಿಯಲ್ಲಿ ಹುಕ್ಕೇರಿ ಹಿರೇಮಠದ ಶಾಖಾಮಠದಲ್ಲಿ ಪ್ರಾರಂಭಗೊಳ್ಳಲಿದೆ. ರವಿವಾರ 4 ಗಂಟೆಗೆ ಕಾಶಿ ಜಗದ್ಗುರುಗಳಾದ ಶ್ರೀ ಡಾ. ಚಂದ್ರಶೇಖರ ಮಹಾಸ್ವಾಮಿಗಳು ಸಾನಿದ್ಯ ವಹಿಸಿ ಸುವಿಚಾರ ಎಂಬ ವಿಷಯ ಕುರಿತು ಭಕ್ತಗಣಕ್ಕೆ ಆಶೀರ್ವಚನ ನೀಡಲಿದ್ದಾರೆ.
ಅಧ್ಯಕ್ಷತೆಯನು ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ವಹಿಸಲಿದ್ದಾರೆ‌.ಮಾಸಿಕ ಸುವಿಚಾರದ ಉದ್ಘಾಟನೆಯನ್ನು ಆಸ್ಟ್ರೇಲಿಯಾ ವೀರಶೈವ ಸಮಾಜದ ಸಂಪರ್ಕಾಧಿಕಾರಿಗಳಾದ ವಿಜಯಕುಮಾರ ಹಲಗಲಿ ನೆರವೆರಿಸಲಿದ್ದಾರೆ‌. ಮುಖ್ಯ ಅತಿಥಿಗಳಾಗಿ ಬಳ್ಳಾರಿಯ ಖ್ಯಾತ ವಾಸ್ತು ತಜ್ಞ ಎಚ್.ಶ್ರೀಧರ ಪರಿಮಳಾಚಾರ್ಯ ಆಗಮಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳಬೇಕೆಂದು ಹುಕ್ಕೇರಿ ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದೆ.

loading...